HEALTH TIPS

ದೆಹಲಿ | ದಟ್ಟ ಮಂಜು: 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

ನವದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.

'ದಟ್ಟ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಸಂಭವಿಸಿದೆ.

CAT III ಸಾಮರ್ಥ್ಯದ ವಿಮಾನಗಳು ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುತ್ತಿವೆ. ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಏರ್‌ಪೋರ್ಟ್‌ಗೆ ಹೋಗಿ' ಎಂದು ಇಂಡಿಗೊ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

CAT III ಸಾಮರ್ಥ್ಯದ ವಿಮಾನಗಳು ಕಡಿಮೆ ಗೋಚರತೆಯಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ.

Flightradar.com ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ಏರುಪೇರಾಗಿದೆ.

ವಿಮಾನಗಳ ಕಾರ್ಯಾಚರಣೆ ಬಗ್ಗೆ ವಿಮಾನಯಾನ ಕಂಪನಿಗಳ ಜೊತೆ ಸಂಪರ್ಕದಲ್ಲಿರಿ ಎಂದಿರುವ ದೆಹಲಿ ವಿಮಾನ ನಿಲ್ದಾಣವು, ಉಂಟಾದ ಸಮಸ್ಯೆಗೆ ಪ್ರಯಾಣಿಕರ ಕ್ಷಮೆ ಕೋರಿದೆ.

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 1,300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries