HEALTH TIPS

ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಈ ಲಕ್ಷಣಗಳಿದ್ದರೆ Phone Hack ಆಗಿದೆ ಎಂದರ್ಥ! ಸುರಕ್ಷತೆಗಾಗಿ ಈ ಟಿಪ್ಸ್ ಅನುಸರಿಸಿ!

 ದಿನದಿಂದ ದಿನಕ್ಕೆ ನಮ್ಮ ಲೈಫ್ ಸ್ಟೈಲ್ ಹೆಚ್ಚಾಗಿ ಡಿಜಿಟಲ್ ಆಗುತ್ತಿದ್ದಂತೆ ಇದಕ್ಕೆ ಸಮನಾಗಿ ವಂಚನೆಗಳು ಮತ್ತು ಹ್ಯಾಕಿಂಗ್ ಅಪಾಯ ಸಹ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ಹ್ಯಾಕಿಂಗ್‌ನ ಅತ್ಯಾಧುನಿಕ ಟೆಕ್ನಾಲಜಿ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಹ್ಯಾಕರ್‌ಗಳು ಮತ್ತು ಇತರ ಸ್ಪ್ಯಾಮರ್‌ಗಳು ಮುಗ್ದ ಜನರನ್ನು ಗುರಿಯನ್ನಾಗಿಸಿಕೊಂಡು ಅವರ ಪರ್ಸನಲ್ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವುದರೊಂದಿಗೆ ಇತರ ಕೆಟ್ಟ ಯೋಚನೆಗಳನ್ನು ಸಹ ಅನುಸರಿಸುವುದು ಇವರ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಒಳ್ಳೆಯ ವಿಷಯವೆಂದರೆ ಆಂಡ್ರಾಯ್ಡ್‌ನಲ್ಲಿ ಮಾಲ್‌ವೇರ್ ಅನ್ನು ನಿಭಾಯಿಸಲು ಮತ್ತು ತೆಗೆದುಹಾಕಲು ಗೂಗಲ್ ಉತ್ತಮ ಮಾರ್ಗಗಳನ್ನು ಒದಗಿಸಿದೆ.


ನಿಮ್ಮ Phone Hack ಆಗಿರುವುದು ತಿಳಿಯುವುದು ಹೇಗೆ?

1-ಮೊದಲಿಗೆ ನಿಮ್ಮ ಗೂಗಲ್ ಖಾತೆಯನ್ನು ತನ್ನನ್ ತಾನೇ ಸೈನ್ ಔಟ್ ಆದರೆ ನಿಮ್ಮ ಫೋನ್ ಹ್ಯಾಕರ್‌ನ ಕೈಗೆ ಬಿದ್ದಿರುವುದರ ದೊಡ್ಡ ಸಂಕೇತವಾಗಿದೆ. ಅದನ್ನು ಏಕೆ ಸೈನ್ ಔಟ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸುವುದು ನಿಮ್ಮ ಕೆಲಸವಾಗಿದೆ.

2-ನೀವು ಫೋನ್‌ನಲ್ಲಿ ನೀವು ಬಳಸದ ಪಾಪ್-ಅಪ್‌ಗಳು ಮತ್ತು ಜಾಹೀರಾತುಗಳನ್ನು ಡೌನ್ಲೋಡ್ ಆಗಿದ್ದರೆ ಅದು ಹ್ಯಾಕ್ ಆಗುವ ಸಾಧ್ಯತೆಯಿದೆ.

3-ಇದ್ದಕ್ಕಿಂದಂತೆ ನಿಮ್ಮ ಫೋನ್ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಬೇಕು.

4-ನಿಮ್ಮ ಫೋನ್ನಲ್ಲಿ ಸ್ಟೋರೇಜ್ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರೆ ಏಕೆ ಎಂಬುದನ್ನು ನೀವು ನೋಡಬೇಕು. ಏಕೆಂದರೆ ಅನೇಕ ಬಾರಿ ಹ್ಯಾಕರ್‌ಗಳು ಅನುಮತಿಯಿಲ್ಲದೆ ಫೋನ್‌ನಲ್ಲಿ ಏನನ್ನಾದರೂ ಡೌನ್‌ಲೋಡ್ ಮಾಡುತ್ತಾರೆ.

5- ನಿಮ್ಮ ಬ್ರೌಸರ್ ವಿವಿಧ ವೆಬ್‌ಸೈಟ್‌ಗಳಿಗೆ ಅಥವಾ ವಯಸ್ಕರ ವಿಷಯಕ್ಕೆ ಮರುನಿರ್ದೇಶಿಸಲು ಪ್ರಾರಂಭಿಸಿದರೆ ನಿಮ್ಮ ಫೋನ್ ಅನ್ನು ಟ್ಯಾಂಪರ್ ಮಾಡಲಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಿ.

6-ನೀವು ಎಂದಿಗೂ ಕಳುಹಿಸದ ಮೆಸೇಜ್‌ಗಳು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಸ್ವೀಕರಿಸಿದರೆ ಖಂಡಿತವಾಗಿಯೂ ಬೇರೆಯವರು ನಿಮ್ಮ ಫೋನ್ ಅನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರಬಹುದು.

ನಿಮ್ಮನ್ನು ನೀವೇ Hack ಹೇಗೆ ರಕ್ಷಿಸಿಕೊಳ್ಳುವುದು?

➥ನೀವು ಪ್ಲೇ ಪ್ರೊಟೆಕ್ಟ್‌ನೊಂದಿಗೆ ಆನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಎಂದು ಗೂಗಲ್ ಶಿಫಾರಸು ಮಾಡುತ್ತದೆ. ಇದನ್ನು ಪ್ಲೇ ಸ್ಟೋರ್‌ನಲ್ಲಿ ಮಾಡಬಹುದು. ಇದಕ್ಕಾಗಿ ನೀವು ಪ್ಲೇ ಸ್ಟೋರ್‌ಗೆ ಹೋಗಬೇಕು ನಂತರ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ತದನಂತರ ಪ್ಲೇ ಪ್ರೊಟೆಕ್ಟ್ ಅನ್ನು ಟ್ಯಾಪ್ ಮಾಡಿ. ಇದರ ನಂತರ ನೀವು ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಲೇ ಪ್ರೊಟೆಕ್ಟ್‌ನೊಂದಿಗೆ ಸ್ಕ್ಯಾಮ್ ಅಪ್ಲಿಕೇಶನ್‌ಗಳನ್ನು ಆನ್ ಮಾಡಬೇಕು.

➥ಡಿವೈಸ್ ಸಾಫ್ಟ್‌ವೇರ್ ಅನ್ನು ಇತ್ತೀಚಿನ ಲಭ್ಯವಿರುವ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಿ ಎಂದು ಗೂಗಲ್ ಹೇಳುತ್ತದೆ. ನಿಮ್ಮ ಸ್ಮಾರ್ಟ್ಫೋನ್ ತನ್ನ ಬೆಂಬಲದ ಅವಧಿಯ ಅಂತ್ಯವನ್ನು ತಲುಪಿದ್ದರೆ ಮತ್ತು ಇನ್ನು ಮುಂದೆ ಭದ್ರತಾ ಅಪ್‌ಡೇಟ್‌ಗಳನ್ನು ಸ್ವೀಕರಿಸದಿದ್ದರೆ ಇತ್ತೀಚಿನ ಅಪ್‌ಗ್ರೇಡ್ ಮಾಡುವುದನ್ನು ಪರಿಗಣಿಸಬಹುದು.

➥ಗೂಗಲ್ ಪ್ಲೇ ಹೊರತುಪಡಿಸಿ ಹೊರಗಿನಿಂದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಬೇಡಿ. ಇದಲ್ಲದೆ ಇಂಟರ್ನೆಟ್‌ನಲ್ಲಿ ಕಂಡುಬರುವ APK ಗಳನ್ನು ಸಹ ಸ್ಥಾಪಿಸಬಾರದು. ಯಾವುದೇ ವೆಬ್‌ಸೈಟ್‌ನಲ್ಲಿ ಪಾವತಿಸಿದ ಅಪ್ಲಿಕೇಶನ್‌ಗಳು ಉಚಿತವಾಗಿ ಲಭ್ಯವಿದ್ದರೆ ನೀವು ಅವುಗಳನ್ನು ಸ್ಥಾಪಿಸುವುದನ್ನು ತಪ್ಪಿಸಬೇಕು.

➥ನಿಮ್ಮ ಫೋನ್ ಅನ್ನು ಮತ್ತಷ್ಟು ಸುರಕ್ಷಿತವಾಗಿಡಲು ಗೂಗಲ್ ನಿಮಗೆ ಅನುಮತಿಸುತ್ತದೆ. ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನಿಮ್ಮ ಯಾವುದೇ ಭದ್ರತಾ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದರೆ ನೇರವಾಗಿ https://myaccount.google.com/security-checkup?pli=1 ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries