ಕಾಸರಗೋಡು: ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಎತ್ತಿ ಹಿಡಿದು ಕಾರ್ಮಿಕ ಭದ್ರತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಎ.ಐ.ಟಿ.ಯು.ಸಿ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನದ ಪ್ರಚಾರಾರ್ಥವಾಗಿ ಆಯೋಜಿಸಲಾದ ಉತ್ತರ ಪ್ರಾಂತ ಜಾಥಾ ಕಾಸರಗೋಡಿನಿಂದ ಆರಂಭಗೊಮoತು.
ಕಾಸರಗೋಡಿನ ಚಂದ್ರಗಿರಿ ಜಂಕ್ಷನ್‍ನಲ್ಲಿ ಆಯೋಜಿಸಲಾದ ಸಮರಂಭದಲ್ಲಿ ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಜಾಥಾ ನಾಯಕ ಪಿ.ಸಂತೋಷ್ ಕುಮಾರ್ ಎಐಟಿಯುಸಿ ರಾಜ್ಯಾಧ್ಯಕ್ಷ ಟಿ.ಜೆ.ಆಂಜೆಲೋಸ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ವಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ರಾಜ್ಯ ಜತೆ ಕಾರ್ಯದರ್ಶಿ, ಶಾಸಕ ಇ.ಚಂದ್ರಶೇಖರನ್, ಜಾಥಾ ನಾಯಕ ಟಿ.ಜೆ.ಆಂಜೆಲೋಸ್, ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಬಾಬು, ಎಐಟಿಯುಸಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಎಸ್.ಕುರಿಯಾಕೋಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣನ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಸಂಚಾಲಕ ಬಿಜು ಉಣ್ಣಿತ್ತಾನ್ ಸ್ವಾಗತಿಸಿದರು. ಉತ್ತರ ವಲಯ ಜಾಥಾದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಕೆ.ಕೆ.ಅಶ್ರಫ್ ವೈಸ್ ಕ್ಯಾಪ್ಟನ್ ಹಾಗೂ ಕೆ.ಜಿ.ಶಿವಾನಂದನ್ ನಿರ್ದೇಶಕರಾಗಿದ್ದು, ಆರ್.ಪ್ರಸಾದ್, ಪಿ.ಸುಬ್ರಮಣಿಯನ್, ವಿಜಯನ್ ಕುಣಿಶ್ಯೇರಿ, ಕೆ.ವಿ.ಕೃಷ್ಣನ್, ಸಿ.ಕೆ.ಶಶಿಧರನ್, ಚೆಂಗಾರ ಸುರೇಂದ್ರನ್, ತಾವಂ ಬಾಲ ಕೃಷ್ಣನ್, ಪಿ.ಕೆ.ಮೂರ್ತಿ, ಕೆ.ಸಿ.ಜಯಪಾಲನ್, ಕೆ.ಮಲ್ಲಿಕಾ, ಎಲ್ಜಬೆತ್ ಅಡಿಸಿ, ಪಿ.ಕೆ. ನಾಸರ್ ಸದಸ್ಯರಾಗಿರುವರು. ಜಾಥಾ ಕಾಸರಗೋಡು ಜಿಲ್ಲೆಯ ಪ್ರವಾಸದ ನಂತರ ಕಣ್ಣೂರು ಜಿಲ್ಲೆ ಪ್ರವೇಶಿಸಲಿದ್ದು, 17ರಂದು ತ್ರಿಶೂರ್‍ನಲ್ಲಿ ಸಮಾರೋಪಗೊಳ್ಳಳಿದೆ.