ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಟೆಲಿಕಾಂ ಇತ್ತೀಚಿಗೆ ಹೊಸ ಲೋಗೋ ಪರಿಚಯಿಸುವ ಮೂಲಕ ಟೆಲಿಕಾಂ ವಲಯದಲ್ಲಿ ದೊಡ್ಡ ಸದ್ದು ಮಾಡಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಸಂಸ್ಥೆಯು ಆಂಡ್ರಾಯ್ಡ್‌ಗಾಗಿ ಲೈವ್ ಟಿವಿ ಘೋಷಣೆ ಮಾಡಿತ್ತು. ಇದೀಗ ಸದ್ಯದಲ್ಲೇ ಸಂಸ್ಥೆಯು ಟಿವಿ ಸೇವೆಯನ್ನು ವಾಣಿಜ್ಯಿಕವಾಗಿ ಲೈವ್ ಮಾಡಲಿದೆ. ಇನ್ನು ಸಂಸ್ಥೆಯು ಲೈವ್ ಟಿವಿ ಸೇವೆ ಪ್ರಾರಂಭ ಮಾಡಲು ಬೇರೊಂದು ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪನಿಯು ಲೈವ್ ಟಿವಿ ಸೇವೆ ಶುರುಮಾಡಲಿದ್ದು, ಈ ಸೇವೆಯು ಸದ್ಯ ತಮಿಳುನಾಡು ಮತ್ತು ಮಧ್ಯಪ್ರದೇಶ ವಲಯಗಳಲ್ಲಿ ಪರೀಕ್ಷಾ ಹಂತದಲ್ಲಿ ಇದೆ. ಆ ಬಳಿಕ ದೇಶದ ಇತರೆ ಭಾಗಗಳಲ್ಲಿ ಹಂತ-ಹಂತವಾಗಿ ಸೇವೆಯನ್ನು ಪ್ರಾರಂಭ ಮಾಡಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಲೈವ್ ಟಿವಿ ಸೇವೆ ಆರಂಭಿಸಲು ಬಿಎಸ್‌ಎನ್‌ಎಲ್ ಸಂಸ್ಥೆಯು ಬೇರೊಂದು ಕಂಪನಿ ಜೊತೆಗೆ ಪಾಲುದಾರಿಕೆ ಹೊಂದಿದೆ. ಒಮ್ಮೆ ಲೈವ್ ಟಿವಿ ಕಮಿಷನಿಂಗ್ ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ನಡೆದರೆ, ಅದನ್ನು ದೇಶದ ಇತರೆ ಭಾಗಗಳಲ್ಲಿ ಹಂತ-ಹಂತವಾಗಿ ಶುರು ಮಾಡಲಿದೆ. ಅಂದಹಾಗೆ ಈ ಸೇವೆಯು BSNL FTTH (ಫೈಬರ್ ಟು ದಿ ಹೋಮ್) ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.
ಇನ್ನು ಬಿಎಸ್‌ಎನ್‌ಎಲ್ (BSNL) ಲೈವ್ ಟಿವಿ ಆಪ್ ಸದ್ಯ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ಗೆ ಮಾತ್ರ ಲಭ್ಯ ಇದೆ. ಲೈವ್ ಟಿವಿ ಚಾನೆಲ್‌ಗಳ ಜೊತೆ ಜೊತೆಗೆ, VOD (ವಿಡಿಯೋ ಆನ್ ಡಿಮ್ಯಾಂಡ್) ಸೇವೆಯ ಸೌಲಭ್ಯ ಸಹ ಇರುತ್ತದೆ. ಲಾಗಿನ್ ಮಾಡಲು, ಬಳಕೆದಾರರು ತಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಅನ್ನು ಲಾಗಿನ್‌ನಲ್ಲಿ ಎಂಟ್ರಿ ಮಾಡಬೇಕಿರುತ್ತದೆ (FTTH ಕನೆಕ್ಷನ್ ಅನ್ನು ಖರೀದಿಸಿದ ಸಂಖ್ಯೆ) ಹಾಗೂ ನಂತರ OTP ಆಯ್ಕೆಯು ಬಳಕೆದಾರರನ್ನು ಲಾಗಿನ್ ಮಾಡಲು ನೆರವಾಗುತ್ತದೆ.
ಇನ್ನು ಬಿಎಸ್‌ಎನ್‌ಎಲ್ ಲೈವ್ ಟಿವಿ ಫಸ್ಟ್ ಇನ್ ಇಂಡಿಯಾ ಎಂದು ಹೇಳಿಕೊಂಡಿದೆ. ಆದರೆ ಜಿಯೋ ಟಿವಿ ಗ್ರಾಹಕರಿಗೆ ಈಗಾಗಲೇ ಜಿಯೋ ಟಿವಿ (JioTv+) ಸೇವೆ ಲಭ್ಯ ಇದೆ. ಇನ್ನು JioTV+ ಪೂರ್ಣವಾಗಿ HLS-ಆಧಾರಿತ ಸ್ಟ್ರೀಮಿಂಗ್‌ನಲ್ಲಿ ಆಗಿದ್ದು, ಸೇವೆಯು ಸ್ಟ್ರೀಮಿಂಗ್‌ಗಾಗಿ ಬಳಕೆದಾರರ ಇಂಟರ್ನೆಟ್ ಸೌಲಭ್ಯ ಅನ್ನು ಬಳಸುತ್ತದೆ. ಹೀಗಾಗಿ ಬಳಕೆದಾರರು ಇಂಟರ್ನೆಟ್ ಮುಕ್ತಾಯ ಆಗುವ ವರೆಗೂ ಚಾನಲ್‌ಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದಾಗಿದೆ.
ಆದರೆ ಬಿಎಸ್‌ಎನ್‌ಎಲ್ ಸೇವೆಗಳು ಆ ರೀತಿಯಲ್ಲ. ನೀವು ಡೇಟಾವನ್ನು ಬಳಸುವುದಿಲ್ಲ. ಬಳಕೆದಾರರ ಪ್ರಸ್ತುತ ರೀಚಾರ್ಜ್ ಯೋಜನೆಯ ಯಾವುದೇ ದಿನಾಂಕ, ಆದ್ದರಿಂದ ಇಂಟರ್ನೆಟ್ ಸೌಲಭ್ಯ ಸ್ಥಗಿತಗೊಂಡರೂ, ಟಿವಿ ಚಾನೆಲ್ ಸ್ಟ್ರೀಮಿಂಗ್ ಕೆಲಸ ನಿರ್ವಹಿಸುತ್ತದೆ ಎಂದು ಅಧಿಕಾರಿ ವಿವರಿಸಿದರು.
ಅಂದಹಾಗೆ ಬಿಎಸ್‌ಎನ್‌ಎಲ್‌ನ ಈ ನೂತನ ಆಪ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಪ್ರತ್ಯೇಕವಾಗಿ ಶುರು ಮಾಡಲಾಗಿದೆ. ಅಲ್ಲದೇ ಬಳಕೆದಾರರು ಆಪ್ ಅನ್ನು ಅಧಿಕೃತ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಲು ಅವಕಾಶ ಇದೆ. ಆದರೆ ಅಪ್ಲಿಕೇಶನ್‌ನ ನಿರ್ದಿಷ್ಟ ಫೀಚರ್ಸ್‌ಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ಘೋಷಿಸಲಾಗಿಲ್ಲ.
ಇನ್ನು ಇದು ಸಾಂಪ್ರದಾಯಿಕ ಟೆಲಿಕಾಂ ಸೇವೆಗಳನ್ನು ಮೀರಿ ವಿಸ್ತರಿಸುವುದರಿಂದ ಬಿಎಸ್‌ಎನ್‌ಎಲ್ (BSNL) ಟೆಲಿಕಾಂಗೆ ಇದು ಒಂದು ಮಹತ್ತೆ ಹೆಜ್ಜೆ ಎನಿಸಿದೆ. ಕೆಲವು ವರದಿಗಳ ಪ್ರಕಾರ, ಈ ನೂತನ ಆಪ್ ಅನ್ನು WeConnect ಅಭಿವೃದ್ಧಿಪಡಿಸಿದೆ ಮತ್ತು BSNL ಗ್ರಾಹಕರಿಗೆ ಅನುಕೂಲವನ್ನು ಸುಧಾರಿಸುವ ಭರವಸೆ ಒದಗಿಸುತ್ತದೆ.