ಢಾಕಾ: ಬಲವಂತದ ನಾಪತ್ತೆ, ಚಿತ್ರಹಿಂಸೆ ಸೇರಿದಂತೆ ಹತ್ಯೆ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕೈವಾಡವಿದೆ ಎಂದು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚಿಸಿರುವ ತನಿಖಾ ಆಯೋಗವು ತಾತ್ಕಾಲಿಕ ವರದಿಯಲ್ಲಿ ತಿಳಿಸಿದೆ.
ಶೇಖ್ ಹಸೀನಾ ವಿರುದ್ಧ 3,500ಕ್ಕೂ ಹೆಚ್ಚು ಬಲವಂತದ ನಾಪತ್ತೆ ಪ್ರಕರಣಗಳು ಕೇಳಿಬಂದಿವೆ ಎಂದು ತನಿಖಾ ಆಯೋಗವು ವರದಿಯಲ್ಲಿ ಹೇಳಿದೆ.