ಛತ್ರಪುರ್: ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯಲ್ಲಿ ಪ್ರಾಂಶುಪಾಲರನ್ನು 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾನೆ.
ಧಾಮೊರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ರಾಚಾರ್ಯ ಎಸ್.ಕೆ. ಸಕ್ಸೇನಾ (55) ಎಂದು ಗುರುತಿಸಲಾಗಿದೆ.
ಶಾಲೆಯ ಶೌಚಾಲಯದ ಬಳಿ ಸಕ್ಸೇನಾ ಅವರು ಹೋಗುತ್ತಿದ್ದಾಗ ಜತೆಗಾರನ ಜತೆ ಬಂದ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿ, ನಂತರ ಪ್ರಾಂಶುಪಾಲರ ಸ್ಕೂಟರ್‌ನಲ್ಲೇ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಗಮ್ ಜೈನ್ ತಿಳಿಸಿದ್ದಾರೆ.
ಸಕ್ಸೇನಾ ಅವರು ಇದೇ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಲಿಂದ ಪ್ರಾಂಶುಪಾಲರಾಗಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆರೋಪಿ ಪತ್ತೆಗೆ ಬಲೆ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.