ಒಂದು ವೇಳೆ ನಿಮ್ಮ ಅಥವಾ ನಿಮಗೆ ತಿಳಿದವರ ಪ್ಯಾನ್ ಕಾರ್ಡ್ (PAN Card) ಕಳೆದೊಗಿದ್ರೆ ಅಥವಾ ಡ್ಯಾಮೇಜ್ ಆಗಿದ್ರೆ ಮುಂದೇನು ಮಾಡೋದು? ಅನ್ನೋದು ಪ್ರತಿಯೊಬ್ಬರ ತಲೆಗೂ ಬರುವ ಮೊದಲ ಮತ್ತು ಸಾಮಾನ್ಯ ಪ್ರಶ್ನೆಯಾಗಿರುತ್ತದೆ. ಇದಕ್ಕೆ ಪರಿಹಾರವನ್ನು ನೀಡಲು ಸರಳ ಮತ್ತು ಪ್ರಯೋಜನಕಾರಿ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೌದು ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ (PAN Card) ಕಳೆದೊಗಿದ್ರೆ ಅಥವಾ ಡ್ಯಾಮೇಜ್ ಆಗಿದ್ರೆ ಈಗ ಎದರುವ ಅಥವಾ ಹೆಚ್ಚಾಗಿ ಚಿಂತಿಸದೆ ತಕ್ಷಣವೇ ಆನ್ಲೈನ್ ಮೂಲಕ ಮರುಮುದ್ರಿಸಲು (Duplicate) ಅರ್ಜಿ ಸಲ್ಲಿಸಬಹುದು.
ಪ್ಯಾನ್ ಕಾರ್ಡ್ ಕಳೆದೊಗಿದ್ರೆ ಅಥವಾ ಡ್ಯಾಮೇಜ್ ಆಗಿದ್ರೆ ಮುಂದೇನು
ಅದಕ್ಕೂ ಮೊದಲು ಪ್ಯಾನ್ ಕಾರ್ಡ್ ಕಳೆದು ಹೋಗಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎನ್ನುವುದು ನಮ್ಮ ಸಲಹೆ. ಯಾಕೆಂದರೆ ನಿಮ್ಮ ಈ ದಾಖಲೆಗಳಿಂದ ಯಾವುದಾದರು ಅಪರಾಧ ಮಾಡಿದರೆ ಅದು ನಿಮ್ಮ ಮೇಲೆ ಬರೋದಿಲ್ಲ. ಅಂದ್ರೆ ನಿಮ್ಮ ಅದೇ ಪ್ಯಾನ್ ನಂಬರ್ ಜೊತೆಗೆ ಹೊಸದಾಗಿ ಮುದ್ರಿಸಿ ನೀಡಲಾಗುತ್ತದೆ ವಿನಃ ಹೊಸ ಪಾನ್ ಕಾರ್ಡ್ ಬರೋದಿಲ್ಲ ಎನ್ನುವುದು ನೆನೆಪಿರಲಿ. ಅಲ್ಲದೆ ಈ PAN Card ಮರುಮುದ್ರಣವು ತಮ್ಮ ಲೇಟೆಸ್ಟ್ ಇಮೇಜ್ ಮತ್ತು ಸಹಿಯನ್ನು ತಮ್ಮ ಅರ್ಜಿಯೊಂದಿಗೆ NSDL ಸಲ್ಲಿಸಿದ ಬಳಕೆದಾರರಿಗೆ ಪ್ಯಾನ್ ಕಾರ್ಡ್ ಅನ್ನು ಮುದ್ರಿಸುವ ಪ್ರಕ್ರಿಯೆಯಾಗಿದೆ. ಕಾರ್ಡ್ ಡೇಟಾದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಕೆಲವೇ ಹೇಗೆ ಇದೆಯೋ ಹಾಗೆ ಮರುಮುದ್ರಿಸಲ್ಪಡುತ್ತದೆ.
ನಕಲಿ ಪಾನ್ ಕಾರ್ಡ್‌ಗಾಗಿ (Duplicate PAN Card) ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಮೊದಲಿಗೆ ನೀವು https://www.onlineservices.nsdl.com/paam/ReprintEPan.html ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
ಹಂತ 2: ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ MM/YYYY ಫಾರ್ಮ್ಯಾಟ್‌ನಲ್ಲಿ ಹುಟ್ಟಿದ ದಿನಾಂಕವನ್ನು ನಮೂದಿಸಿ.
ಹಂತ 3: ಈಗ ಇಲ್ಲಿ ಘೋಷಣೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಮುಂದೆ ಮುಂದುವರಿಯಲು ಮಾರ್ಕ್ ಅನ್ನು ಟಿಕ್ ಮಾಡಿ.
ಹಂತ 4 : ಪರಿಶೀಲನೆ ಉದ್ದೇಶಕ್ಕಾಗಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ‘ಸಲ್ಲಿಸು ‘ ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಪ್ಯಾನ್ ಕಾರ್ಡ್‌ನ ವಿವರಗಳೊಂದಿಗೆ ಹೊಸ ಪೇಜ್ ಮೇಲೆ ಕಾಣಿಸುತ್ತದೆ.
ಹಂತ 6: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಅಥವಾ ಎರಡರಲ್ಲೂ OTP ಸ್ವೀಕರಿಸಲು ಆಯ್ಕೆಗಳನ್ನು ಆಯ್ಕೆಮಾಡಿ.
ಹಂತ 7: ಇಅದರ ನಂತರ Generate OTP ಮೇಲೆ ಕ್ಲಿಕ್ ಮಾಡಿ ನಿಮಗೆ ಬಂದ OTP ಅನ್ನು ನಮೂದಿಸಿ ವ್ಯಾಲಿಡೇಟ್’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 8: ನಂತರ ನಿಮ್ಮನ್ನು ಪಾವತಿ ಪುಟಕ್ಕೆ ಕಳುಹಿಸಲಾಗುತ್ತದೆ 50 ರೂಗಳನ್ನು ಪಾವತಿಸಿದ ನಂತರ 15 ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಸ್ವೀಕೃತಿಯನ್ನು ರಚಿಸಲಾಗುತ್ತದೆ.
ಹಂತ 9: ನಿಮ್ಮ ಪ್ಯಾನ್ ಕಾರ್ಡ್ ಅನ್ನು ಮರುಮುದ್ರಣ ಮಾಡಲು ನಿಮ್ಮ ವಿನಂತಿಯನ್ನು NSDL (ಈಗ ಪ್ರೊಟೀನ್) ಇಲಾಖೆಗೆ ಸಲ್ಲಿಸಲಾಗುತ್ತದೆ.
ಹಂತ 10: ನಿಮ್ಮ ಎಲ್ಲ ಮಾಹಿತಿಗಳು ಸರಿಯಾಗಿದ್ದರೆ 15-20 ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ವಿಳಾಸಕ್ಕೆ ಪೋಸ್ಟ್ ಮೂಲಕ ಬಂದು ಸೇರುತ್ತದೆ.