HEALTH TIPS

ಕುಳೂರು ಆದರ್ಶನಗರದಲ್ಲಿ ಜನವರಿ 11ರಿಂದ 13ರ ವರೆಗೆ ಶ್ರೀಹರಿ ಭಜನಾಮಂದಿರ ಪ್ರವೇಶ- ದೇವರ ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ

ಮಂಜೇಶ್ವರ: ಕುಳೂರು ಆದರ್ಶನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹರಿ ಭಜನಾ ಮಂದಿರದ ಪ್ರವೇಶ ಹಾಗೂ ದೇವರ ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ ಜ. 11 ರಿಂದ   13ರ ವರೆಗೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಶ್ರೀಗಳ ಶುಭಾಶೀರ್ವಾದದೊಂದಿಗೆ ಕುಳೂರು ಬೀಡು ದಾಸಣ್ಣ ಆಳ್ವರ ಮಾರ್ಗದರ್ಶನದಲ್ಲಿ, ಹರಿನಾರಾಯಣ ಕಲ್ಯಾಣತ್ತಾಯರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉರ್ಮಿಯವರ ಪೌರೋಹಿತ್ಯದಲ್ಲಿ ಜರಗಲಿದೆ.

ಜ.11 ರಂದು ಸಂಜೆ 3ರಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ಮಂದಿರದವರೆಗೆ ನಡೆಯಲಿದೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉರ್ಮಿಯವರು ದೀಪ ಬೆಳಗಿಸುವರು.  ಶ್ರೀಹರಿ ಭಜನಾ ಮಂದಿರ ಸೇವಾಸಮಿತಿ ಅಧ್ಯಕೆ ಕೃಷ್ಣವೇಣಿ ಡಿ ಶೆಟ್ಟಿ ಕುಳೂರು ಪಾದೆ ಅಧ್ಯಕ್ಷತೆ ವಹಿಸುವರು. ಶ್ರೀಹರಿಭಜನಾ ಮಂದಿರ ಸೇವಾಸಮಿತಿ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಸದಾಶಿವಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಪಿ ಆರ್ ಶೆಟ್ಟಿ ಕುಳೂರು ಪೊಯ್ಯೇಲು,  ಮುಂಬಯಿ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳುಗಳಾದ ಅರಿಬೈಲು ಗೋಪಾಲ ಶೆಟ್ಟಿ, ಕೃಷ್ಣ ಶಿವಕೃಪಾ ಕುಂಜತ್ತೂರು, ಕಿರಣ್ ಶೆಟ್ಟಿ ಮಾಡ, ಉದ್ಯಮಿ ಹರೀಶ್ ಭಂಡಾರಿ ಕೌಡೂರು ಬೀಡು, ಮೀಂಜ ಗ್ರಾಮ ಪಂಚಾಯತಿ ಅಧ್ಯಕೆ ಸುಂದರಿ ಆರ್ ಶೆಟ್ಟಿ, ಉದ್ಯಮಿ ನಾರಾಯಣ ಸಂತಡ್ಕ, ಸಾಮಾಜಿ ಧಾರ್ಮಿಕ ಮುಂದಾಳು ಕಾರ್ತಿಕ್ ಶೆಟ್ಟಿ ಮಜಿಬೈಲು, ಉದ್ಯಮಿ ಪ್ರಕಾಶ್ ಶೆಟ್ಟಿ ಬೆಜ್ಜಂಗಳ, ವಿದ್ಯಾಧರ ಶೆಟ್ಟಿ ಹೊಸಮನೆ ಕುಳೂರು, ಮನೋಜ್ ಹೊಸಕಟ್ಟೆ, ಕುಳೂರು ವಾರ್ಡು ಸದಸ್ಯ ಜನಾರ್ಧನ ಪೂಜಾರಿ, ಕುಳೂರು ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಹಿರಿಯರಾದ ದಿನಕರ ಶೆಟ್ಟಿ ಚಾರ್ಲ, ಸುಬ್ರಾಯ ಆಚಾರ್ಯ ಕಾಯರ್ ತೊಟ್ಟಿ, ಪೋಲೀಸ್ ಅಧಿಕಾರಿ ಕೊರಗಪ್ಪ, ಕುಳೂರಿನ ಶ್ರೀ ನಿತ್ಯಾನಂದ ಭಜನಾಮಂದಿರದ ಅಧ್ಯಕ್ಷ ಮಾಧವ ಕೆ ಕುಳೂರು ಭಾಗವಹಿಸಲಿದ್ದಾರೆ.ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಜರಗಲಿದೆ.

ಜ. 12ರಂದು ಭಾನುವಾರ ಬೆಳಿಗ್ಗೆ 9ಕ್ಕೆ ಶ್ರೀಹರಿ ಭಜನಾಮಂದಿರ ಪ್ರವೇಶ, ದೇವರ ಸ್ವರ್ಣಲೇಪಿತ ರಜತಚಿತ್ರ ಫಲಕ ಪ್ರತಿಷ್ಠೆ ಕಲಶ ಪ್ರೋಕ್ಷಣೆ ಜರಗಲಿದೆ. 

ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಗುರುದೇವಾನಂದ ಸ್ವಾಮಿಜಿ ಒಡಿಯೂರು,  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಆಶೀರ್ವಚನ ನೀಡುವರು. 

ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಕಾಸರಗೋಡು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಕರ್ನಾಟಕದ ಮಾಜಿ ಸಚಿವ ರಮಾನಾಥ ರೈ ಬಂಟ್ವಾಳ, ಕಾಸರಗೋಡು ಜಿಲ್ಲಾ ಬಿ ಜೆ ಪಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಉದ್ಯಮಿ ಕೆ ಕೆ ಶೆಟ್ಟಿ ಮುಂಡಪ್ಪಳ್ಳ, ಉದ್ಯಮಿ ರಘುರಾಮ ಶೆಟ್ಟಿ ಕುಳೂರು ಕನ್ಯಾನ, ಭಾಗವಹಿಸುವರು. ಅತಿಥಿಗಳಾಗಿ ಉದ್ಯಮಿ ಪಿ ಆರ್ ಶೆಟ್ಟಿ ಕುಳೂರು ಪೊಯ್ಯೇಲು, ನಾರಾಯಣ ಹೆಗ್ಡೆ ಕೋಡಿಬೈಲು, ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ, ಚಂದ್ರಶೇಖರ ಜ್ಯೋತಿಷಿ ಚಿಗುರುಪಾದೆ, ಡಾ. ಸಂದೀಪ್ ಹೆಗ್ಡೆ ಕುಳೂರು ಬೀಡು, ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು, ಸೀತಾರಾಮ ಶೆಟ್ಟಿ ತಿಂಬರ, ಉದ್ಯಮಿ ಮೋಹನ್ ಹೆಗ್ಡೆ ಬೆಜ್ಜ, ಕೆ. ಆರ್ ಜಯಾನಂದ, ಶ್ರೀಧರ ಶೆಟ್ಟಿ ಗುಬ್ಯ, ಯೋಗೀಶ ರಾವ್ ಚಿಗುರುಪಾದೆ, ಕೃಷ್ಣಪ್ಪ ಪೂಜಾರಿ ದೇರಂಬಳ  ಭಾಗವಹಿಸುವರು. ರಾತ್ರಿ 6.30ರಿಂದ ಪಾವಂಜೆ ಮೇಳದವರಿಂದ ಶ್ರೀಹರಿ ಲೀಲಾಮೃತ ಯಕ್ಷಗಾನ ಬಯಲಾಟ ಜರಗಲಿದೆ. ಜ. 13ರ ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡದವರಿಂದ ಭಜನೆ ಜರಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries