ಬದಿಯಡ್ಕ: ಯಕ್ಷಮಿತ್ರರು ಪೆರಡಾಲ ಇದರ ನೇತೃತ್ವದಲ್ಲಿ ನಾಲ್ಕನೇ ವರ್ಷದ ಯಕ್ಷಗಾನ ಬಯಲಾಟ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಶುಕ್ರವಾರ ರಾತ್ರಿ ಪೆರಡಾಲ ಶ್ರೀಉದನೇಶ್ವರ ಕ್ಷೇತ್ರ ಪರಿಸರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವರ್ಪಣೆ ನಡೆಯಿತು.ಪಟ್ಲ ಪೌಂಡೇಶನ್ ಕುಂಬ್ಳೆ ಘಟಕದ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ ಕರಾವಳಿಯಲ್ಲಿ ಯಕ್ಷಗಾನ ಕಲೆಯನ್ನು ಈ ಕಾಲಘಟ್ಟದಲ್ಲಿ ಮೇಲ್ಮಟ್ಟಕ್ಕೆ ಏರಿಸಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಯಕ್ಷಗಾನ ಕಲಾವಿದರಿಗೆ ಆಶಾಕಿರಣವಾಗಿ ಜೀವನದಲ್ಲಿ ಬೆಳಕಾಗಿರುತ್ತಾರೆ ಎಂದು ನುಡಿದರು. ಫಲಪುಷ್ಪ ಶಾಲು ಸ್ಮರಣೆಗೆ ನೀಡಿ ಗೌರವಿಸಲಾಯಿತು.
ಪೆರಡಾಲ ಶ್ರೀಕ್ಷೇತ್ರದ ಮೊಕ್ತೇಸರ ಪಿ.ಜಿ.ಜಗನ್ನಾಥ ರೈ, ಪ್ರೊ.ಎ.ಶ್ರೀನಾಥ್, ಪಟ್ಲ ಫೌಂಡೇಶನ್ ಕುಂಬ್ಳೆ ಘಟಕದ ಉಪಾಧ್ಯಕ್ಷ ರಾಘವೇಂದ್ರ ಪ್ರಸಾದ್ ಬದಿಯಡ್ಕ, ಹಿರಿಯರಾದ ಶ್ರೀಕೃಷ್ಣ ಭಟ್ ಪುದ್ಯೋಡು, ಶಿವಶಕ್ತಿ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಾವಂಜೆ ಮೇಳದವರಿಂದ ಸಿಂಹಧ್ವಜ, ಶ್ರೀನಿವಾಸ ಕಲ್ಯಾಣ ಪ್ರಸಂಗದ ಪ್ರದರ್ಶನ ನಡೆಯಿತು.