HEALTH TIPS

'ಇಂಡಿಯಾ' ಮೈತ್ರಿಕೂಟದ ಧರಣಿಯ ನಡುವೆಯೇ ಏಕ ಚುನಾವಣೆ ಮಸೂದೆ ಜೆಪಿಸಿಗೆ

ನವದೆಹಲಿ: ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ' ಮೈತ್ರಿಕೂಟ ನಡೆಸುತ್ತಿದ್ದ ಧರಣಿಯ ನಡುವೆಯೇ, 'ಒಂದು ದೇಶ-ಒಂದು ಚುನಾವಣೆ' ಮಸೂದೆಗಳನ್ನು ಪರಾಮರ್ಶೆಗಾಗಿ ಶುಕ್ರವಾರ ಸಂಸತ್ತಿನ ಜಂಟಿ ಸಮಿತಿಗೆ (ಜೆಪಿಸಿ) ವಹಿಸಲಾಗಿದೆ. 

ಮಸೂದೆಗಳ ಕುರಿತು ವಿಸ್ತೃತ ಸಮಾಲೋಚನೆ ನಡೆಸುವ ಪ್ರಯತ್ನದ ಭಾಗವಾಗಿ ಸಮಿತಿಯ ಸದಸ್ಯರ ಸಂಖ್ಯೆ ಯನ್ನು 31ರಿಂದ 39ಕ್ಕೆ ಹೆಚ್ಚಿಸಲಾಗಿದೆ.

ಜಂಟಿ ಸಮಿತಿಯಲ್ಲಿ ಲೋಕಸಭೆಯಲ್ಲಿ 21 ಸಂಸದರ ಬದಲಿಗೆ 27 ಮತ್ತು ರಾಜ್ಯಸಭೆಯಲ್ಲಿ ಹತ್ತು ಜನರ ಬದಲಿಗೆ 12 ಮಂದಿ ಇರಲಿದ್ದಾರೆ. ಬಿಜೆಪಿಯ ಹಿರಿಯ ಸಂಸದರಾದ ಪಿ.ಪಿ.ಚೌಧರಿ ಅಥವಾ ಭರ್ತೃಹರಿ ಮಹತಾಬ್ ಅವರು ಸಮಿತಿಯ ಅಧ್ಯಕ್ಷರಾಗುವ ಸಂಭವ ಇದೆ.

'ಸಂವಿಧಾನ (129ನೇ ತಿದ್ದುಪಡಿ) ಮಸೂದೆ- 2024' ಮತ್ತು 'ಕೇಂದ್ರಾಡ ಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ- 2024' ಅನ್ನು ಸಂಸತ್ತಿನ ಜಂಟಿ ಸಮಿತಿಗೆ ಉಲ್ಲೇಖಿಸಲು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್‌ ಉಭಯ ಸದನಗಳಲ್ಲಿ ಶುಕ್ರವಾರ ನಿರ್ಣಯ ಮಂಡಿಸಿದರು.

ಪ್ರತಿಪಕ್ಷಗಳ ಸದಸ್ಯರ ಗದ್ದಲದ ಮಧ್ಯೆ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಬಳಿಕ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಸಮಿತಿಗೆ ವರದಿ ಸಲ್ಲಿಸಲು ಬಜೆಟ್‌ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ಕಾಲಾವಕಾಶ ನೀಡಲಾಗಿದೆ. ಮಾ‌ರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಕೊನೆಯ ವಾರದಲ್ಲಿ ವರದಿ ಮಂಡನೆಯಾಗುವ ಸಾಧ್ಯತೆ ಇದೆ.

ಜಂಟಿ ಸಮಿತಿಗೆ ಲೋಕಸಭೆಯ ಆರು ಸದಸ್ಯರನ್ನು ಸೇರಿಸಲಾಗಿದೆ. ಇದರಲ್ಲಿ ಬಿಜೆಪಿಯ ಇಬ್ಬರು, ಎಲ್‌ಜೆಪಿ, ಸಿಪಿಐ(ಎಂ), ಶಿವಸೇನಾ (ಯುಬಿಟಿ) ಹಾಗೂ ಸಮಾಜವಾದಿ ಪಕ್ಷದ ತಲಾ ಒಬ್ಬರು ಸದಸ್ಯರು ಇದ್ದಾರೆ.

ಸಮಿತಿಯಲ್ಲಿ ಎನ್‌ಡಿಎ ಮೈತ್ರಿಕೂಟ 22 ಸಂಸದರನ್ನು ಹೊಂದಿದೆ. ಬಿಜೆಪಿಯ 16, ಜೆಡಿಯು, ಟಿಡಿಪಿ, ಶಿವಸೇನಾ, ಎಲ್‌ಜೆಪಿ, ಜನಸೇನಾ ಹಾಗೂ ಆರ್‌ಎಲ್‌ಡಿಯ ತಲಾ ಒಬ್ಬರು ಸಂಸದರು ಇದ್ದಾರೆ. 'ಇಂಡಿಯಾ' ಮೈತ್ರಿಕೂಟದ 15 ಸಂಸದರು ಇದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 5, ಟಿಎಂಸಿ, ಡಿಎಂಕೆ ಹಾಗೂ ಸಮಾಜವಾದಿ ಪಕ್ಷದ ಇಬ್ಬರು, ಎನ್‌ಸಿಪಿ (ಶರದ್ ಪವಾರ್ ಬಣ), ಎಎಪಿ, ಸಿಪಿಐ(ಎಂ), ಶಿವಸೇನಾ (ಯುಬಿಟಿ) ತಲಾ ಒಬ್ಬರು ಸದಸ್ಯರು ಇದ್ದಾರೆ. ಯಾವುದೇ ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದ ಬಿಜೆಡಿ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ತಲಾ ಒಬ್ಬರು ಸಂಸದರು ಇದ್ದಾರೆ.

ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries