HEALTH TIPS

ಪಳ್ಳಿಕೆರೆ ಬೀಚ್ ಪಾರ್ಕ್‍ನಲ್ಲಿ ಬೀಚ್ ಕಾರ್ನಿವಲ್-ಸಚಿವ ಮಹಮ್ಮದ್ ರಿಯಾಸ್ ಚಾಲನೆ

ಕಾಸರಗೋಡು: ಐತಿಹಾಸಿಕ ಬೇಕಲ ಕೋಟೆ ಸನಿಹದ ಬೇಕಲ ಬೀಚ್ ಪಾರ್ಕ್‍ನಲ್ಲಿ ಡಿ.21ರಿಂದ 31ರವರೆಗೆ ನಡೆಯುವ ಬೇಕಲ ಬೀಚ್ ಕಾರ್ನಿವಲ್‍ಗೆ ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಚಾಲನೆ ನೀಡಿದರು. 

ಹತ್ತು ಮೀನುಗಾರಿಕಾ ದೋಣಿಗಳೊಂದಿಗೆ ಪಳ್ಳಿಕೆರೆ ಕಡಪ್ಪುರದಿಂದ ಮಾರ್ಟಿನ್ ಅವರ ನೇತೃತ್ವದಲ್ಲಿ ಆಗಮಿಸಿದ ಜ್ಯೋತಿಯನ್ನು ಖ್ಯಾತ ಟ್ರಾವೆಲ್ ಬ್ಲಾಗರ್ ಅಸ್ಲಾಂ ಒ.ಎಂ ಅವರು ಸಚಿವ ಮಹಮ್ಮದ್ ರಿಯಾಸ್ ಅವರಿಗೆ ಹಸ್ತಾಂತರಿಸಿದರು. ಬೀಚ್ ಕಾರ್ನಿವಲ್ ಮುಖ್ಯ ಪೆÇೀಷಕ ಮತ್ತು ಪಳ್ಳಿಕ್ಕರ ಪಂಚಾಯಿತಿ ಅಧ್ಯಕ್ಷ ಎಂ ಕುಮಾರನ್, ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್, ಬೀಚ್‍ಕಾರ್ನಿವಲ್ ಅಧ್ಯಕ್ಷ ಕೆ.ಕೆ.ಅಬ್ದುಲ್ ಲತೀಫ್, ಉಪಾಧ್ಯಕ್ಷ ಅನಸ್ ಮುಸ್ತಫಾ,  ಸಹ ಸಂಚಾಲಕ ಸೈಫುದ್ದೀನ್ ಕಳನಾಡ್, ಫಾರೂಕ್ ಕಾಸ್ಮಿ, ಬಿಆರ್‍ಡಿಸಿ ವ್ಯವಸ್ಥಾಪಕರಾದ ಯು.ಎಸ್.ಪ್ರಸಾದ್, ರವೀಂದ್ರನ್ ಕೆ.ಎಂ, ಕೆ.ಎನ್.ಸಜಿತ್, ಹಕೀಂ ಕುನ್ನಿಲ್ ಮೊದಲಾದವರು ಉಪಸ್ಥಿತರಿದ್ದರು.

30,000 ಚದರ ಅಡಿ ವಿಸ್ತೀರ್ಣದ ಈವೆಂಟ್‍ನಲ್ಲಿ 11 ದಿವಸಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಗಾಯಕರು ಮತ್ತು ನೃತ್ಯಗಾರರನ್ನು ಒಳಗೊಂಡ ಸಾಂಸ್ಕøತಿಕ ಕಾರ್ಯಕ್ರಮ, ಕಾರ್ನೀವಲ್ ಅಲಂಕಾರಗಳು, ಬೀದಿ ಪ್ರದರ್ಶನ, ಪೆಟ್ ಫಾಸ್ಟ್, 30 ಒಳಾಂಗಣ ಆಟದ ಆರ್ಕೇಡ್ ಆಟಗಳು, ಜೋಡಿ ಸ್ವಿಂಗ್, ಸ್ಕೈ ಸೈಕ್ಲಿಂಗ್, ವಾಲ್ ಕ್ಲೈಂಬಿಂಗ್, ಜಿಪ್ ಲೈನ್, ಸ್ಪೀಡ್ ಬೋಟ್, ತೇಲುವ ಸೇತುವೆ, ಫುಡ್ ಕೋರ್ಟ್, ಪುರಾತನ ವಸ್ತುಗಳು ಮತ್ತು ಮಿಲಿಟರಿ ಉಪಕರಣಗಳ ಪ್ರದರ್ಶನ, ಸ್ಟುಡಿಯೋ, ಅಮ್ಯೂಸ್‍ಮೆಂಟ್ಸ್, ಆಟೋ ಎಕ್ಸ್‍ಪೆÇೀ, ಫುಡ್ ಸ್ಟ್ರೀಟ್‍ಶಾಪಿಂಗ್ ಬೇಕಲ್ ಬೀಚ್ ಕಾರ್ನಿವಲ್ ರಂಗೇರಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries