ಕಾಸರಗೋಡು : ತಾಲೂಕು ಮಟ್ಟದ ಅದಾಲತ್ ನಲ್ಲಿ ನೋಂದಣಿ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪಲ್ಲಿ ಮತ್ತು ಕ್ರೀಡೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ವಿ ಅಬ್ದುಲ್ ರೆಹಮಾ ನ್ ನೇತೃತ್ವದಲ್ಲಿ ಕಾಸರಗೋಡು ನಗರಸಬಂಗಣದಲ್ಲಿ ನಡೆದ ಅದಾಲತ್‍ನಲ್ಲಿ 119 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. 46 ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಅರ್ಜಿಗಳ ಬಗ್ಗೆ ಎರಡು ವಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕ್ರೀಡಾ ಯೋಗ್ಯತಾ ಪರೀಕ್ಷೆ:
ಪೆÇಲೀಸ್ ಇಲಾಖೆಯಲ್ಲಿ ಪೆÇಲೀಸ್ ಕಾನ್ಸ್‍ಟೇಬಲ್ (ಎ.ಪಿ.ಬಿ) (ಕೆ.ಎ.ಪಿ Iಗಿ) (ಪ್ರವರ್ಗ ಸಂಖ್ಯೆ 593/2023) ಹುದ್ದೆಯ ಕಿರುಪಟ್ಟಿಯಲ್ಲಿ ಒಳಗೊಂಡ ಉದ್ಯೋಗಾರ್ಥಿಗಳ ದೈಹಿಕ ಮಾಪನ ಮತ್ತು ಕ್ರೀಡಾ ಕ್ಷಮತಾ ಪರೀಕ್ಷೆಯು ಕಾಸರಗೋಡು ವಿದ್ಯಾನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಜನವರಿ 7, 8, 9, 10, 13 ಮತ್ತು 14 ರಂದು ಬೆಳಗ್ಗೆ 5.30ರಿಂದ ನಡೆಸಲಾಗುವುದು. ಕ್ರೀಡಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ದಾಖಲೆ ಪರಿಶೀಲನೆ ಅದೇ ದಿನ ಜಿಲ್ಲೆಯ ಕೆ.ಪಿ.ಎಸ್.ಸಿ ಕಚೇರಿಯಲ್ಲಿ ನಡೆಸಲಾಗುವುದು. ಉದ್ಯೋಗಾರ್ಥಿಗಳಿಗೆ ಪೆÇ್ರಫೈಲ್‍ನಲ್ಲಿ ಸಂದೇಶವನ್ನು ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ(04994-230102) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.