HEALTH TIPS

Uniform Civil Code: ಉತ್ತರಾಖಂಡದಲ್ಲಿ ದೇಶದಲ್ಲೇ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿ

ಉತ್ತರಾಖಂಡ:ದೇಶದಲ್ಲೇ ಮೊದಲ ಬಾರಿಗೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ. ಈ ಮಹತ್ವದ ಹೆಜ್ಜೆಯನ್ನು ಇರಿಸುವ ಮೂಲಕ ಉತ್ತರಾಖಂಡ ರಾಜ್ಯ ಇತಿಹಾಸ ಸೃಷ್ಟಿಸಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಮೂಲಕ ರಾಜ್ಯದ ಎಲ್ಲರೂ ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದ ವಿಚಾರದಲ್ಲಿ ಧರ್ಮದ ಆಧಾರವನ್ನು ಹೊರುತುಪಡಿಸಿ ನಿರ್ಧಾರ ತೆಗೆದುಕೊಳ್ಳುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದಾಗಿ ಈ ಹಿಂದೆ ಬಿಜೆಪಿ ಘೋಷಿಸಿತ್ತು. ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ತರುವ ಪ್ರಯತ್ನಗಳು ನಡೆದಿದ್ದವು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಭಾರತದ ಕೆಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿ ಮಾಡುವ ಪ್ರಯತ್ನಗಳು ನಡೆದಿತ್ತಾದರೂ, ಅದು ಯಶಸ್ವಿಯಾಗಿರಲಿಲ್ಲ. ಇದೀಗ ಉತ್ತರಾಖಂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ.

ಈ ಸಂಬಂಧ ಮಾತನಾಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಮುಂದಿನ ವರ್ಷದಿಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನ ಆಗಲಿದೆ ಎಂದಿದ್ದಾರೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಈ ಮಹತ್ವದ ನಿರ್ಧಾರದಿಂದ ರಾಜ್ಯದಲ್ಲಿ ಎಲ್ಲಾರಿಗೂ ಪ್ರಯೋಜನ ಆಗಲಿದೆ. ಸಮಾನತೆಗೆ ಆದ್ಯತೆ ನೀಡುವ ಮತ್ತು ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಒಂದೇ ಚೌಕಟ್ಟಿನ ಅಡಿ ತರುವ ಬದ್ಧತೆಯನ್ನು ಅವರು ತೋರಿಸಿದ್ದಾರೆ. ದೇಶದಲ್ಲಿ ಧರ್ಮ ಆಧಾರದ ಮೇಲೆ ವೈಯಕ್ತಿಕ ಕಾನೂನುಗಳು ಇವೆ. ಈ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲ್ಲೇ ಇದೆ.

ಇಂತಹ ಸಂಕೀರ್ಣ ಮತ್ತು ಸೂಕ್ಷ್ಮ ಸಮಸ್ಯೆಯನ್ನು ದಿಟ್ಟವಾಗಿ ನಿಭಾಯಿಸುವ ಮೂಲಕ ಉತ್ತರಾಖಂಡದ ಸಿ.ಎಂ ಪುಷ್ಕರ್ ಸಿಂಗ್ ಅವರು ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯಕ್ಕೆ ಆದ್ಯತೆ ಕೊಟ್ಟಿದ್ದಾರೆ. ಅವರ ದೂರದೃಷ್ಟಿಯ ನಿರ್ಧಾರವು ಉತ್ತರಾಖಂಡದಲ್ಲಿ ಆಧುನಿಕ ಆಡಳಿತ ಪ್ರಾರಂಭಿಸುವುದಕ್ಕೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶದ ಇತರ ರಾಜ್ಯಗಳಲ್ಲೂ ಸಹ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದಕ್ಕೆ ಈ ನಿರ್ಧಾರ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಏನೆಲ್ಲಾ ಒಳಗೊಂಡಿದೆ

* ಎಲ್ಲಾ ಸಮುದಾಗಳಲ್ಲೂ ಎರಡು ಮದುವೆ ಪದ್ಧತಿಗೆ ನಿಷೇಧ ಇರಲಿದೆ.

* ತ್ರಿವಳಿ ತಲಾಖ್, ಒತ್ತಾಯ ಪೂರ್ವಕ ಅಥವಾ ಕಾನೂನು ಬಾಹಿರ ವಿಚ್ಛೇದನದಂತಹ ಅಮಾನವೀಯ ಆಚರಣೆಗಳನ್ನು ನಿಷೇಧಿಸಲಾಗಿದೆ.

* ಶಾಸ್ತ್ರೋಕ್ತವಾಗಿ ನಡೆಯುವ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯುವ ವಿವಾಹಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲಾಗುತ್ತದೆ.

ವಿವಾಹಗಳ ಕಡ್ಡಾಯ ನೋಂದಣಿ

* ವಿವಾಹವಾದ ತಕ್ಷಣ ದಂಪತಿಗಳು ವಿವಾಹವನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

* ವಿವಾಹ ನೋಂದಣಿಗೆ ವಿಫಲವಾದರೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ.

* ಸಹಬಾಳ್ವೆ ಸಂಬಂಧಗಳನ್ನು ನೋಂದಾಯಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬಹುದು.

* ವಿವಾಹಗಳಲ್ಲಿ ವಂಚನೆ ಅಥವಾ ಎರಡು ಮದುವೆ ಆಗುವುದನ್ನು ತಡೆಗಟ್ಟಲು ನೋಂದಣಿ ದಾಖಲೆಗಳನ್ನು ಸಾರ್ವಜನಿಕವಾಗಿಡಬಹುದು.

ಮಕ್ಕಳ ಪಾಲನೆ ಹಾಗೂ ಪೋಷಣೆ

* ಮಗುವಿನ ತಂದೆ ಎನಿಸಿಕೊಂಡವರು ಕಾನೂನುಬದ್ಧ ಪೋಷಕ ಸ್ಥಾನವನ್ನು ಹೊಂದಿರುತ್ತಾರೆ. ತಾಯಿ ಎನಿಸಿಕೊಂಡವರು ಪಾಲಕರ ಸ್ಥಾನವನ್ನು ಹೊಂದಬಹುದಾಗಿದೆ.

* ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲನೆಯನ್ನು ತಾಯಂದಿರಿಗೆ ನೀಡಲಾಗುತ್ತದೆ.

* ಸಹಬಾಳ್ವೆ ಅಥವಾ ಕಾನೂನುಬಾಹಿರ ಸಂಬಂಧಗಳಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೂ ಸಮಾನ ಅನುವಂಶಿಕ ಹಕ್ಕುಗಳು ಸಿಗಲಿವೆ.

ದತ್ತು ನಿಯಮಾವಳಿ

* ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಗಳನ್ನು ದತ್ತು ನಿಯಮಾವಳಿಗಳಿಗೆ ಮಾರ್ಗದರ್ಶಕವಾಗಿ ಇರುವುದನ್ನು ಮುಂದುವರಿಸಲಾಗುತ್ತದೆ.

* ಏಕರೂಪ ನಾಗರಿಕ ಸಂಹಿತೆಯು ಹಿಂದೂಗಳ ದತ್ತು ನೋಂದಣಿಯನ್ನು ಕಡ್ಡಾಯಗೊಳಿಸುವುದಿಲ್ಲ.

ವೈಯಕ್ತಿಕ ಕಾನೂನು ಹಾಗೂ ಪದ್ಧತಿಗಳು

ಮರು ಮದುವೆಗೆ ಷರತ್ತುಗಳನ್ನು ವಿಧಿಸುವ ಹಳೆಯ ಪದ್ದತಿಗಳನ್ನು ಈ ಮಸೂದೆಯ ಮೂಲಕ ಕಾನೂನು ಬಾಹಿರಗೊಳಿಸುತ್ತದೆ.

ಪಂಚಾಯತಿಗಳಲ್ಲಿ ನಿರ್ಧರಿಸಲಾಗುವ ವಿಚ್ಛೇದನದಂತಹ ಸ್ಥಳೀಯ ಕಾನೂನುಗಳನ್ನು ರದ್ದು ಮಾಡಲಾಗುತ್ತದೆ.

ವಿವಾಹ ವಿಚ್ಛೇದನದಂತಹ ಸಂದರ್ಭಗಳಲ್ಲಿ ಜೀವನ ನಿರ್ವಹಣೆಗೆ ಜೀವನಾಂಶವನ್ನು ನೀಡುವ ಕಾನೂನನ್ನು ಈ ಮಸೂದೆಯು ಎತ್ತಿಹಿಡಿಯುತ್ತದೆ.

ಹೆಚ್ಚಿನ ಕಣ್ಗಾವಲು ಹಾಗೂ ದಂಡಗಳಂತಹ ಕ್ರಮಗಳು

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಬಹುಸಂಖ್ಯಾತ ಸಮುದಾಯಗಳು ನಡೆಸುವ ದಬ್ಬಾಳಿಕೆಗಳನ್ನು ಕ್ರಿಮಿನಲ್ ಕಾನೂನುಗಳ ವ್ಯಾಪ್ತಿಯಲ್ಲಿ ತರಲಾಗುತ್ತದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೇಲೆ ಏಕರೂಪ ನಾಕರಿಕ ಸಂಹಿತೆಯು ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಏಕರೂಪ ನಾಕರಿಕ ಸಂಹಿತೆ ಜಾರಿ ಏಕೆ ಮಹತ್ವದ್ದಾಗಿದೆ ?

ಏಕರೂಪ ನಾಕರಿಕ ಸಂಹಿತೆಯು ಏಕರೂಪದ ಕಾನೂನು ಜಾರಿಗೆ ಪ್ರಯತ್ನಿಸುತ್ತದೆ. ಈ ಮೂಲಕ ಸಮಾನತೆ ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಏಕೀಕರಣ ಉತ್ತೇಜಿಸುವ ಗುರಿ ಹೊಂದಿದೆ. ಅಂದಹಾಗೆ ಇದೀಗ ಇರುವ, ಪ್ರಸ್ತುತ ಹಿಂದೂ ವಿವಾಹ ಕಾಯ್ದೆ, ಶರಿಯತ್ ಕಾನೂನು & ಕ್ರಿಶ್ಚಿಯನ್ ವಿವಾಹ ಕಾಯ್ದೆಗಳ ರೀತಿ ವೈವಿಧ್ಯಮಯ ಧಾರ್ಮಿಕ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ. ಯುಸಿಸಿ ಅಂತಿಮ ಗುರಿ ಸಮಾನತೆಯನ್ನು ಖಾತ್ರಿಪಡಿಸುವುದು ಆಗಿದೆ.

ಏಕರೂಪ ನಾಕರಿಕ ಸಂಹಿತೆ ಜಾರಿಗೆ ಹಲವು ಸವಾಲುಗಳು

ಸಾಕಷ್ಟು ಗಮನ ಸೆಳೆದಿರುವ ಏಕರೂಪ ನಾಕರಿಕ ಸಂಹಿತೆ ಕಾನೂನು ಜಾರಿಗೆ ಸವಾಲುಗಳು ಕೂಡ ಇದೆ. ಈ ಕಾನೂನು ಜಾರಿಗೆ ಪೋಷಕರ ಪ್ರಾಮುಖ್ಯತೆ ವಿಚಾರ ಪ್ರಮುಖವಾಗಿ ದೊಡ್ಡ ಸವಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ವಿಮರ್ಶಕರು ಧ್ವನಿ ಎತ್ತಿದ್ದು, ಅಪರಾಧೀಕರಣದ ಮೇಲೆ ಭಾರಿ ಅವಲಂಬನೆ ಮತ್ತು ಕಣ್ಗಾವಲು ಕಾರ್ಯವಿಧಾನಗಳ ಸಂಭಾವ್ಯ ದುರುಪಯೋಗ ಸಾಧ್ಯತೆ ಬಗ್ಗೆ ಧ್ವನಿ ಎತ್ತಲಾಗಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ವಿಚಾರ ಪ್ರಸ್ತಾಪಿಸಿ ಧ್ವನಿ ಎತ್ತಿದ್ದಾರೆ ವಿಮರ್ಶಕರು. ಮತ್ತು ತಂದೆಯನ್ನು ಪ್ರಾಥಮಿಕ ರಕ್ಷಕರನ್ನಾಗಿ ಪರಿಗಣಿಸುವ ಹಿನ್ನೆಲೆ ಇದೂ ಕೂಡ ಒಂದು ಸವಾಲು ಆಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿಟ್ಟ ಹೆಜ್ಜೆ ಇಟ್ಟ ಉತ್ತರಾಖಂಡ ಸರ್ಕಾರ!

ಉತ್ತರಾಖಂಡ ಸರ್ಕಾರ ಇದೀಗ ಈ ರಾಜ್ಯದಲ್ಲಿ ಯುಸಿಸಿ ಜಾರಿಗೆ ಮುಂದಾಗಿರುವುದು ಇಡೀ ದೇಶದ ಗಮನ ಸೆಳೆಯುವ ಜೊತೆಗೆ, ಏಕರೂಪ ಕಾನೂನು ಜಾರಿಗೆ ಉತ್ತರಾಖಂಡ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತೆ ಆಗಿದೆ. ಎಲ್ಲಾ ಸಮುದಾಯವನ್ನು ಒಂದೇ ಕಾನೂನಿನ ಅಡಿಯಲ್ಲಿ ರಕ್ಷಣೆ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹಾಗೂ ಉತ್ತರಾಖಂಡ ಸರ್ಕಾರದ ಈ ಹೆಜ್ಜೆ ಭಾರತ ದೇಶದ ಇತರ ರಾಜ್ಯಗಳಲ್ಲಿ ಕೂಡ ಇಂತಹ ದಿಟ್ಟ ಹೆಜ್ಜೆ ಇಡಲು ಪ್ರೇರೇಪಿಸುತ್ತಿದೆ. ಇದು ಭಾರತದ ಕಾನೂನು ಹಾಗೂ ಸಾಮಾಜಿಕ ನ್ಯಾಯ ದೃಷ್ಟಿಯಲ್ಲಿ ಕೂಡ ಪ್ರಮುಖ ಕ್ಷಣವಾಗಿ ಉಳಿಯಲಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries