ಪ್ರೇಕ್ಷಕರ ಪೈಕಿ ಒಬ್ಬರು ಸ್ಪ್ರೇ ಅನ್ನು ಸಿಂಪಡಿಸಿದ ಬಳಿಕ ಸಮಸ್ಯೆ ಉಂಟಾಗಿದೆ ಎಂದು ಆರೋಪವಿದೆ. ಪ್ರೇಕ್ಷಕರು ಥಿಯೇಟರ್ ಆಡಳಿತ ಮಂಡಳಿಗೆ ಎಚ್ಚರಿಸಿದ ಬಳಿಕ ಅವರು ಬಾಂದ್ರಾ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಪೊಲೀಸರು, ಚಿತ್ರ ಪ್ರದರ್ಶನವನ್ನು 10-15 ನಿಮಿಷ ಸ್ಥಗಿತಗೊಳಿಸಿ, ಥಿಯೇಟರ್ ಒಳಗಿದ್ದ ಪ್ರೇಕ್ಷಕರನ್ನು ತಪಾಸಣೆ ನಡೆಸಿದ್ದಾರೆ. ಆದರೆ ಘಟನೆಗೆ ಕಾರಣವಾಗಬಹುದಾದ ಯಾವುದೇ ವಸ್ತುಗಳು ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿಲ್ಲ. ಆದರೆ, ತನಿಖೆ ಮುಂದುವರೆದಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.