ಮುಳ್ಳೇರಿಯ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬಂದಡ್ಕ ಶಾಖೆಯ ಸಕ್ರಿಯ ಸದಸ್ಯ ಮೋನಪ್ಪ ಗೌಡ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 50,000 ರೂ. ಸಹಾಯ ಧನದ ಚೆಕ್‍ನ್ನು ಸಂಸ್ಥೆಯ ನಿರ್ದೇಶಕ ಜಯರಾಮ ಸರಳಾಯ ಹಸ್ತಾಂತರಿಸಿದರು.
ಕಳೆದ ಕೆಲವು ವರ್ಷಗಳಿಂದ ಕ್ಯಾಂಪ್ಕೋ ಸಂಸ್ಥೆಯು ಸದಸ್ಯರ ಆರೋಗ್ಯದತ್ತ ಗಮನಹರಿಸಿ ಈ ಕಾರ್ಯವನ್ನು ಕೈಗೊಂಡಿರುವುದು ಕೃಷಿಕರಿಗೆ ಆಶಾದಾಯಕವಾಗಿದೆ. ಈಗಾಗಲೇ ಅನೇಕ ಸದಸ್ಯರ ಚಿಕಿತ್ಸೆಗೆ ಸಹಾಯಧನವನ್ನು ನೀಡಲಾಗಿದೆ. ಫಲಾನುಭವಿ ಸದಸ್ಯರ ಮನೆಯಲ್ಲಿ ಚೆಕ್ ಹಸ್ತಾಂತರದ ಸಂದರ್ಭ ಸಂಸ್ಥೆಯ ಮಾಜಿ ನಿರ್ದೇಶಕ ನ್ಯಾಯವಾದು ಕರುಣಾಕರನ್ ನಂಬಿಯಾರ್, ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಬಂದಡ್ಕ ಶಾಖೆಯ ವ್ಯವಸ್ಥಾಪಕ ಪ್ರೇಮ್ ಕುಮಾರ್ ಬಿ. ಉಪಸ್ಥಿತರಿದ್ದರು.