ಕಾಸರಗೋಡು: ಸಸ್ಯ ಶರೀರಶಾಸ್ತ್ರದ ರಾಷ್ಟ್ರೀಯ ಸಮ್ಮೇಳನ 2024 (ಎನ್‍ಸಿಪಿಪಿ-2024)ಕಾಸರಗೋಡು ಸಿಪಿಸಿಆರ್‍ಐ-ಐಸಿಎಆರ್‍ನಲ್ಲಿ ಡಿ. 17ರಿಂದ 19ರ ವರೆಗೆ ನಡೆಯಲಿದೆ
ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಕಾಸರಗೋಡು ಮತ್ತು ಇಂಡಿಯನ್ ಸೊಸೈಟಿ ಫಾರ್ ಪ್ಲಾಂಟ್ ಫಿಸಿಯಾಲಜಿ ಜಂಟಿ ಸಹಯೋಗದೊಂದಿಗೆ ಸಮ್ಮೇಳನ ನಡೆಯಲಿದೆ. 'ಸೆಲ್ ಇನ್ ಫ್ರಾಂಟಿಯರ್ಸ್ ಟು ಹೋಲ್ ಪ್ಲಾಂಟ್ ಫಿಸಿಯಾಲಜಿ: ಬ್ರಿಡ್ಜಿಂಗ್ ಸೈನ್ಸ್ ಅಂಡ್ ಸಸ್ಟೈನಬಿಲಿಟಿ' ಎಂಬ ವಿಚಾರ ಕೇಂದ್ರೀಕರಿಸಿ ಸಮಾವೇಶ ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ 300ಮಂದಿ ಪ್ರತಿನಿಧಿಗಳು, ಎನ್‍ಆರ್‍ಐ ಸ್ಪೀಕರ್ಸ್, ಯುಎಸ್‍ಎ, ಇಂಗ್ಲೆಂಡ್, ಕೆನಡಾ, ಭಾರತದ ಪ್ರಮುಖ ಸಸ್ಯ ಶರೀರಶಾಸ್ತ್ರದ ತಜ್ಞರು, ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನವದೆಹಲಿಯ ಜವಹರಲಾಲ್ ನೆಹರೂ ವಿಶ್ವ ವಇದ್ಯಲಯದ ಮಾಜಿ ಉಪಕುಲಪತಿ ಡಾ.ಸುಧೀರ್ ಕುಮಾರ್ ಸೊಪೆÇೀರಿ ಸಮ್ಮೇಳನ ಉದ್ಘಾಟಿಸುವರು. 'ಆಹಾರ, ಪೆÇೀಷಣೆ ಮತ್ತು ಹವಾಮಾನ ಭದ್ರತೆಯ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಸ್ಯ ಶರೀರಶಾಸ್ತ್ರದ ಪಾತ್ರ' ಎಂಬ ವಿಷಯದ ಬಗ್ಗೆ ಅಮೆರಿಕಾದ ಖಾನ್ಸಾ ಸ್ಟೇಟ್ ಯೂನಿವರ್ಸಿಟಿ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ. ಪಿ.ವಿ ವರಪ್ರಸಾದ್ ಉಪನ್ಯಾಸ ನೀಡುವರು.