ಕೊಚ್ಚಿ: ಕಾಸರಗೋಡು ಪೆರಿಯದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್ ಮತ್ತು ಕೃಪೇಶ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.
ಪ್ರಕರಣದಲ್ಲಿ ಹತ್ತು ಆರೋಪಿಗಳಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 1 ರಿಂದ 8 ಮತ್ತು 10 ಮತ್ತು 15 ಆರೋಪಿಗಳಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1 ಲಕ್ಷ ದಂಡವನ್ನೂ ವಿಧಿಸಲಾಗಿದೆ.
ಮಾಜಿ ಶಾಸಕ ಹಾಗೂ ಸಿಪಿಎಂ ನಾಯಕ ಕೆ.ವಿ.ಕುಂಞÂ್ಞ ರಾಮನ್ ಅವರಿಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಎರ್ನಾಕುಳಂ ಸಿಬಿಐ ಕೋರ್ಟ್ ಶಿಕ್ಷೆ ವಿಧಿಸಿದೆ. ಆರು ವರ್ಷಗಳ ಕಾನೂನು ಹೋರಾಟ ಮತ್ತು 20 ತಿಂಗಳ ವಿಚಾರಣೆಯ ನಂತರ ತೀರ್ಪು ಪ್ರಕಟಿಸಲಾಗಿದೆ.
ಶಿಕ್ಷೆಗೆ ಗರಿಷ್ಠ ಸಡಿಲಿಕೆ ನೀಡಬೇಕು ಎಂದು ಆರೋಪಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅಪರಾಧವು ಅಪರೂಪವಲ್ಲ ಎಂದು ಆರೋಪಿಗಳು ವಾದಿಸಿದ್ದರು. ಆರೋಪಿಗಳು ಸಾಮಾನ್ಯ ಅಪರಾಧಿಗಳಲ್ಲ. ಒಂದು ಹಂತದಲ್ಲಿ ಇದು ಘಟಿಸಿಹೋಯಿತೆಂದು ಗೋಗರೆದಿದ್ದರು. ಅನೇಕ ಸಾಕ್ಷಿ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಪ್ರತಿವಾದಿ ನ್ಯಾಯಾಲಯದಲ್ಲಿ ವಾದಿಸಿದರು. 24 ಆರೋಪಿಗಳ ಪೈಕಿ 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಪ್ರಕರಣದಲ್ಲಿ ಉದುಮದ ಮಾಜಿ ಶಾಸಕ ಕೆ.ವಿ.ಕುಂಞÂ್ಞ ರಾಮನ್ ಮತ್ತು ಸಿಪಿಎಂ ಉದುಮ ಪ್ರದೇಶ ಮಾಜಿ ಕಾರ್ಯದರ್ಶಿ ಕೆ.ಮಣಿಕಂಠನ್ ಸೇರಿದಂತೆ 14 ಮಂದಿ ತಪ್ಪಿತಸ್ಥರೆಂದು ಎರ್ನಾಕುಳಂನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮೊದಲ ಆರೋಪಿ, ಸಿಪಿಎಂ ಪೆರಿಯಾ ಸ್ಥಳೀಯ ಸಮಿತಿ ಸದಸ್ಯ ಎ ಪೀತಾಂಬರನ್ ಸಹಿತ ಎಂಟು ಆರೋಪಿಗಳ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ.
ಟಿ ರಂಜಿತ್ ಮತ್ತು ಎ ಸುರೇಂದ್ರನ್ ಸಾಕ್ಷ್ಯಗಳನ್ನು ನಾಶಪಡಿಸಿದ್ದು ಆರೋಪಿಗಳಿಗೆ ರಕ್ಷಣೆ ನೀಡಿರುವುದು ಕಂಡುಬಂದಿದೆ. ಮಾಜಿ ಶಾಸಕ ಕೆ.ವಿ.ಕುಂಞÂ್ಞ ರಾಮನ್ ಸೇರಿದಂತೆ ನಾಲ್ವರು ಎರಡನೇ ಆರೋಪಿಯನ್ನು ಪೆÇಲೀಸ್ ಕಸ್ಟಡಿಯಿಂದ ಅಕ್ರಮವಾಗಿ ಸಾಗಿಸಿದ ಆರೋಪ ಎದುರಿಸುತ್ತಿದ್ದರು.