ನ್ಯೂಯಾರ್ಕ್: ಕ್ಯಾಲಿಪೋರ್ನಿಯಾದ ಲಾಸ್‌ಏಂಜಲೀಸ್‌ನಲ್ಲಿ ಉಲ್ಬಣಿಸಿರುವ ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿದೆ.
ಅಮೆರಿಕದ ಚಿತ್ರೋದ್ಯಮಕ್ಕೆ ಮನೆಯಂತಿದ್ದ ಹಾಲಿವುಡ್ ಪ್ರದೇಶ ಸಂಪೂರ್ಣ ನಾಶವಾಗಿದ್ದು, ಪ್ರಿಯಾಂಕಾ ಚೋಪ್ರಾ, ನೋರಾ ಫತೇಹಿ ಸೇರಿ ಹಲವು ನಟ-ನಟಿಯರ ಮನೆಗಳು ಸುಟ್ಟು ಭಸ್ಮವಾಗಿವೆ.
ಈವರೆಗೆ 10 ಮೃತದೇಹಗಳ ದೊರಕಿವೆ. ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಖಚಿತವಾಗಿಲ್ಲ, ಬೆಂಕಿ ಆವರಿಸಿಕೊಂಡಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಸಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ' ಎಂದು ವೈದ್ಯಕೀಯ ಪರೀಕ್ಷಕರ ವಿಭಾಗ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ.
ಲೂಟಿ ಆರಂಭ
ಕಾಳ್ಗಿಚ್ಚಿನ ಬೆಂಕಿ ಹೊತ್ತಿಉರಿದು ಅವಶೇಷಗಳು ಬಾಕಿಯಾದ ಪ್ರದೇಶಗಳಲ್ಲಿ ಲೂಟಿ, ಕಳ್ಳತನ ಆರಂಭವಾಗಿದೆ. ಈ ಹಿನ್ನೆಲೆ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ನಿಯಂತ್ರಿಸಲು ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರಿದಿದೆ ಈ ವೇಳೆ ಕಳ್ಳತನವಾಗುತ್ತಿರುವುದು ಗಮನಕ್ಕೆ ಬಂದಿದೆ, ಹೀಗಾಗಿ ಸ್ಥಳೀಯ ಅಧಿಕಾರಿಗಳೂ ಕ್ರಮ ಕೈಗೊಂಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.