HEALTH TIPS

ಯಾವುದೇ ಹಣ ನೇರವಾಗಿ ಬಂದಿಲ್ಲ: ಜಾರ್ಜ್ ಸೊರೊಸ್ ಫಂಡಿಂಗ್ ಕುರಿತಂತೆ PMO ಸಲಹೆಗಾರ್ತಿ ಸ್ಪಷ್ಟನೆ

ನವದೆಹಲಿ: ಅಮೆರಿಕದ ಹೂಡಿಕೆದಾರ ಜಾರ್ಜ್ ಸೊರೊಸ್ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ. ಏತನ್ಮಧ್ಯೆ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಪ್ರೊಫೆಸರ್ ಶಮಿಕಾ ರವಿ ಅವರು ಕಾಂಗ್ರೆಸ್ ನಾಯಕ ಪವನ್ ಖೇರಾಗೆ ತಿರುಗೇಟು ನೀಡಿದ್ದು ಅವರ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ.

ಅಮೆರಿಕದ ಹೂಡಿಕೆದಾರ ಜಾರ್ಜ್ ಸೊರೊಸ್ ಅವರ ಸಂಸ್ಥೆಯಿಂದ ಡಾ. ಶಮಿಕಾ ರವಿ ಅವರು ಹಣವನ್ನು ಪಡೆದಿದ್ದಾರೆ ಎಂದು ಪವನ್ ಖೇರಾ ಆರೋಪಿಸಿದ್ದರು. ಇದಕ್ಕೆ ಶಮಿಕಾ ರವಿ ಸ್ಪಷ್ಟನೆ ನೀಡಿದ್ದು, ಪವನ್ ಖೇರಾ ಆರೋಪ ಸಂಪೂರ್ಣ ಸುಳ್ಳು. ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ 2006-07ರಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಗೆ ಧನಸಹಾಯ ಮಾಡಿತ್ತು. ಆ ಸಮಯದಲ್ಲಿ ಅವರು ಅಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ, ಈ ಹಣವನ್ನು ನೇರವಾಗಿ ಯಾವುದೇ ಅಧ್ಯಾಪಕರಿಗೆ ನೀಡಲ್ಲ ಎಂದು ಹೇಳಿದ್ದಾರೆ.

2006-07ರಲ್ಲಿ ಓಪನ್ ಸೊಸೈಟಿ ಐಎಸ್‌ಬಿಗೆ ಧನಸಹಾಯ ನೀಡಿತು. ಅಂದು ಅಲ್ಲಿ ನಾನು ವಿಷಯದ ಕುರಿತು ಬೋಧನೆ ಮತ್ತು ಸಂಶೋಧನೆಗೆ ಸಹಾಯಕ ಪ್ರಾಧ್ಯಾಪಕನಾಗಿದ್ದೆ. ಯಾವುದೇ ಅಧ್ಯಾಪಕರು ನೇರವಾಗಿ ಯಾವುದೇ ಹಣವನ್ನು ಸ್ವೀಕರಿಸಲಿಲ್ಲ. ಐಎಸ್‌ಬಿಯಲ್ಲಿ ಅವರ ವೃತ್ತಿಜೀವನವು 18 ವರ್ಷಗಳ ಕಾಲ ನಡೆಯಿತು ಎಂದು ಅವರು ಹೇಳಿದರು. ಅದಾದ ನಂತರ ತಾನು EAC-PM ಸೇರಿದ್ದಾಗಿ ಹೇಳಿದರು.

ಪವನ್ ಖೇಡ ಆರೋಪವೇನು?

ಶಮಿಕಾ ರವಿ ಅವರು ಓಪನ್ ಸೊಸೈಟಿ ಫೌಂಡೇಶನ್‌ನಿಂದ ಹಣವನ್ನು ಸ್ವೀಕರಿಸಿದ್ದಾರೆ ಎಂದು ಬುಧವಾರ ಪವನ್ ಖೇರಾ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪಿಎಂಒ ಅವರನ್ನು ತೆಗೆದುಹಾಕುತ್ತದೆಯೇ ಮತ್ತು ಅವರು 'ಭಾರತವನ್ನು ಅಸ್ಥಿರಗೊಳಿಸಲು' ಏನು ಮಾಡಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತದೆಯೇ? ಎಂದು ಟ್ವೀಟಿಸಿದ್ದರು.

ಕಾಂಗ್ರೆಸ್ ನಾಯಕರು ಜಾರ್ಜ್ ಸೊರೊಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಮಂಗಳವಾರ ಬಿಜೆಪಿ ಆರೋಪಿಸಿತ್ತು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಾರ್ಜ್ ಸೊರೊಸ್ ಫೌಂಡೇಶನ್ ಅನುದಾನಿತ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ಬಿಜೆಪಿಯ ಈ ಆರೋಪಕ್ಕೆ ಸಂಸತ್ತಿನಲ್ಲಿ ಭಾರೀ ಕೋಲಾಹಲ ಎದ್ದಿದೆ. ಬಿಜೆಪಿಯ ಇತ್ತೀಚಿನ ಆರೋಪವು ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ಸಂಸತ್ತಿನಲ್ಲಿ ಅದಾನಿ ಪ್ರಕರಣದಲ್ಲಿ ಕಾಂಗ್ರೆಸ್ ಆಕ್ರಮಣಕಾರಿ ನಿಲುವು ತಳೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries