ಇಸ್ರೇಲ್: ಇದೇ ಮೊದಲ ಬಾರಿಗೆ ಅಮೆರಿಕ ನಿರ್ಮಿತ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಹೌತಿ ಉಗ್ರರ ದಾಳಿ ತಡೆಯಲು ಇಸ್ರೇಲ್ ಬಳಕೆ ಮಾಡಿದೆ.
“ಥಾಡ್’ ಕ್ಷಿಪಣಿ ನಿಯಂತ್ರಕ ವ್ಯವಸ್ಥೆಯನ್ನು ಈ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕ ಇಸ್ರೇಲ್‌ಗೆ ನೀಡಿತ್ತು.
ಇದರ ಬಳಕೆ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಭೂಮಿಯ ವಾತಾವರಣದ ಒಳಗಿನಿಂದ ಹಾಗೂ ಹೊರಗಿನಿಂದ ಬರುವ 2 ರೀತಿಯ ಕ್ಷಿಪಣಿಗಳನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ವ್ಯವಸ್ಥೆಯನ್ನು ಟ್ರಕ್ ಮೇಲೆ ಅಳವಡಿಸಬಹುದಾಗಿದ್ದು, 870ರಿಂದ 3000 ಕಿ.ಮೀ.ವರೆಗಿನ ಕ್ಷಿಪಣಿಗಳನ್ನು ನಾಶ ಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ.