HEALTH TIPS

WhatsApp: ಬರ್ತಿದೆ ಹೊಸ ಫೀಚರ್; ಇನ್ಮುಂದೆ ಈ ಕೆಲಸ​ ಸುಲಭ.. ಬಳಕೆ ಹೇಗೆ?

 ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಪ್ (WhatsApp) ಹೊಸ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ. ಈ ಮೂಲಕ ತನ್ನ ಬಳಕೆದಾರರನ್ನು ಸೆಳೆಯುತ್ತಿದೆ. ಪ್ರಸ್ತುತ, ಮತ್ತೊಂದು ಹೊಸ ಫೀಚರ್ ಪ್ರಾರಂಭಿಸಲು ಸಜ್ಜಾಗಿದೆ. ಹೌದು, ಶೀಘ್ರದಲ್ಲೇ ಫೋಟೋಗಳ (ಇಮೇಜ್​) ಮೂಲ ಪತ್ತೆ ಹಚ್ಚಲು ರಿವರ್ಸ್ ಇಮೇಜ್ ಸರ್ಚ್ (Reverse Image Search) ಎಂಬ ಹೊಸ ವೈಶಿಷ್ಟ್ಯವನ್ನು ವಾಟ್ಸಪ್‌ನಲ್ಲಿ ಪರಿಚಯಿಸಲಿದೆ. ಬನ್ನಿ, ಇದರಿಂದ ಬಳಕೆದಾರರಿಗೆ ಪ್ರಯೋಜನ ಏನು? ಮತ್ತ ಹೊಸ ಫೀಚರ್‌ ಬಳಕೆ ಹೇಗೆ? ಎಂಬುದನ್ನು ತಿಳಿಯೋಣ.

ಹೌದು, ವಾಟ್ಸಪ್‌ ಮತ್ತೊಂದು ಹೊಸ ವೈಶಿಷ್ಟ್ಯವನ್ನು​ ಪರಿಚಯಿಸಿದೆ. ಫೋಟೋಗಳ ಮೂಲ ಪತ್ತೆ ಹಚ್ಚಲು ರಿವರ್ಸ್ ಇಮೇಜ್ ಸರ್ಚ್ ಎಂಬ ಫೀಚರ್ ತರುತ್ತಿದೆ. ವಾಟ್ಸಪ್‌ನಲ್ಲಿ ಫೋಟೋಗಳನ್ನು ಸರ್ಚ್​ ಮಾಡಲು ಸರ್ಚ್​ ಆನ್​ ವೆಬ್ (Search on Web)​ ಎಂಬ ಆಯ್ಕೆಯನ್ನು ತಂದಿದೆ. ಇದರ ಸಹಾಯದಿಂದ ನೀವು, ನೇರವಾಗಿ ವಾಟ್ಸಪ್‌ನಲ್ಲಿಯೇ ಫೋಟೋಗಳನ್ನು ಸರ್ಚ್​ ಮಾಡಬಹುದು. ಈ ಹೊಸ ಫೀಚರ್​ ಮೊದಲು ಬಿಟಾ ಬಳಕೆದಾರರಿಗೆ ಲಭ್ಯವಾಗುತ್ತದೆ. ಬಳಿಕ, ಎಲ್ಲರೂ ಇದರ ಲಾಭ ಪಡೆಯಬಹುದು.


ಹೊಸ ಫೀಚರ್‌ ಬಳಸುವುದು ಹೇಗೆ?

1. ಮೊದಲು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಓಪನ್ ಮಾಡಬೇಕು.

2. ಬಳಿಕ, ವಾಟ್ಸಪ್‌ ಚಾಟ್‌ನಲ್ಲಿ ಫೋಟೋ ಓಪನ್​ ಮಾಡಿದಾಗ ಬಲಭಾಗದಲ್ಲಿ ಮೂರು ಡಾಟ್​ಗಳ ಆಯ್ಕೆ ಕಂಡು ಬರುತ್ತದೆ.

3. ನೀವು ಡಾಟ್‌ಗಳ ಮೇಲೆ ಕ್ಲಿಕ್ಕಿಸಿದಾಗ ಹಲವು ಆಯ್ಕೆಗಳು ಗೋಚರಿಸುತ್ತವೆ.

4. ಇಲ್ಲಿ ಸರ್ಚ್‌ ಆನ್ ವೆಬ್ (Search on Web)​ ಎಂಬ ಆಯ್ಕೆ ಕಾಣಿಸುತ್ತದೆ.

5. ನೀವು ಈ ಆಪ್ಷನ್‌ ಮೇಲೆ ಕ್ಲಿಕ್​ ಮಾಡಬೇಕು. ಈ ಮೂಲಕ 'ರಿವರ್ಸ್​ ಇಮೇಜ್​ ಸರ್ಚ್' ಪ್ರಾರಂಭಿಸಬಹುದು.​

6. ನೀವು, ವೆಬ್​ ಸರ್ಚ್​ಗಾಗಿ ಗೂಗಲ್​ಗೆ ಕಳುಹಿಸುವ ಫೋಟೋಗಳು ಗೌಪ್ಯವಾಗಿರುತ್ತವೆ.

7. ಮುಖ್ಯವಾಗಿ, ನಿಮ್ಮ ಯಾವುದೇ ಮಾಹಿತಿಯನ್ನು ಮೆಟಾ ಜೊತೆ ಹಂಚಿಕೊಳ್ಳಲಾಗುವುದಿಲ್ಲ.

ಹೊಸ ಫೀಚರ್‌ ಯಾವಾಗ ಬರುತ್ತದೆ?

ಮೊದಲೇ ಹೇಳಿದಂತೆ, ರಿವರ್ಸ್​ ಇಮೇಜ್​ ಸರ್ಚ್ ಫೀಚರ್​ ಮೊದಲು ಬಿಟಾ ಬಳಕೆದಾರರಿಗೆ ಬರಲಿದೆ. ವಾಬಿಟಾ ಇನ್ಫೋ ತನ್ನ ಬ್ಲಾಗ್​ನಲ್ಲಿ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದೆ. ಮುಂಬರುವ ಕೆಲವು ವಾರಗಳಲ್ಲಿ ಈ ನೂತನ ಫೀಚರ್​ ಎಲ್ಲರಿಗೂ ಲಭ್ಯವಾಗಲಿದೆ ಎಂದು ಹೇಳಿದೆ.

ಹೊಸ ಫೀಚರ್‌ನಿಂದ ಬಳಕೆದಾರರಿಗೆ ಏನು ಲಾಭ?

ನೀವು ಇಮೇಜ್​ಗಳನ್ನು ಸರ್ಚ್​ ಮಾಡಿದಾಗ ಅದಕ್ಕೆ ಸಂಬಂಧಿಸಿದ ಮೂಲ, ಆ ಇಮೇಜ್ ಎಲ್ಲಿಂದ ಬಂದಿದೆ, ಆನ್​ಲೈನ್​ನಲ್ಲಿ ಎಮೇಜ್‌ ಅನ್ನು ಯಾರಾದರೂ ಬಳಕೆ ಮಾಡಿದ್ದಾರೆಯೇ? ಎಂಬ ಮಾಹಿತಿ ಸೇರಿದಂತೆ ಹೆಚ್ಚಿನ ವಿವರಗಳು ಗೋಚರಿಸುತ್ತವೆ. ಇಷ್ಟೇ ಅಲ್ಲದೆ, ಇಮೇಜ್‌ ಅನ್ನು ಯಾದಾರದೂ ಎಡಿಟ್ ಮಾಡಿರುವರೇ ಅಥವಾ ಏನಾದರೂ ತಪ್ಪಾಗಿ ಬದಲಾವಣೆ ಮಾಡಿದ್ದಾರೆಯೇ ಎಂಬ ವಿಷಯವನ್ನು ಸಹ ನೀವು ತಿಳಿಯಬಹುದು.

ರಿವರ್ಸ್​ ಇಮೇಜ್​ ಸರ್ಚ್ ಫೀಚರ್​ ಉದ್ದೇಶ

ವಾಟ್ಸಪ್‌ನಲ್ಲಿ ಇದಕ್ಕೂ ಮೊದಲು ನೇರವಾಗಿ ಇಮೇಜ್‌ ಬಗ್ಗೆ ಸರ್ಚ್‌ ಮಾಡುವ ಆಯ್ಕೆ ಇರಲಿಲ್ಲ. ಇಮೇಜ್‌ ಬಗ್ಗೆ ಸರ್ಚ್​ ಮಾಡಲು ನೀವು ಇತರೆ ಆಪ್‌ಗಳು ಅಥವಾ ಬ್ರೌಸರ್​ಗಳನ್ನು ಬಳಸಬೇಕಿತ್ತು. ಪ್ರಸ್ತುತ, ವಾಟ್ಸಪ್ ಪರಿಚಯಿಸುತ್ತಿರುವ ಹೊಸ ರಿವರ್ಸ್​ ಇಮೇಜ್​ ಸರ್ಚ್ ವೈಶಷ್ಟ್ಯದಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇನ್ನುಮುಂದೆ ವಾಟ್ಸಪ್ ಬಳಕೆದಾರರು ಇಮೇಜ್‌ ಸರ್ಚ್‌ ಮಾಡಲು ಥರ್ಡ್ ಆಪ್​ ​ ಅಥವಾ ಬ್ರೌಸರ್​ಗಳನ್ನು ಬಳಸುವ ಅಗತ್ಯವಿಲ್ಲ. ವಾಟ್ಸಪ್‌ನಲ್ಲಿಯೇ ಹೊಸ ಫೀಚರ್‌ ಮೂಲಕ ಡೈರೆಕ್ಟ್‌ ಆಗಿ ಇಮೇಜ್​ ಸರ್ಚ್​ ಮಾಡಬಹುದು. ನೀವು ವಾಟ್ಸಪ್‌ ಮೂಲಕ ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿಡುವುದು ಈ ರಿವರ್ಸ್​ ಇಮೇಜ್​ ಸರ್ಚ್ ವೈಶಿಷ್ಟ್ಯದ ಪ್ರಮುಖ ಉದ್ದೇಶವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries