ಉಪ್ಪಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಸಂಸ್ಥೆಯ ಉಪ್ಪಳ ಘಟಕದ ವಾರ್ಷಿಕೋತ್ಸವವು ಜ. 12 ಭಾನುವಾರ ಶ್ರೀಹರಿ ಭಜನಾ ಮಂದಿರ ಕುಳೂರು ಮಂದಿರದ ವಠಾರದಲ್ಲಿ ಜರಗಲಿದೆ.
ಸಂಜೆ 6.30ರಿಂದ ಜರಗುವ ವಾರ್ಷಿಕೋತ್ಸವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ “ಶ್ರೀಹರಿ ದರ್ಶನ” ಜರಗಲಿದೆ.
ವಾರ್ಷಿಕೋತ್ಸವ ಸಲುವಾಗಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೇಲು ಕುಳೂರು ಸಭಾಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಅಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಹಿರಿಯ ವೈದಿಕರೂ ಗುರುನರಸಿಂಹ ಯಕ್ಷಬಳಗ ಮೀಯಪದವು ಸಂಸ್ಥೆಯ ಅಧ್ಯಕ್ಷರಾಗಿರುವ ವೇದಮೂರ್ತಿ ಗಣೇಶ ನಾವಡ ಮೀಯಪದವು, ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ಪುರಸ್ಕøತ ರಾಮ ಸಾಲಿಯಾನ್ ಮಂಗಲ್ಪಾಡಿ, ನ್ಯಾಯವಾದಿ ದಾಮೋದರ ಶೆಟ್ಟಿ ಮೂಡಂಬೈಲು, ಕಾಸರಗೋಡು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀಹರಿ ಭಜನಾ ಮಂದಿರದ ಅಧ್ಯಕ್ಷೆ ಕೃಷ್ಣವೇಣಿ ಶೆಟ್ಟಿ ಪಾದೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ಜಲ್ಲಾ ನಿಕಟ ಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಭಾಗವಹಿಸುವರು.
ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ನಿಕಟಪೂರ್ವ ಅಧ್ಯಕ್ಷ ಸುರೇಶ ಶೆಟ್ಟಿ ಬಳಕ ಕುಂಜತ್ತೂರು ಗೌರವ ಉಪಸ್ಥಿತರಿರುವರು.
ಖ್ಯಾತ ಭಾಗವತ ಜಿ ಕೆ ನಾವಡ ಬಾಯಾರು ಅವರಿಗೆ ಗೌರವಾರ್ಪಣೆ ಜರಗಲಿದೆ. ಎಂದು ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಪ್ರಕಟಣೆ ತಿಳಿಸಿದೆ.