ಉಪ್ಪಳ: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‍ಮೆಂಟ್ (ಐಸಿವೈಎಂ) ಕಾಸರಗೋಡು ಡೀನರಿ ಹಾಗೂ ಕ್ರೈಸ್ಟ್ ಕಿಂಗ್ ಯೂತ್ ಮೂವ್‍ಮೆಂಟ್ (ಸಿಕೆವೈಎಂ) ಕಯ್ಯಾರ್ ಘಟಕದ ಸಹಯೋಗದೊಂದಿಗೆ ಸಾಂಸ್ಕøತಿಕ ಹಬ್ಬ ಕಲೋತ್ಸವ-2025 ಜನವರಿ 11 ಮತ್ತು 12 ರಂದು ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಮೈದಾನದಲ್ಲಿ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಕಲೋತ್ಸವದಲ್ಲಿ ಮನರಂಜನಾ ಚಟುವಟಿಕೆ ಗಳ ಜೊತೆಗೆ ವಿವಿಧ ಸ್ಪರ್ಧೆಗಳು, ಹಾಡು, ನೃತ್ಯಗಳು ಮೆರುಗು ನೀಡಲಿದೆ.
ಜ 11 ರಂದು ನಡೆಯುವ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಐ ಸಿ ವೈ ಎಂ ನಿರ್ದೇಶಕ ಫಾ.ಅಶ್ವಿನ್ ಲೋಹಿತ್ ಕಾರ್ಡೋಜ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ದಾಯ್ಜಿವಲ್ಡ್ ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಚಿತ್ರನಟಿ ವೆನ್ಸಿಟಾ ಡಯಾಸ್, ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಮೆಲ್ವಿನ್ ಫೆರ್ನಾಲ್ ಉಪಸ್ಥಿತರಿರುವರು.
ವೇದಿಕೆಯಲ್ಲಿ ಐ ಸಿ ವೈ ಎಂ ಕಾಸರಗೋಡು ವಲಯ ನಿರ್ದೇಶಕ ಫಾ.ವಿಶಾಲ್ ಮೋನಿಸ್, ಅನಿಮೇಟರ್ ಸಿಸ್ಟರ್ ಸೆವ್ರಿನ್ ಡಿ ಕುನ್ಹಾ, ಐಸಿವೈಎಂ ವಲಯ ಅಧ್ಯಕ್ಷ ಮೆಲ್ವಿನ್ ಡಿ ಸೋಜ, ಕಾರ್ಯದರ್ಶಿ ನೀಮಾ ಡಿ.ಸಿಲ್ವಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ.ಸೋಜ, ಕಾರ್ಯದರ್ಶಿ ಝೀನಾ ಡಿಸೋಜ, ಸಿ.ಕೆ.ವೈ.ಎಂ. ಕಯ್ಯಾರ್ ಘಟಕದ ಅಧ್ಯಕ್ಷ ಪ್ರೀಮಲ್ ಡಿ ಸೋಜ, ಕಾರ್ಯದರ್ಶಿ ಜೋಯಲ್ ಕಿಶನ್ ಮೊದಲಾದವರು ಉಪಸ್ಥಿತರಿರುವರು.
12 ರಂದು ನಡೆಯಲಿರುವ ಸಮಾರಂಭದಲ್ಲಿ ಕಾಸರಗೋಡು ವಲಯ ವಿಗಾರ್ ವಾರ್ ಫಾ. ಸ್ಟ್ಯಾನಿ ಪಿರೇರಾ ಬೇಳ ಅಧ್ಯಕ್ಷತೆ ವಹಿಸುವರು. ದಾಯ್ಜಿ ವಲ್ಡ್ ನ ಪ್ರೊಡಕ್ಷನ್ ಡೈರಕ್ಟರ್ ಸ್ಟ್ಯಾನಿ ಬೇಳ, ಚಿತ್ರನಟಿ ಅಶ್ವಿನಿ ಡಿ.ಕೋಸ್ಟ, ಕನ್ನಡ ಬಿಗ್ ಬಾಸ್ ನ ರೀಮಾ ಡಯಾಸ್, ಮಂಗಳೂರು ವಿ ಟೆಕ್ ನ ನವೀನ್ ಡಿಸೋಜ, ಮಂಜೇಶ್ವರ ಠಾಣಾ ಸರ್ಕಲ್ ಇನ್ಸ್‍ಪೆಕ್ಟರ್ ರಜೀಶ್ ತೆರುವತ್ ಪೀಡಿಕಾಯಿಲ್ ಮೊದಲಾದವರು ಉಪಸ್ಥಿತರಿರುವರು.
11 ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ಹಾಗೂ 12ರಂದು ಬೆಳಿಗ್ಗೆ 11 ರಿಂದ ರಾತ್ರಿ 10.30 ರ ತನಕ ಕಾರ್ಯಕ್ರಮ ನಡೆಯಲಿದೆ
ಕಾಸರಗೋಡು ವಲಯದ 16 ಚರ್ಚ್‍ಗಳ ಸ್ಪರ್ಧಾಳುಗಳು ಈ ಕಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಐಸಿ ವೈ ಎಂ ವಲಯ ನಿರ್ದೆಶಕ ಫಾ. ವಿಶಾಲ್ ಮೋನಿಸ್ ತಿಳಿಸಿದ್ದಾರೆ.