HEALTH TIPS

ಜ.11 ರಿಂದ ವಲಯ ಐಸಿವೈಎಂ ನೇತೃತ್ವದಲ್ಲಿ ಕಲೋತ್ಸವ- 2025 ಕಾರ್ಯಕ್ರಮ

ಕಾಸರಗೋಡು : ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‍ಮೆಂಟ್(ಐಸಿವೈಎಂ) ಕಾಸರಗೋಡು ಡೀನರಿ ಹಾಗೂ ಕ್ರೈಸ್ಟ್ ಕಿಂಗ್ ಯೂತ್‍ಮೂವ್‍ಮೆಂಟ್ (ಸಿಕೆವೈಎಂ) ಕಯ್ಯಾರ್ ಘಟಕದ ಸಹಯೋಗದೊಂದಿಗೆ ಸಾಂಸ್ಕøತಿಕ ಹಬ್ಬ 'ಕಲೋತ್ಸವ-2025'ಜನವರಿ 11 ಮತ್ತು 12 ರಂದು ಕಯ್ಯಾರ್ ಕ್ರಿಸ್ತರಾಜದೇವಾಲಯದ ಮೈದಾನದಲ್ಲಿ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಕಲೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮ,  ವಿವಿಧ ಸ್ಪರ್ಧೆಗಳು ನಡೆಯಲಿದೆ. ಜನವರಿ 11 ರಂದು ನಡೆಯುವ ಸಮಾರಂಭದಲ್ಲಿಮಂಗಳೂರು ಧರ್ಮಪ್ರಾಂತ್ಯದ ಐ ಸಿ ವೈ ಎಂ ನಿರ್ದೇಶಕ ಫಾ.ಅಶ್ವಿನ್ ಲೋಹಿತ್ ಕಾರ್ಡೋಜ ಅಧ್ಯಕ್ಷತೆ ವಹಿಸುವರು.  ದಾಯ್ಜಿವಲ್ಡ್ ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು.  ಚಿತ್ರ ನಟಿ ವೆನ್ಸಿಟಾ ಡಯಾಸ್ ,ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ , ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನ ಪೆÇ್ರಫೆಸರ್ ಡಾ. ಮೆಲ್ವಿನ್ ಫೆರ್ನಾಲ್ ಉಪಸ್ಥಿತರಿರುವರು.  12ರಂದು ನಡೆಯಲಿರುವ ಸಮಾರಂಭದಲ್ಲಿ ಕಾಸರಗೋಡು ವಲಯ ವಿಗಾರ್ ವಾರ್ ಫಾ . ಸ್ಟ್ಯಾನಿ ಪಿರೇರಾ ಅಧ್ಯಕ್ಷತೆ ವಹಿಸುವರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries