ಕುಂಬಳೆ: ಕಾಸರಗೋಡಿನಿಂದ ಮಲೆನಾಡು ಹೆದ್ದಾರಿ ಮೂಲಕ ಮುಡಿಪು ತನಕ ಅಂತಾರಾಜ್ಯ ಖಾಸಗಿ ಬಸ್ ಸಂಚಾರ ಶುಕ್ರವಾರ ಆರಂಭಗೊಂಡಿತು.
ಜಿಲ್ಲೆಯ ಜನಪ್ರಿಯ ವಾಹನ ಸಂಚಾರ ಸಂಸ್ಥೆಯಾದ(ಟ್ರಾವೆಲ್ಸ್) ಮಹಾಲಕ್ಷ್ಮೀ ಟ್ರಾವೆಲ್‍ಗೆ ಸೇರಿದ ಅತ್ಯಾಧುನಿಕ ಮಾದರಿಯ ಖಾಸಗಿ ಬಸ್ ಗಳೆರಡು ಶುಕ್ರವಾರದಿಂದ ಸೇವೆ ಆರಂಭಿಸಿತು.
ಒಂದು ಬಸ್ ಪ್ರತಿನಿತ್ಯ ಬೆಳಗ್ಗೆ 6.25ಕ್ಕೆ ಪೆರ್ಮುದೆಯಿಂದ ಸೇವೆ ಆರಂಭಿಸಿ ಕಾಸರಗೋಡಿಗೆ 7.23ಕ್ಕೆ ತಲುಪಲಿದೆ. ಕಾಸರಗೋಡಿನಿಂದ 7.42ಕ್ಕೆ ಸೇವೆ ಆರಂಭಿಸಿ 9ಗಂಟೆಗೆ ಪೆರ್ಮುದೆ ದಾರಿಯಾಗಿ 10.30ಕ್ಕೆ ಮುಡಿಪು ತಲುಪಲಿದೆ. ಮುಡಿಪುವಿನಿಂದ 11.30ಕ್ಕೆ ಹೊರಟು ಮಧ್ಯಾಹ್ನ 12.50ಕ್ಕೆಪೆರ್ಮುದೆ ಮೂಲಕ 1.48ಕ್ಕೆ ಕಾಸರಗೋಡಿಗೆ ತಲುಪಲಿದೆ. ಅಪರಾಹ್ನ 2.05ಕ್ಕೆ ಕಾಸರಗೋಡಿನಿಂದ ಹೊರಟು 3.03ಕ್ಕೆ ಪೆರ್ಮುದೆ ಮೂಲಕ ಸಂಜೆ 4.30ಕ್ಕೆ ಮುಡಿಪು ತಲುಪಲಿದೆ. ಮುಡಿಪಿನಿಂದ 5.05ಕ್ಕೆ ಹೊರಟು ಪೆರ್ಮುದೆಗೆ 6.25ಕ್ಕೆ ತಲುಪಿ ಕಾಸರಗೋಡಿಗೆ ರಾತ್ರಿ 7.23ಕ್ಕೆ ಆಗಮಿಸಲಿದೆ. 7.35ಕ್ಕೆ ಕಾಸರಗೋಡಿನಿಂದ ಹೊರಟು 8.33ಕ್ಕೆ ಪೆರ್ಮುದೆ ತಲುಪಿ ಹಾಲ್ಟ್ ಆಗಲಿದೆ.
ಇನ್ನೊಂದು ಬಸ್ ದಿನಂಪ್ರತಿ ಕುಂಬಳೆಯಿಂದ ಬೆಳಗ್ಗೆ 7.12ಕ್ಕೆ ಹೊರಟು 8ಗಂಟೆಗೆ ಪೆರ್ಮುದೆ ಮೂಲಕ 9.30ಕ್ಕೆ ಮುಡಿಪು ತಲುಪಲಿದೆ. ಮುಡಿಪು ನಿಂದ 10.20ಕ್ಕೆ ಹೊರಟು ಪೆರ್ಮುದೆಗೆ 11.50ಕ್ಕೆ ತಲುಪಿ ಮಧ್ಯಾಹ್ನ 12.50ಕ್ಕೆ ಕಾಸರಗೋಡಿಗೆ ಆಗಮಿಸಲಿದೆ. ಕಾಸರಗೋಡಿನಿಂದ 1.15ಕ್ಕೆ ಟ್ರಿಪ್ ಆರಂಭಿಸಿ ಅಪರಾಹ್ನ 2.13ಕ್ಕೆ ಪೆರ್ಮುದೆಗೆ ತಲುಪಿ 3.40ಕ್ಕೆ ಮುಡಿಪು ಸೇರಲಿದೆ. ಮುಡಿಪುನಿಂದ ಸಂಜೆ 4.10ಕ್ಕೆ ಹೊರಟು 5.40ಕ್ಕೆ ಪೆರ್ಮುದೆ ಮೂಲಕ ತಲುಪಿ ಕುಂಬಳೆಯಲ್ಲಿ 7.30ಕ್ಕೆ ಹಾಲ್ಟ್ ಆಗಲಿದೆ.
ಕಾಸರಗೋಡಿನಿಂದ ವಿದ್ಯಾನಗರ - ಉಳಿಯತ್ತಡ್ಕ - ಸೀತಾಂಗೋಳಿ- ಅಂಗಡಿಮೊಗರು-ಪೆರ್ಮುದೆ ಚೇವಾರು- ಪೈವಳಿಕೆ - ಬಾಯಿಕಟ್ಟೆ - ಮೀಯಪದವು- ಮೊರತ್ತಣೆ - ಮಜೀರ್‍ಪಳ್ಳ - ಪಾವಳ- ಮೂರುಗೋಳಿ ಹೂಹಾಕುವಕಲ್ಲು ಮೂಲಕ ಮುಡಿಪು ರೂಟ್‍ನಲ್ಲಿ ಈ ಬಸ್‍ಗಳು ಸಂಚಾರ ನಡೆಸಲಿವೆ. ಕಾಸರಗೋಡು ಜಿಲ್ಲೆಯ ಗ್ರಾಮೀಣ ಭಾಗಗಳ ಮೂಲಕವೇ ಬಸ್ ಸರ್ವೀಸ್ ನಡೆಯಲಿದ್ದು, ಈ ಮೂಲಕ ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರಿಂದ ಪ್ರಯಾಣಿಕರು ಸಂತಸಗೊಂಡಿದ್ದು, ಬಸ್‍ಗಳ ಆಗಮನವನ್ನು ಸ್ವಾಗತಿಸಿದ್ದಾರೆ.
ಏನಿತ್ತು ಅಡೆತಡೆ?:
ಮಲೆನಾಡ ಸಂಚಾರ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತ ಪ್ರಶಂಸೆ ವ್ಯಕ್ತವಾಗಿತ್ತು. ಈ ಮಧ್ಯೆ ಕಾಸರಗೋಡು-ಉಳಿಯತ್ತಡ್ಕ-ಸೀತಾಂಗೋಳಿ ನಡುವೆ ಸಂಚರಿಸುವ ಖಾಸಗೀ ಬಸ್ ಮಾಲಕರು ಮಲೆನಾಡ ಸಂಚಾರಕ್ಕೆ ತಡೆನೀಡಿದರು. ಗುರುವಾರ ಸಂಜೆ ಆರ್.ಟಿ.ಒ.ಕಚೇರಿಯಲ್ಲಿ ಬಹಳಷ್ಟು ಚರ್ಚೆ, ವಾದ-ಪ್ರತಿವಾದಗಳ ಬಳಿಕ ಕೊನೆಗೂ ಸಂಚಾರ ಅನುಮತಿ ನೀಡಲಾಗಿತ್ತು.
ಅಭಿಮತ: :
-ಕಾಸರಗೋಡು ಜಿಲ್ಲೆಯ ಜನರ ಪ್ರಯಾಣ ಸಮಸ್ಯೆಗೆ ಪರಿಹಾರ ಒದಗಿಸುವುದು ಮುಖ್ಯ ಗುರಿಯಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಲಭಿಸುವಂತೆ ಮಾಡಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಪ್ರಯಾಣಕ್ಕೆ ಸಂಬಂಧಿಸಿ ಯಾವುದೇ ರೀತಿಯ ತೊಂದರೆಗಳಾಗದಂತೆ ಗ್ರಾಮೀಣ ಪ್ರದೇಶಗಳಲ್ಲೇ ಬಸ್ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಇನ್ನಿತರ ಭಾಗಗಳಿಗೂ ಬಸ್ ಸೇವೆ ಒದಗಿಸುವ ಸಂಕಲ್ಪ ಹೊಂದಲಾಗಿದೆ.
-ವಿಠಲ ಶೆಟ್ಟಿ ಕುದ್ವ, ಮಾಲಕರು, ಮಹಾಲಕ್ಷ್ಮೀ ಟ್ರಾವೆಲ್ಸ್.
ಚಿತ್ರ ಮಾಹಿತಿ:
1) ಸಂಚಾರ ಆರಂಭ ಗೊಂಡ ಶ್ರೀ ಮಹಾಲಕ್ಷ್ಮಿ ಬಸ್ಸನ್ನು ಮೀಯಪದವಿನಲ್ಲಿ ಮೀಂಜ ಪಂಚಾಯತ್, ಶ್ರೀ ವಿದ್ಯಾವರ್ಧಕ ಶಾಲೆ ಹಾಗೂ ಊರಿನ ಸಮಸ್ತ ಜನಸ್ತೋಮದ ಪರವಾಗಿ ಆರತಿ ಹೂ ನೀಡಿ ಸ್ವಾಗತಿಸಲಾಯಿತು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ ಬಸ್ಸಿನ ಚಾಲಕ ಮತ್ತು ಕಂಡಕ್ಟರಿಗೆ ಶಾಲು ಹಾಕಿ ಸ್ವಾಗತ ಕೋರಿದರು.ಮೀಂಜ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ವಾರ್ಡು ಸದಸ್ಯರು,ಬ್ಲೋಕ್ ಪಂಚಾಯತ್ ಸದಸ್ಯರು, ಮೀಯಪದವು ಶಾಲಾ ಸಂಚಾಲಕರಾದ ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ, ಶ್ರೀಧರ್ ರಾವ್ ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಅಧ್ಯಾಪಕ ವೃಂದ, ಊರ ಸಮಸ್ತ ನಾಗರಿಕರು, ವಿದ್ಯಾರ್ಥಿಗಳು ಆಗಮಿಸಿದ ಬಸ್ಸಿಗೆ ಸ್ವಾಗತವನ್ನು ಕೋರಿದರು.
2) ಕಾಸರಗೋಡು ಣo ಮುಡಿಪು ಮಲೆನಾಡು ಹೆದ್ದಾರಿಯಲ್ಲಿ ಹೊಸದಾಗಿ ಆರಂಭಿಸಿದ ಮಹಾಲಕ್ಷ್ಮಿ ಟ್ರಾವೆಲ್ಸ್ ಸಂಸ್ಥೆಯ ಬಸ್ಸಿಗೆ ಮೀಯಪದವು ಬೆರಿಕೆಯಲ್ಲಿ ಮೃತ್ಯುಂಜಯ ಯುವಕ ವೃಂದ ಕಲ್ಲಗದ್ದೆ ಇದರ ವತಿಯಿಂದ ಸಂಘದ ಗೌರವಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತ್ತೋಡಿ ಚಾಲನೆ ನೀಡಿದರು.
3) ಪೈವಳಿಕೆ - ಕಳ್ಳಿಗೆ ಮೇಲ್ಕಾರ್ ಮಾರ್ಗವಾಗಿ ಮುಡಿಪಿಗೆ ಹೊಸದಾಗಿ ಪ್ರಾರಂಭವಾದ ಮಹಾಲಕ್ಷ್ಮಿ ಬಸ್ಸಿಗೆ ಕಳ್ಳಿಗೆ ಮೇಲ್ಕಾರ್ ನಲ್ಲಿ ಅಣ್ಣ ದೈವ ಶ್ರೀ ಅರಸು ಮೇಲ್ಕಾರ್ ಸೇವಾ ಸಮಿತಿ, ಪಂಚಾಯತ್ ಪ್ರತಿನಿಧಿ ಹಾಗು ಊರವರಿಂದ ಭವ್ಯ ಸ್ವಾಗತ ಕೋರಲಾಯಿತು. ಬಸ್ಸಿನ ಮಾಲಕರು ಹಾಗು ಸಿಬ್ಬಂದಿಗಳಿಗೆ ಕೃತಜ್ಞತಾಪೂರ್ವಕ ಶಾಲು ಹೊದೆಸಿ ಸನ್ಮಾನಿಸಲಾಯಿತು.