ಕಾಸರಗೋಡು: ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಮಾಜಿ ಡಿವೈಎಫೈ ನೇತಾರೆ, ಶಿಕ್ಷಕಿ ಸಚಿತಾ ರೈ ವಿರುದ್ಧ 13.80ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಕೇಸು ಮಂಜೇಶ್ವರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಸಚಿತಾ ರೈ ವಿರುದ್ಧ ವಂಚನಾ ಪ್ರಕರಣದ ಕೇಸುಗಳ ಸಂಖ್ಯೆ 22ಕ್ಕೇರಿದೆ.
ಪೈವಳಿಕೆ ಪಂಚಾಯಿತಿ ಬಾಯಾರು ಸನಿಹದ ಧರ್ಮತ್ತಡ್ಕ ಕರುವಾಜೆ ನಿವಾಸಿ ಮರಿಯತ್ ಸಫೂರ ಅವರ ದೂರಿನ ಮೇರೆಗೆ ಈ ಕೇಸು. ಕಾಸರಗೋಡು ಕೇಂದ್ರಿಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲರ್ಕ್ ಹುದ್ದೆಯ ಭರವಸೆ ನೀಡಿ 13,80000 ರೂ. ಪಡೆದು ವಂಚಿಸಲಾಗಿದೆ. 2023 ಡಿಸೆಂಬರ್‍ನಿಂದ 2024 ಏಪ್ರಿಲ್ ವರೆಗೆ ವಿವಿಧ ಹಂತಗಳಲ್ಲಿ ಈ ಹಣ ಪಾವತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಒಂದುವರೆ ಕೋಟಿಗೂ ಹೆಚ್ಚಿನ ಮೊತ್ತ ವಂಚಿಸಲಾಗಿದೆ. ಪ್ರಸಕ್ತ ಸಚಿತಾ ರೈ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.