ಕಾಸರಗೋಡು: ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ ಜ. 10 ಹಾಗೂ 11ರಂದು ಕಾಸರಗೋಡು ನಗರಸಭಾಂಗಣದಲ್ಲಿ ಜರುಲಿದೆ. 10ರಂದು ಬೆಳಗ್ಗೆ 9ಕ್ಕೆ ಬೀರಂತಬೈಲು ಕನ್ನಡ ಅದ್ಯಪಕರ ಭವನದಿಂದ ಭವ್ಯ ಮೆರವಣಿಗೆ ನಗರಸಭಾಂಗಣದ ವರೆಗೆ ನಡೆಯಲಿದ್ದು, 10ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿರುವುದಾಗಿ ಸಂಘಟನೆ ರಾಜ್ಯ ಸಮಿತಿ ಅದ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸುವರು. ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ವಿಶೇಷ ಅತಿಥಿ, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಉದುಮ ಶಾಸಕ ಸಿ.ಎಚ್ ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಖ್ಯಾತ ಅಂಕಣಕಾರ, ಚಿಂತಕ ಮಹಾಬಲೇಶ್ವರ ರಾವ್ ಪ್ರಧಾನ ಭಾಷಣ ಮಾಡುವರು. ಮಧ್ಯಾಹ್ನ 1.30ರಿಂದ ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯುವುದು. 3.30ಕ್ಕೆ ಅಧ್ಯಾಪಕರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿರುವುದು.
ಜ. 11ರಂದು ಬೆಳಗ್ಗೆ 9.30ಕ್ಕೆ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯುವುದು. ವಿಶ್ರಾಂತ ಉಪನ್ಯಾಸಕ ಶಿಕಾರಿಪುರ ಕೃಷ್ಣಮೂರ್ತಿ ಸಮಾರಂಭ ಉದ್ಘಾಟಿಸುವರು. ಸಂಘಟನೆ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅದ್ಯಕ್ಷತೆ ವಹಿಸುವರು. ಮಧ್ಯಾಹ್ನ 1.30ಕ್ಕೆ ಪ್ರತಿನಿಧಿ ಸಮ್ಮೇಳನ ನಡೆಯುವುದು. ಸಂಜೆ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಘಟನೆ ರಾಜ್ಯ ಸಮಿತಿ ಅದ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅದ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸುವರ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದೇವಯ್ಯ ಹಾಗೂ ಕಾಸರಗೋಡು ನಗರಸಭಾ ಅದ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಪತ್ರಕರ್ತರಾದ ಡಾ ಪ್ರಿಯಾ ಹರೀಶ್ ಮುಖ್ಯ ಭಾಷಣ ಮಡುವರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಎಂ, ಜಯರಾಮ ಸಿ.ಎಚ್, ಸುಕೇಶ ಎ, ವಿಜಯಕುಮಾರಿ ಬಿ, ಪೂರ್ಣಿಮ ಎಂ, ವಿನೋದ್ರಾಜ್ ಉಪಸ್ಥಿತರಿದ್ದರು.