ನವದೆಹಲಿ: 'ಈ ಬಾರಿಯ ಲೋಕಸಭೆ ಚುನಾವಣೆ ಮತದಾನದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ' ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ.
'ಚುನಾವಣೆಯಲ್ಲಿ ಒಟ್ಟು 64.64 ಕೋಟಿ ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಶೇ 65.78ರಷ್ಟು ಮಹಿಳೆಯರು ಹಾಗೂ ಶೇ 65.55ರಷ್ಟು ಪುರುಷರು ತಮ್ಮ ಹಕ್ಕು ಚಲಾಯಿಸಿದ್ದಾರೆ' ಎಂದು ಹೇಳಿದೆ.
'2019ರ ಲೋಕಸಭಾ ಚನಾವಣೆಯಲ್ಲಿ 726 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ 800 ಮಹಿಳೆಯರು ಸ್ಪರ್ಧಿಸಿದ್ದರು' ಎಂದೂ ಮಾಹಿತಿ ನೀಡಿದೆ.
ಆಯೋಗವು ಬಿಡುಗಡೆ ಮಾಡುವ ಮತದಾನ ಪ್ರಮಾಣ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.