ನವದೆಹಲಿ: 'ಮನ್ ಕೀ ಬಾತ್' ರೆಡಿಯೊ ಕಾರ್ಯಕ್ರಮದ 117ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಇಂದು (ಭಾನುವಾರ) ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಹಾ ಕುಂಭಮೇಳ, ಸಂವಿಧಾನ ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.
ಏಕತೆಯ ಮಹಾಕುಂಭ...
ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವನ್ನು ಪ್ರಧಾನಿ ನರೇಂದ್ರ ಮೋದಿ 'ಏಕತೆಯ ಮಹಾಕುಂಭ' ಎಂದು ಬಣ್ಣಿಸಿದ್ದಾರೆ.
'ಇಡೀ ದೇಶವನ್ನೇ ಒಗ್ಗೂಡಿಸುತ್ತದೆ ಎಂಬುದು ಮಹಾ ಕುಂಭಮೇಳದ ಸಂದೇಶ ಆಗಿರಬೇಕು. ವಿವಿಧತೆಯಲ್ಲಿ ಏಕತೆಗೆ ಇದಕ್ಕಿಂತ ಮಿಗಿಲಾದ ಬೇರೆ ಉದಾಹರಣೆ ಇಲ್ಲ. ಮಹಾಕುಂಭಮೇಳವು ಸಮಾಜದಿಂದ ದ್ವೇಷ ಮತ್ತು ವಿಭಜನೆಯನ್ನು ನಿರ್ಮೂಲನೆ ಮಾಡಲಿದೆ' ಎಂದು ಅವರು ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳವು 2025 ಜನವರಿ 13ರಿಂದ ಆರಂಭವಾಗಲಿದೆ.
ಸಂವಿಧಾನ ಜಾರಿಯಾಗಿ 75 ವರ್ಷ...
ಮುಂಬರುವ ಗಣರಾಜ್ಯೋತ್ಸವದಂದು ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ತುಂಬಲಿದೆ. ಈ ಕುರಿತು ಉಲ್ಲೇಖ ಮಾಡಿರುವ ಪ್ರಧಾನಿ ಮೋದಿ, 'ಇದು ದೇಶದ ನಿವಾಸಿಗಳಿಗ ಹೆಮ್ಮೆಯ ಕ್ಷಣ. ಸಂವಿಧಾನ ನಮ್ಮ ಮಾರ್ಗದರ್ಶಿ ಬೆಳಕು' ಎಂದು ಬಣ್ಣಿಸಿದ್ದಾರೆ.
ಸಂವಿಧಾನದಿಂದಾಗಿ ಜೀವನದಲ್ಲಿ ತಾವು ಈ ಸ್ಥಾನಕ್ಕೆ ತಲುಪಿರುವುದಾಗಿ ಹೇಳಿದ್ದಾರೆ.
ಈ ಸಂಭ್ರಮದ ವೇಳೆಯಲ್ಲಿ ಜನರಿಗಾಗಿ constitution75.com ವೆಬ್‌ಸೈಟ್ ಅನಾವರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಸಂವಿಧಾನವನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವುದರತ್ತ ಸರ್ಕಾರ ಯತ್ನಿಸಿದೆ ಎಂದು ಸಮರ್ಥಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ: