ತಿರುವನಂತಪುರಂ: ಕೆಲವು ದಿನಗಳ ಹಿಂದೆ ಅಲಪ್ಪುಳದ ಸಿಪಿಐ(ಎಂ) ನಾಯಕ ಸಿ ಬಾಬು ಬಿಜೆಪಿ ಸೇರಿದ ಬಳಿಕ ಮತ್ತೊಬ್ಬ ಸಿಪಿಐ(ಎಂ) ಮುಖಂಡ ಮಂಗಳವಾರ ಬಿಜೆಪಿ ಸೇರಿದ್ದಾರೆ.
42 ವರ್ಷಗಳ ಕಾಲ ಸಿಪಿಐ(ಎಂ) ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಧು ಮುಲ್ಲಶೇರಿ ಬಿಜೆಪಿ ಸೇರಿದ್ದಾರೆ.
ಇವರು ಮಂಗಳಪುರಂನ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ಶಿಸ್ತು ಉಲ್ಲಂಘನೆ ಆರೋಪದಲ್ಲಿ ಮುಲ್ಲಶೇರಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇಂದು ಬೆಳಗ್ಗೆ ಕೇಂದ್ರ ಸಚಿವ ಸುರೇಶ್ ಗೋಪಿ, ಮಾಜಿ ಕೇಂದ್ರ ಸಚಿವ ಮುರಳೀಧರನ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷ ಸೇರಿದರು.
ಕಳೆದ ನಾಲ್ಕು ದಿನಗಳಲ್ಲಿ ಸಿಪಿಐ(ಎಂ) ಪಕ್ಷದಿಂದ ಇಬ್ಬರು ಪ್ರಮುಖ ನಾಯಕರು ಬಿಜೆಪಿ ಸೇರಿದ್ದಾರೆ.