HEALTH TIPS

ಕಣಿಪುರದಲ್ಲಿ 14 ರಂದು ಕೊಡಿ-17 ರಂದು ಬೆಡಿ- ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮಂಗಳವಾರದಿಂದ

ಕುಂಬಳೆ: ಇತಿಹಾಸ ಪ್ರಸಿದ್ದ, ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಮಕರ ಸಂಕ್ರಮಣ ದಿನದಂದು(ಜ.14) ಧ್ವಜಾರೋಹಣಗೊಂಡು 18 ರ ವರೆಗೆ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಕಾರ್ಮಿಕತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಂದೊಡಗೂಡಿ ನಡೆಯಲಿದೆ. 

ಜ. 14 ರಂದು ಮಂಗಳವಾರ ಬೆಳಿಗ್ಗೆ 8ರಿಂದ  ಸೋಪಾನ ಸಂಗೀತ (ಅಷ್ಟಪದಿ) ಕೆ.ವಿ. ರಾಜನ್ ಮಾರಾರ್, ಪಯ್ಯನ್ನೂರು ತಂಡದವರಿಂದ  9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಣಿಪುರ ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ,ಸಂಪಿಗೆಕಟ್ಟೆ ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರ, ಕುಂಟಗೇರಡ್ಕ, ಕುಂಬಳೆ ಸೀಮೆಯ ಗಟ್ಟಿ ಸಮಾಜದವರು ದೇವಿನಗರ ಕುಂಬಳೆ,  ಸಾರ್ವಜನಿಕ ಭಕ್ತ ಮಹನೀಯರಿಂದ ನಡೆಯಲಿದೆ. 10 ರಿಂದ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ: ಅನ್ನದಾನ ನಡೆಯಲಿದೆ.ಸಂಜೆ 5 ಕ್ಕೆ ನಡೆ ತೆರೆಯುವುದು, 5.15ರಿಂದ 7.15ರ ತನಕ ಡಿ. ಸಾವಿತ್ರಿ ಕೆ. ಭಟ್ ದೊಡ್ಡಮಾಣಿ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ,  6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ  ರಂಗಪೂಜೆ, ಉತ್ಸವ, ಶ್ರೀ ಭೂತಬಲಿ ನಡೆಯಲಿದೆ.

ಜ.15 ರಂದು ಬೆಳಿಗ್ಗೆ 6.ರಿಂದ ಉತ್ಸವ, ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ  12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 5.15 ರಿಂದ 7.30ರ ತನಕ ರಾಗಮಾಲಿಕಾ ತಂಡ ನೆಲ್ಲಿಕಟ್ಟೆಯವರಿಂದ ಭಕ್ತಿ ರಸಮಂಜರಿ, ಸಂಜೆ 6.30ಕ್ಕೆ ದೀಪಾರಾಧನೆ, 7.30ರಿಂದ ಪೂಜೆ, ಸಣ್ಣದೀಪೋತ್ಸವ, ಶ್ರೀ ಭೂತಬಲಿ ನಡೆಯಲಿದೆ.

ಜ. 16 ರಂದು ಬೆಳಿಗ್ಗೆ 6.ರಿಂದ  ಉತ್ಸವ ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ  ಮಹಾಪೂಜೆ, ಶ್ರೀ ಬಲಿ, ಮಧ್ಯಾಹ್ನ 12. ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ  ವಿಶ್ವರೂಪ ದರ್ಶನ, 6.30ರಿಂದ 8.45 ರ ತನಕ ವಿನಾಯಕ ಹೆಗಡೆ ಮತ್ತು ಬಳಗದವರಿಂದ ಹಿಂದುಸ್ತಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ  9.ರಿಂದ ಪೂಜೆ, ನಡುದೀಪೋತ್ಸವ, ಶ್ರೀ ಬಲಿ ನಡೆಯಲಿದೆ.

ಜ.17 ರಂದು ಬೆಳಿಗ್ಗೆ 6.ರಿಂದ  ಉತ್ಸವ ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ  12.30ಕ್ಕೆ ಮಹಾಪೂಜೆ, 12. ರಿಂದ 2.30ರ ತನಕ ಅನ್ನದಾನ, ಸಂಜೆ 4.ಕ್ಕೆ ನಡೆ ತೆರೆಯುವುದು, 4.30 ರಿಂದ 6ರ ತನಕ ನೀಲೇಶ್ವರದ ನಾದಂ ಆರ್ಕೆಸ್ಟ್ರಾ ತಂಡದವರಿಂದ ಭಕ್ತಿಗಾನ ಮೇಳ, ಸಂಜೆ 6 ರಿಂದ 6.30 ರ ತನಕ ತಾಯಂಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 8 ರಿಂದ ಪೂಜೆ, ಶ್ರೀ ಬಲಿ ಉತ್ಸವ, 9.45 ರಿಂದ ವಿಶೇಷ ಬೆಡಿ ಪ್ರದರ್ಶನ, ಮುಂಜಾನೆ 2.45 ರಿಂದ ಶ್ರೀ ಭೂತಬಲಿ, ಶಯನ, ಕವಾಟ ಬಂಧನ ನಡೆಯಲಿದೆ. 

ಜ.18 ರಂದು ಬೆಳಿಗ್ಗೆ 6 ರಿಂದ ಕವಾಟೋದ್ಘಾಟನೆ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ  12.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.ರಿಂದ 2.30ರ ತನಕ ಅನ್ನದಾನ, ಅಪರಾಹ್ನ 3.30 ರಿಂದ ಉತ್ಸವ ಬಲಿ, ಘೋಷಯಾತ್ರೆ, ಅವಭೃತ ಸ್ನಾನ (ಶೇಡಿಗುಮ್ಮೆಯಲ್ಲಿ), ರಾತ್ರಿ 7.30 ರಿಂದ

ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಲಿದೆ.

ಜ.19 ರಂದು ಬೆಳಿಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10 ರಿಂದ ಶ್ರೀದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಬಲಿ, ಮಧ್ಯಾಹ್ನ 12 ರಿಂದ

ಅನ್ನದಾನ, ಸಂಜೆ  6.30ಕ್ಕೆ ದೀಪಾರಾಧನೆ, ರಾತ್ರಿ 7 ರಿಂದ 8 ತನಕ ಭಜನೆ, ರಾತ್ರಿ 7 ರಿಂದ 8. ತನಕ ಭಜನೆ, 8 ರಿಂದ ಮಹಾಪೂಜೆ, ಶ್ರೀ ಭೂತಬಲಿ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries