ಕುಂಬಳೆ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಧರ್ಮತ್ತಡ್ಕದ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಸಂಸ್ಕೃತ ನಾಟಕವಾದ ‘ವಿನಾಶ ಗೃಹಂ’ ದ್ವಿತೀಯ ಸ್ಥಾನದಿಂದಿಗೆ ಎ ಗ್ರೇಡ್ ಗಳಿಸಿದೆ.
ಮಕ್ಕಳ ರಂಗ ನಿರ್ದೇಶಕ ಸದಾಶಿವ ಬಾಲಮಿತ್ರ ಅವರು ನಾಟಕವನ್ನು ರಚಿಸಿ ನಿರ್ದೇಶಿಸಿ ಶಿವಪ್ರಸಾದ್ ಚೆರುಗೋಳಿ ಸಹನಿರ್ದೇಶನ ಮಾಡಿದ್ದಾರೆ. ಮಾನವನ ಸ್ವಾರ್ಥ ಮನೋಭಾವದಿಂದ ಪ್ರಕೃತಿಯಲ್ಲಿ ಉಂಟಾಗುವ ಏರುಪೇರಿನ ದುರಂತಗಳಲ್ಲಿ ಬಲಿಯಾಗುವ ಮುಗ್ಧ ಜೀವಿಗಳ ಚಿತ್ರಣವನ್ನು ಈ ನಾಟಕದುದ್ದಕ್ಕೂ ಪ್ರಾಣಿ ಪಕ್ಷಿಗಳ ಸಂಕೇತದ ಮೂಲಕ ನೀಡಲಾಗಿದೆ. ಪಾತ್ರವರ್ಗದಲ್ಲಿ ವಿದ್ಯಾರ್ಥಿಗಳಾದ ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಅನನ್ಯ ಭಟ್ ಎಸ್, ಸ್ತುತಿ ಎಂ., ಸಮನ್ವಿತ ಎನ್, ಪವನ್ ರಾಮ್ ಎನ್., ಅವಿನಾಶ್ ಪಿ., ಭವಿಶ್ ಶೆಟ್ಟಿ, ಸ್ಕಂದ ಪ್ರಸಾದ್ ಅಭಿನಯಿಸಿದ್ದರು.
ರಂಗಸಜ್ಜಿಕೆಯಲ್ಲಿ ಅಧ್ಯಾಪಕರಾದ ವಸಂತ ಮೂಡಂಬೈಲು, ಪ್ರಕಾಶ್ ಕುಂಬಳೆ, ಎ.ಪಿ. ರಾವ್, ಶಿವನಾರಾಯಣ ಭಟ್, ರಾಜಕುಮಾರ್ ಕೆ, ಪ್ರಶಾಂತ ಹೊಳ್ಳ ಎನ್, ಪ್ರದೀಪ್ ಕೆ, ಅಭಿಲಾಶ್ ಪೆರ್ಲ, ಹರ್ಷಿತ್ ಐಲ್, ಉಷಾಪದ್ಮ ಸಹಕರಿಸಿದ್ದರು.