ಕಾಸರಗೋಡು: ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 1076634 ಮತದಾರನ್ನು ಒಳಗೊಂಡ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ 2442 ಮತದಾರರ ಹೆಚ್ಚಳವಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 526098 ಪುರುಷ ಮತದಾರರು ಮತ್ತು 550525 ಮಹಿಳಾ ಮತದಾರರಿದ್ದಾರೆ. ಹೊಸ ಮತದಾರರ ಪಟ್ಟಿಯಲ್ಲಿ ಒಟ್ಟು 1218 ಪುರುಷ ಮತದಾರರು ಮತ್ತು 1225 ಮಹಿಳಾ ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ. 11 ಜನ ತೃತೀಯ ಲಿಂಗಿ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 12171 ಚೊಚ್ಚಲ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟ 15423 ಹಿರಿಯ ಮತದಾರರು ಪಟ್ಟಿಯಲ್ಲಿದ್ದಾರೆ. ಒಟ್ಟು 2226 ಮತದಾರರ ಹೆಚ್ಚಳವಾಗಿದೆ.
ಕ್ಷೇತ್ರವಾರು ಮತದಾರರು:
ಮಂಜೇಶ್ವರ ಕ್ಷೇತ್ರದಲ್ಲಿ 113069 ಪುರುಷ ಮತದಾರರು ಮತ್ತು 112704 ಮಹಿಳಾ ಮತದಾರರನ್ನೊಳಗೊಂಡಂತೆ ಒಟ್ಟು 225773 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ 102311 ಪುರುಷ ಮತದಾರರು, 103455 ಮಹಿಳಾ ಮತದಾರರು, ಒಬ್ಬರು ಲಿಂಗಾಯತ ಮತದಾರರು ಸೇರಿದಂತೆ 205767 ಮತದಾರರಿದ್ದಾರೆ. ಉದುಮ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ 107046 ಪುರುಷ ಮತದಾರರು, 112204 ಮಹಿಳಾ ಮತದಾರರು ಮತ್ತು ಮೂವರು ತೃತೀಯ ಲಿಂಗಿಗಳು ಸೇರಿದಂತೆ 219253 ಮಂದಿ ಮತದಾರರಿದ್ದಾರೆ.
ಕಾಞಂಗಾಡು ಕ್ಷೇತ್ರದಲ್ಲಿ ಒಟ್ಟು 221197 ಮತದಾರರಿದ್ದು, ಇವರಲ್ಲಿ 106193 ಪುರುಷ ಮತದಾರರು, 114999 ಮಹಿಳಾ ಮತದಾರರು ಮತ್ತು ಐವರು ತೃತೀಯಲಿಂಗಿ ಮತದಾರರಿದ್ದಾರೆ.
ತ್ರಿಕರಿಪುರ ಕ್ಷೇತ್ರದಲ್ಲಿ 97479 ಮಂದಿ ಪುರುಷ ಮತದಾರರು, 107163 ಮಹಿಳಾ ಮತದಾರರು ಹಾಗೂ ಇಬ್ಬರು ತೃತೀಯಲಿಂಗಿಗಳು ಸೇರಿದಂತೆ 204644 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.