HEALTH TIPS

ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದಲ್ಲಿ ಭಾರಿ ಅರಣ್ಯ ನಾಶ

ನವದೆಹಲಿ: ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಕಳೆದ ಹತ್ತು ವರ್ಷಗಳಲ್ಲಿ 58.22 ಚದರ ಕಿ.ಮೀ ಅರಣ್ಯ ನಾಶವಾಗಿದೆ ಎಂದು ಡೆಹ್ರಾಡೂನ್‌ನಲ್ಲಿ ಶನಿವಾರ ಬಿಡುಗಡೆಯಾದ ಭಾರತೀಯ ಅರಣ್ಯದ ಸ್ಥಿತಿಗತಿ (ಐಎಸ್‌ಎಫ್‌) ವರದಿ ಹೇಳಿದೆ.

ಈ ಅವಧಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿ, ಅತ್ಯಂತ ದಟ್ಟಾರಣ್ಯ ಗಳು 3,465.12 ಚ.ಕಿ.ಮೀಗಳಷ್ಟು ಹೆಚ್ಚಾದರೆ, ಮಧ್ಯಮ ದಟ್ಟಾರಣ್ಯಗಳು ಮತ್ತು ತೆರೆದ ಅರಣ್ಯಗಳು ಕ್ರಮವಾಗಿ 1,043.23 ಚದರ ಕಿ.ಮೀ ಮತ್ತು 2,480.11 ಚ.ಕಿ.ಮೀ ಕಡಿಮೆಯಾಗಿವೆ ಎಂದು ಭಾರತೀಯ ಅರಣ್ಯ ಸಮೀಕ್ಷೆ ಸಿದ್ಧಪಡಿಸಿದ ಈ ವರದಿ ತಿಳಿಸಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಆರು ರಾಜ್ಯಗಳ 45 ಘಟ್ಟ ಜಿಲ್ಲೆಗಳ ಪೈಕಿ ಮಧ್ಯಮ ದಟ್ಟಾರಣ್ಯ ಹಾಗೂ ತೆರೆದ ಅರಣ್ಯ ಹೊಂದಿದ 25 ಜಿಲ್ಲೆಗಳು ಅರಣ್ಯ ನಾಶಕ್ಕೆ ಸಾಕ್ಷಿಯಾಗಿವೆ. ಗರಿಷ್ಠ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಕಳೆದುಕೊಂಡಿರುವ ಪ್ರದೇಶಗಳಾಗಿ ತಮಿಳುನಾಡಿನ ನೀಲಗಿರಿ (123 ಚದರ ಕಿ.ಮೀ.ಗಿಂತ ಹೆಚ್ಚು), ಕೇರಳದ ಇಡುಕ್ಕಿ (98 ಚ. ಕಿ.ಮೀ), ಮಹಾರಾಷ್ಟ್ರದ ಪುಣೆ (83 ಚ.ಕಿ.ಮೀ) ಹಾಗೂ ಕರ್ನಾಟಕದ ಶಿವಮೊಗ್ಗ ಜಿಲ್ಲೆಗಳನ್ನು (74.5 ಚ.ಕಿ.ಮೀ) ಗುರುತಿಸಲಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ, ನೀಲಗಿರಿ ಪ್ರದೇಶವು 123 ಚದರ ಕಿಲೋ ಮೀಟರ್‌ಗಳಷ್ಟು ದೊಡ್ಡ ಪ್ರಮಾಣದಲ್ಲಿ ಕ್ಷೀಣಿಸಿರು ವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಹಬ್ಬಿರುವ ನೀಲಗಿರಿ ಪರ್ವತ ಶ್ರೇಣಿಯು ಜನಪ್ರಿಯ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ.

ಪಶ್ಚಿಮಘಟ್ಟದ ವ್ಯಾಪ್ತಿಯ ಕೇರಳದ ವಯನಾಡ್‌ನಲ್ಲಿ ಈ ವರ್ಷದ ಆರಂಭದಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ನೂರಾರು ಜನರನ್ನು ಬಲಿ ತೆಗೆದು‌ಕೊಂಡಿವೆ.ರಾಜ್ಯಗಳ ವಿರೋಧದ ನಡುವೆ 2013ರಿಂದಲೂ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಕಾನೂನು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ.

ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಇದೇ ವೇಳೆ ನಡೆದ ಸಮಾರಂಭದಲ್ಲಿ ಐಎಸ್‌ಎಫ್‌ನ ದ್ವೈವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.

ಭಾರತದ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುವ ಈ ವರದಿಯು ಕಳೆದ ಎರಡು ವರ್ಷಗಳಲ್ಲಿ (2021-23) ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 1,445 ಚದರ ಕಿಲೋಮೀಟರ್ ಹೆಚ್ಚಳವಾಗಿದೆ. ಇದರಲ್ಲಿ 156 ಚದರ ಕಿ.ಮೀ ಅರಣ್ಯ ಪ್ರದೇಶ ಮತ್ತು ಮರಗಳಿಂದ ಕೂಡಿದ ಪ್ರದೇಶದಲ್ಲಿ 1,289 ಚ.ಕಿ.ಮೀ ಹೆಚ್ಚಳ ಸೇರಿದೆ ಎಂದು ಹೇಳಿದೆ.

ಆದರೆ ಇದೇ ಸಮಯದಲ್ಲಿ, ಕಳೆದ ಎರಡು ವರ್ಷಗಳಲ್ಲಿ ಅರಣ್ಯದ ಬೆಳವಣಿಗೆಯು ಕೇವಲ 156 ಚದರ ಕಿಲೋಮೀಟರ್ ಎಂದು ಬೊಟ್ಟು ಮಾಡಿದೆ. 2019-21ರ ನಡುವೆ 1,540 ಚದರ ಕಿಲೋಮೀಟರ್ ಬೆಳವಣಿಗೆಗೆ ಹೋಲಿಸಿದರೆ ಹತ್ತು ಪಟ್ಟು ಕುಸಿತವಾಗಿದೆ. ಆದರೆ, ಈ ಕುಸಿತದ ಹಿಂದಿನ ಕಾರಣಗಳನ್ನು ವರದಿಯಲ್ಲಿ ವಿವರಿಸಿಲ್ಲ.

'ಹಲವಾರು ರಾಜ್ಯಗಳಲ್ಲಿ ಅರಣ್ಯ ನಾಶವಾಗಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶವು ಅಗ್ರಸ್ಥಾನದಲ್ಲಿದೆ' ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

2021 ಮತ್ತು 2023ರ ನಡುವೆ, ಗುಜರಾತಿನಲ್ಲಿ (36 ಚದರ ಕಿಮೀ) ಗರಿಷ್ಠ ನಷ್ಟದೊಂದಿಗೆ ಮ್ಯಾಂಗ್ರೋವ್ ವ್ಯಾಪ್ತಿ ಸುಮಾರು 7.5 ಚದರ ಕಿಲೋಮೀಟರ್ ಕಡಿಮೆಯಾಗಿದೆ ಮತ್ತು ಆಂಧ್ರಪ್ರದೇಶ (13) ಮಹಾರಾಷ್ಟ್ರದಲ್ಲಿ (12) ಮ್ಯಾಂಗ್ರೋವ್‌ ಅರಣ್ಯ ಹೆಚ್ಚಳವಾಗಿದೆ. ದೇಶದ ಗುಡ್ಡಗಾಡು ಜಿಲ್ಲೆಗಳಲ್ಲಿ 234.14 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಆದರೆ, ಈಶಾನ್ಯ ಪ್ರದೇಶದಲ್ಲಿ, ಅರಣ್ಯ ಪ್ರದೇಶ 327.30 ಚದರ ಕಿಲೋಮೀಟರ್‌ನಷ್ಟು ಕಡಿಮೆಯಾಗಿದೆ.

ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಯನ್ನು ಹೊಂದಿರುವ ಆರು ಮೆಗಾಸಿಟಿಗಳ ಅರಣ್ಯ ವ್ಯಾಪ್ತಿಯನ್ನು ವರದಿಯು ಪಟ್ಟಿಮಾಡಿದೆ. ದೆಹಲಿಯು 194 ಚ.ಕಿ.ಮೀ ಅರಣ್ಯಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ (110 ಚ.ಕಿ.ಮೀ), ಬೆಂಗಳೂರು (89 ಚ.ಕಿ.ಮೀ) ಮತ್ತು ಹೈದರಾಬಾದ್ (80 ಚ.ಕಿ.ಮೀ) ಇವೆ. ಕೋಲ್ಕತ್ತ (2 ಚ.ಕಿ.ಮೀ ) ಕಡಿಮೆ ಅರಣ್ಯ ವ್ಯಾಪ್ತಿ ಹೊಂದಿರುವ ನಗರವೆನಿಸಿದೆ. ಕಾಡಿನ ಬೆಂಕಿ ಅವಘಡಗಳಲ್ಲಿ ಹಿಮಾಚಲ ಪ್ರದೇಶ (14 ಪಟ್ಟು) ಮತ್ತು ಉತ್ತರಾಖಂಡ (4 ಪಟ್ಟು) ಹೆಚ್ಚು ಅಪಾಯ ಎದುರಿಸುತ್ತಿವೆ‌ ಎಂದು ವರದಿಯಲ್ಲಿ ತಿಳಿಸಲಾಗಿದೆ.ಮೆಗಾಸಿಟಿಗಳ ಅರಣ್ಯ ಪಟ್ಟಿ‌ಯಲ್ಲಿ ಬೆಂಗಳೂರುಇಂಗಾಲ ಹೀರುವಿಕೆಯಲ್ಲಿ ಸಾಧನೆ

2005ರ ಮಟ್ಟಕ್ಕೆ ಹೋಲಿಸಿದರೆ, ಅರಣ್ಯ ಪ್ರದೇಶ ಹೆಚ್ಚಿಸುವ ಮೂಲಕ ದೇಶವು 229 ಕೋಟಿ ಟನ್‌ಗಳಷ್ಟು ಹೆಚ್ಚುವರಿ ಇಂಗಾಲವನ್ನು ವಾತಾವರಣದಿಂದ ಹೀರಿಕೊಂಡ ಸಾಧನೆ ಮಾಡಿದೆ ಎಂದು ವರದಿ ಹೇಳಿದೆ.

ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು, ಒಪ್ಪಂದದಡಿಯ ಹವಾಮಾನ ಯೋಜನೆಗಳು ಅಥವಾ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ (ಎನ್‌ಡಿಸಿ) ಭಾಗವಾಗಿ, 2030ರ ವೇಳೆಗೆ ಹೆಚ್ಚುವರಿ ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ 25 ಕೋಟಿಯಿಂದ 30 ಕೋಟಿ ಟನ್‌ಗಳಷ್ಟು ಹೆಚ್ಚುವರಿ ಇಂಗಾಲವನ್ನು ಹೀರಿಕೊಳ್ಳುವ ಗುರಿ ಸಾಧಿಸಲು ದೇಶವು ಬದ್ಧವಾಗಿದೆ ಎಂದು ಅದು ಹೇಳಿದೆ.

ಭಾರತವು 2030ರ ವೇಳೆಗೆ ಅರಣ್ಯ ಮತ್ತು ಮರಗಳ ಹೊದಿಕೆಯಿಂದ 3171 ಕೋಟಿ ಟನ್ ಇಂಗಾಲವನ್ನು ಹೀರಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

-ಅನೂಪ್ ಸಿಂಗ್, ಎಫ್‌ಎಸ್‌ಐ ಮಹಾನಿರ್ದೇಶಕಬಿದಿರಿನ ಹೊದಿಕೆಯನ್ನು ಮರಗಳ ಜತೆಗೆ ಸೇರಿಸಲಾಗಿದೆ. ದೇಶದಲ್ಲಿ ಒಟ್ಟು ಬಿದಿರಿನ ಪ್ರದೇಶವು ಈಗ 1,54,670 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ. 2021ಕ್ಕೆ ಹೋಲಿಸಿದರೆ 5,227 ಚದರ ಕಿ.ಮೀ ಹೆಚ್ಚಾಗಿದೆ.-ಭೂಪೇಂದರ್ ಯಾದವ್, ಪರಿಸರ ಸಚಿವದೇಶವು ಈಗಾಗಲೇ 229 ಕೋಟಿ ಟನ್‌ಗಳಷ್ಟು ಹೆಚ್ಚುವರಿ ಇಂಗಾಲದ ಪ್ರಮಾಣ ತಗ್ಗಿಸಿರುವ ವರದಿಯು ಅತ್ಯಂತ ಸಕಾರಾತ್ಮಕ ಅಂಶವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries