ಕಾಸರಗೋಡು: ನಗರದ ಸೂರ್ಲು ಪ್ರದೇಶದಲ್ಲಿ ರಸ್ತೆಯಲ್ಲಿ ಬಿಯರ್ ಬಾಟಲಿ ಎಸೆದು ಪುಡಿಗೈದು ದಾಂಧಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮನೀಶ್, ಅಬಿ ಸೇರಿದಂತೆ ಮೂವರಿಗೆ ಕೇಸು. ಬೈಕಲ್ಲಿ ಸಂಚರಿಸುತ್ತಿದ್ದ ಯುವಕರು ಹಾಗೂ ಸ್ಥಳದಲ್ಲಿದ್ದ ಯುವಕರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಬಾಟಲಿ ಎಸೆದು ಪುಡಿಗೈದು ಘರ್ಷಣೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ಆರಂಭದಲ್ಲಿ ಬೈಕಲ್ಲಿ ತೆರಳುತ್ತಿದ್ದವರು ಹಾಗೂ ಸ್ಥಳದಲ್ಲಿದ್ದ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ನಂತರ ತಂಡ ವಾಪಸಾಗಿ ಬಾಟಲಿ ಒಡೆದು ದಾಂಧಲೆ ನಡೆಸಿದ್ದರೆನ್ನಲಾಗಿದೆ. ಸೂಕ್ಷ್ಮ ಪ್ರದೇಶ ಇದಾಗಿದ್ದು, ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.