ಢಾಕಾ: ಅಗರ್ತಲಾದ ಅಸಿಸ್ಟೆಂಟ್ ಹೈ ಕಮಿಷನ್ ಮೇಲೆ ಗುಂಪೊಂದು ನಡೆಸಿದ ಹಿಂಸಾತ್ಮಕ ದಾಳಿಯನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ಖಂಡಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
'ಪ್ರತಿಭಟನಕಾರರು ಒಳಗೆ ನುಗ್ಗಿ, ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿಯ ಗೇಟ್ ಮುರಿದುಹಾಕಿದರು.
ಧ್ವಜಸ್ತಂಭ ಹಾಳು ಮಾಡಿ, ಬಾಂಗ್ಲಾದೇಶದ ಧ್ವಜವನ್ನು ವಿರೂಪಗೊಳಿಸಿದರು. ಪೂರ್ವಯೋಜಿತ ರೀತಿಯಲ್ಲಿ ನಡೆದ ಈ ಕೃತ್ಯವನ್ನು ಹತ್ತಿಕ್ಕುವಲ್ಲಿ ಸ್ಥಳೀಯ ಭದ್ರತಾ ಸಿಬ್ಬಂದಿ ವಿಫಲರಾದರು. ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು' ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆಯ ಮೂಲಕ ತಿಳಿಸಿದೆ.