HEALTH TIPS

ಪಿಂಚಣಿ ಮೊತ್ತದಲ್ಲಿ ಹೆಚ್ಚಳವಾಗದೆ ಸಂಕಷ್ಟ-ಕೆಎಸ್ಸಾರ್ಟಿಸಿ ಪಿಂಚಣಿದಾರರಿಂದ ಅನಿರ್ಧಿಷ್ಟವಧಿ ಮುಷ್ಕರ

ತಿರುವನಂತಪುರ :ಕಳೆದ 13ವರ್ಷಗಳಿಂದ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗದಿರುವುದರಿಂದ ಕೆಎಸ್ಸಾರ್ಟಿಸಿ ಪಿಂಚಣಿದಾರರ ಬದುಕು ದುಸ್ತರವಾಗಿದ್ದು, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಡಿ. 3ರಂದು ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ವ್ಯಾಪಕವಾಗಿ ನಡೆಯುವ ಧರಣಿಯನ್ನು ಅದೇ ದಿನ ಕಾಸರಗೋಡಿನಲ್ಲೂ ಹಮ್ಮಿಕೊಂಡಿರುವುದಾಗಿ ಕೆಎಸ್ಸಾರ್ಟಿಸಿ ಪಿಂಚಣಿದಾರರ ಸಂಘಟನೆ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ವಿ ಕುಞÂರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಘಟನೆಗಳು ನಡೆಸಿದ ಹೋರಾಟದನ್ವಯ ಕೆಎಸ್ಸಾರ್ಟಿಸಿ ನೌಕರರೂ ಪಿಂಚಣಿ ಪಡೆಯಲಾಗುತ್ತಿದ್ದರೂಘಿಂದಿಗೂ ಕನಿಷ್ಠ ಮೊತ್ತವನ್ನು ಮಾತ್ರ ಪಿಂಚಣಿಯಾಗಿ ವಿತರಿಸಲಾಗುತ್ತಿದೆ. ಕಳೆದ 6 ವರ್ಷಗಳಿಂದ ಉತ್ಸವಭತ್ತೆಯನ್ನೂ  ನೀಡಲಾಗಿಲ್ಲ. ಕೇವಲ 1350 ರೂಪಾಯಿ ಮಾತ್ರ ಪಿಂಚಣಿಯಾಗಿ ಪಡೆಯುತ್ತಿರುವ ಎಕ್ಸ್ ಗ್ರೇಷಿಯಾ ಪಿಂಚಣಿದಾರರ ಸಂಕಷ್ಟವನ್ನು ಸರ್ಕಾರ ಅಥವಾ ಆಡಳಿತ ಮಂಡಳಿ ಕಂಡೂಕಾಣದಂತೆ ವರ್ತಿಸುತ್ತಿರುವುದು ಖಂಡನೀಯ.   

ಸಾರಿಗೆ ಸಂಸ್ಥೆ ರಚನೆಯಾದಾಗಿನಿಂದಲೂ ನೌಕರರ ವೇತನವು ಕಾರ್ಮಿಕ ಸಂಘಟನೆಗಳು ಮತ್ತು ಆಡಳಿತ ಮಂಡಳಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಪಿಂಚಣಿದಾರರನ್ನು ಹೊರತುಪಡಿಸಿ, ಕೇವಲ ವೇತನ ಪರಿಷ್ಕರಣೆ ನಡೆಸುತ್ತಿದೆ.  ಪಿಂಚಣಿ ಪರಿಷ್ಕರಣೆಯನ್ನು ಮುಂದೂಡುತ್ತಾ ಬರುತ್ತಿರುವ ಸರ್ಕಾರ ಹಾಗೂ ಮಂಡಳಿಯ ತೀರ್ಮಾನ ಖಂಡನೀಯ. ನೀಡುತ್ತಿರುವ ಕನಿಷ್ಠ ಪಿಂಚಣಿಯನ್ನು ಸಕಾಲಕ್ಕೆ ನೀಡದೆ ಸತಾಯಿಸುತ್ತಿದ್ದು, ಇದರಿಂದ ಪಿಂಚಣಿಯನ್ನೇ ಆಶ್ರಯಿಸಿರುವ ನಿವೃತ್ತ ನೌಕರರು ಸಂಕಷ್ಟ ಅನುಭವಿಸುವಂತಾಗಿದೆ. ಪಿಂಚಣಿ ವಿತರಣೆಯನ್ನು ಸರ್ಕಾರವೇ ಕ್ಯಗೆತ್ತಿಕೊಂಡು ಪ್ರತಿ ತಿಂಗಳ ಒಂದನೇ ತಾರೀಕಿಗೆ ವಿತರಸಬೇಕು, ವೇತನ ಪರಿಷ್ಕರಣೆಯ ಅದೇ ಮಾನದಂಡದಲ್ಲಿ ಪಿಂಚಣಿಯನ್ನೂ ಒಳಪಡಿಸಬೇಕು, ಕಡಿತಗೊಳಿಸಿದ ಶೇ.3 ಕ್ಷಾಮಭತ್ತೆ ಶೀಘ್ರ ವಿತರಿಸಬೇಕು, ಓಣಂ ಉತ್ಸವ ಭತ್ತೆಯನ್ನು ಕೆಎಸ್ಸಾರ್ಟಿಸಿ ಪಿಂಚಣಿದಾರರಿಗೂ ಒದಗಿಸಬೇಕು, 2022ರಲ್ಲಿ ನಿವೃತ್ತರಾಗಿರುವ ನ್ವಕರರ ಪಿಂಚಣಿ ಸಮಸ್ಯೆ ಪರಿಹರಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ರಾಜ್ಯವ್ಯಾಪಕವಾಗಿ ಧರಣಿ ನಡೆಯಲಿದೆ. ಡಿ. 3ರಂದು ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋ ಎದುರು ಧರಣಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಸಂಘಟನ ಕಾರ್ಯದರ್ಶಿ ಗಣೇಶ್ ಕೆ, ಜಿಲ್ಲಾಧ್ಯಕ್ಷ ನಾರಾಯಣ್. ವಿ.ಪಿ ಹಾಗೂ ಘಟಕ ಕಾರ್ಯದರ್ಶಿ ರಾಮಕೃಷ್ಣನ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries