ತಿರುವನಂತಪುರಂ: ಕೇರಳ ಅರಣ್ಯ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ವಕೀಲರು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸರ್ಕಾರಕ್ಕೆ ತಿಳಿಸುವ ದಿನಾಂಕವನ್ನು ಜನವರಿ 10 ರವರೆಗೆ ವಿಸ್ತರಿಸಲಾಗಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ಪ್ರಕಟಿಸಿದ್ದಾರೆ.
ಪ್ರಸ್ತಾವನೆಗಳನ್ನು ಸಲ್ಲಿಸಲು ಹಿಂದಿನ ಗಡುವು ಡಿಸೆಂಬರ್ 31 ರ ವರೆಗಿತ್ತು. ವಿಧೇಯಕದ ಮಲಯಾಳಂ ಪ್ರತಿಯನ್ನು ವಿಧಾನಸಭೆಯ ವೆಬ್‍ಸೈಟ್‍ನಲ್ಲಿ ಲಭ್ಯವಾಗಿಸುವಲ್ಲಿ ವಿಳಂಬವಾಗಿರುವುದರಿಂದ ವಿಸ್ತರಣೆ ಮಾಡಲಾಗಿದೆ. ಸಲಹೆಗಳನ್ನು ಈ ಕೆಳಗಿನ ಅಧಿಕೃತ ವಿಳಾಸಕ್ಕೆ ಅಥವಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬಹುದು. ಅಸ್ತಿತ್ವದಲ್ಲಿರುವ ಕಾನೂನನ್ನು ಅರ್ಥಮಾಡಿಕೊಂಡ ನಂತರ, ಮಸೂದೆಗೆ ತಿದ್ದುಪಡಿಗಳ ಪ್ರಸ್ತಾಪಗಳನ್ನು ಸಲ್ಲಿಸಬೇಕು. ಪ್ರಕಟಿತ ಮಸೂದೆಯು ಕೇರಳ ವಿಧಾನಸಭೆಯ ವೆಬ್‍ಸೈಟ್ www.niyamasabha.org ನಲ್ಲಿ ಲಭ್ಯವಿದೆ.