HEALTH TIPS

ED ಅಧಿಕಾರಿಗಳು, BJP ನಾಯಕರಿಂದ ಕಿರುಕುಳ: ಪತ್ರ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ

Top Post Ad

Click to join Samarasasudhi Official Whatsapp Group

Qries

ಭೋಪಾಲ್‌: ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯ ಉದ್ಯಮಿ ಹಾಗೂ ಅವರ ಪತ್ನಿ ಆತ್ಮಹತ್ಯೆಗೂ ಮುನ್ನ ಬರೆದಿರುವ ಮರಣಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ಯುದ್ಧ ಸೃಷ್ಟಿಸಿದೆ.

ಉದ್ಯಮಿ ಮನೋಜ್‌ ಪಾರ್ಮರ್‌ ಅವರು ಬರೆದಿರುವ ಮರಣಪತ್ರದಲ್ಲಿ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮತ್ತು ಬಿಜೆಪಿ ನಾಯಕರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಗೆಯೇ, ತಮ್ಮ ಮಕ್ಕಳನ್ನು ನೋಡಿಕೊಳ್ಳಿ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದಾರೆ.

ಮರಣಪತ್ರದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಮನೋಜ್‌ ಮತ್ತು ಅವರ ಪತ್ನಿ ನೇಹಾ ಪಕ್ಷದ ಬೆಂಬಲಿಗರಾಗಿದ್ದರು. ಇದೇ ಕಾರಣಕ್ಕೆ ಅವರಿಗೆ ಇ.ಡಿ. ಕಿರುಕುಳ ನೀಡಿದೆ. ಮೃತ ದಂಪತಿಯ ಮಕ್ಕಳು ತಾವು ಕೂಡಿಟ್ಟಿದ್ದ ಹಣವನ್ನು 'ಭಾರತ್‌ ಜೋಡೊ ನ್ಯಾಯ ಯಾತ್ರೆ' ವೇಳೆ ರಾಹುಲ್‌ ಗಾಂಧಿ ಅವರಿಗೆ ದೇಣಿಗೆಯಾಗಿ ನೀಡಿದ್ದರು ಎಂದು ಹೇಳಿದೆ.

ಮೃತರ ಕುಟುಂಬದವರು ದುಃಖದಲ್ಲಿರುವುದರಿಂದ ಸದ್ಯಕ್ಕೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್‌ ಅಧಿಕಾರಿ ಆಕಾಶ್‌ ಅಮಲ್ಕರ್‌ ಅವರು ಹೇಳಿದ್ದಾರೆ. ಪಿಟಿಐಗೆ ಮಾಹಿತಿ ನೀಡಿರುವ ಅವರು, ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಸೆಹೋರ್‌ ಜಿಲ್ಲೆಯ ಅಷ್ಠಾ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಪಾರ್ಮರ್‌ ಮತ್ತು ಅವರ ಪತ್ನಿಯ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಕಂಡುಬಂದಿದ್ದವು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ ಮತ್ತು ಇತರರ ಹೆಸರುಗಳನ್ನು ಉಲ್ಲೇಖಿಸಲಾಗಿರುವ ಮರಣಪತ್ರ ಸ್ಥಳದಲ್ಲಿ ದೊರೆತಿದೆ. ಅದರಲ್ಲಿ, ತಮ್ಮ ಕುಟುಂಬದವರನ್ನು ರಕ್ಷಿಸುವಂತೆ ರಾಹುಲ್‌ ಅವರಿಗೆ ಮನವಿ ಮಾಡಲಾಗಿದೆ.

ರಾಹುಲ್‌ ಗಾಂಧಿ ಅವರ ಹೆಸರನ್ನು ಮರಣಪತ್ರದಲ್ಲಿ ಉಲ್ಲೇಖಿಸಿರುವ ಬಗ್ಗೆ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿತು ಪಟ್ವಾರಿ ಅವರು ಪತ್ರಿಕ್ರಿಯಿಸಿದ್ದು, 'ಕಾಂಗ್ರೆಸ್‌ ಪಕ್ಷವು ಜನರದ್ದು. ನಾವು ಅವರ (ಉದ್ಯಮಿಯ ಕುಟುಂಬವನ್ನು) ರಕ್ಷಣೆ ಮಾಡುತ್ತೇವೆ. ಆ ಕಾರಣಕ್ಕಾಗಿಯೇ ನಾನು ನೆನ್ನೆಯೇ ಅಲ್ಲಿಗೆ (ಘಟನಾ ಸ್ಥಳಕ್ಕೆ) ಹೋಗಿದ್ದೆ' ಎಂದು ಹೇಳಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries