HEALTH TIPS

144 ವರ್ಷದ ಬಳಿಕ ನಡೆಯುತ್ತಿದೆ ಮಹಾ ಕುಂಭಮೇಳ: ತ್ರಿವೇಣಿ ಸಂಗಮದ ಕಥೆ ನಿಮಗೆ ಗೊತ್ತಾ?

Top Post Ad

Click to join Samarasasudhi Official Whatsapp Group

Qries

Qries
ಉತ್ತರ ಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಮಹಾ ಕುಂಭಮೇಳಕ್ಕೆ ಚಾಲನೆ ದೊರೆತಿದೆ. ಇಡೀ ವಿಶ್ವವೀಗ ಈ ನಗರದತ್ತ ಗಮನ ಹರಿಸಿದೆ. ಈ ಬಾರಿ ಸುಮಾರು 40 ಕೋಟಿಗೂ ಅಧಿಕ ಭಕ್ತರು ಈ ಪವಿತ್ರ ಆಚರಣೆಯ ಭಾಗವಾಗುವ ನಿರೀಕ್ಷೆ ಇದೆ. ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಭಕ್ತರು ಸ್ನಾನ ಪೂರೈಸಿದ್ದಾರೆ.
ಹಿಂದೂ ಧರ್ಮದ ಬಹುದೊಡ್ಡ ಆಚರಣೆ ಎಂದು ಇದನ್ನು ಕರೆಯಲಾಗಿದೆ. ಮಹಾ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ಆಗಮಿಸುವವರ ಸಂಖ್ಯೆ ಕೋಟಿಗೆ ತಲುಪಿದ್ದು ಇದು ಆರ್ಥಿಕತೆಗೂ ಕೊಡುಗೆ ನೀಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇನ್ನು ಸನಾತನ ಧರ್ಮದ ಪ್ರಕಾರ ಈ ಕುಂಭ ಸ್ನಾನವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ.
12 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ. ಕುಂಭಮೇಳ ಆಚರಣೆಯು ಭಾರತದ 4 ಪವಿತ್ರ ಸ್ಥಳಗಳಿಗೆ ಸಂಬಂಧಿಸಿದೆ. ಹಾಗೆ ಪ್ರತಿಯೊಂದು ನಗರದ ಹಿನ್ನೆಲೆಯಲ್ಲಿ ನದಿಗಳ ಸ್ಥಾನ ಪ್ರಮುಖವಾಗಿದೆ. ಕುಂಭ ಮತ್ತು ಮಹಾಕುಂಭವು ಮೋಕ್ಷವನ್ನು ಸಾಧಿಸುವ ಕೇಂದ್ರಿತ ಹಬ್ಬಗಳಾಗಿವೆ. ಈ ಹಬ್ಬಗಳು ಸಮುದ್ರ ಮಂಥನದ ಸಮಯದಲ್ಲಿ ಭೂಮಿಯ ಮೇಲೆ ಬಿದ್ದ ಅಮೃತದ ಹನಿಗಳನ್ನು ಸ್ಪರ್ಶಿಸಲಿದೆ ಎಂಬ ನಂಬಲಾಗಿದೆ.
ಈ ಸಮುದಲ್ಲಿಯೇ ನದಿಯ ನೀರು ಅಮೃತವಾಗಿ ಬದಲಾಗುತ್ತದೆ. ಹೀಗಾಗಿ ನದಿಯಲ್ಲಿ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ. ಅದರಲ್ಲೂ ತ್ರಿವೇಣಿ ಸಂಗಮದ ಸ್ಥಳ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಗಂಗಾ ನದಿಯ ತಟದಲ್ಲಿರುವ ಉತ್ತರಾಖಂಡ್‌ನ ಹರಿದ್ವಾರ ಶಿಪ್ರಾ ನದಿ ತೀರದಲ್ಲಿರುವ ಮಧ್ಯಪ್ರದೇಶದ ಉಜ್ಜಯಿನಿ ಕ್ಷೇತ್ರ ಗೋದಾವರು ನದಿ ತೀರದಲ್ಲಿರುವ ಮಹಾರಾಷ್ಟ್ರದ ನಾಸಿಕ್‌ ಗಂಗಾ, ಯಮುನಾ, ಸರಸ್ವತಿ ನದಿ ಸಂಗಮದ ಸ್ಥಳವಾದ ಉತ್ತರ ಪ್ರದೇಶದ ಪ್ರಯಾಗರಾಜ್.
ತ್ರಿವೇಣಿ ಸಂಗಮದ ಕಥೆ ಏನು?
ತ್ರಿವೇಣಿ ಸಂಗಮ ಎಂಬುದು ಮೂರು ನದಿಗಳು ಒಂದೇ ಕಡೆಗೆ ಸೇರುವಂತಹ ವಿಶೇಷ ಸ್ಥಳವಾಗಿದೆ. ಇದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿದೆ. ಆದ್ರೆ ಈಗ ಇಲ್ಲಿ ಎರಡು ನದಿಗಳು ಮಾತ್ರ ಸಂಗಮವಾಗುತ್ತಿದೆ. ಗಂಗಾ ಹಾಗೂ ಯಮುನಾ ನದಿಗಳು ಇಲ್ಲಿ ಸಂಗಮವಾಗುತ್ತವೆ. ಆದ್ರೆ ಸರಸ್ವತಿ ನದಿ ಈಗ ಹರಿಯುವುದಿಲ್ಲ. ಆದ್ರೆ ನಂಬಿಕೆಗಳ ಪ್ರಕಾರ ಸರಸ್ವತಿ ಈ ಎರಡೂ ನದಿಗಳಲ್ಲಿ ಲೀನಳಾಗಿ ಮಾನವರ ಪಾಪ ಕಾರ್ಯಗಳ ತೊಳೆಯುವ ತಾಯಿಯಾಗಿದ್ದಾಳೆ ಎಂದು ನಂಬಲಾಗಿದೆ.

ಮಹಾಕುಂಭ ಮೇಳದ ಸಂದರ್ಭದಲ್ಲಿ ಈ ತ್ರಿವೇಣಿ ಸಂಗಮ ಭಕ್ತರಿಂದ ತುಂಬಿರುತ್ತದೆ. ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಮುಕ್ತಿ ಸಿಗಲಿದೆ ಎಂದು ನಂಬಲಾಗಿದೆ. ಹಾಗೆ ಈ ದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಅನಾರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎಂಬ ನಂಬಿಕೆ ಕೂಡ ಇದೆ. 
ಈ ಕುಂಭಮೇಳ ಏಕೆ ವಿಶೇಷ?
ಈ ವರ್ಷ ನಡೆಯುತ್ತಿರುವ ಮಹಾ ಕುಂಭ ಮೇಳ ವಿಶೇಷತೆಯಿಂದ ಕೂಡಿದೆ. ಇದು 144 ವರ್ಷಗಳಿಗೊಮ್ಮೆ ನಡೆಯಲಿರುವ ಕುಂಭವಾಗಿದೆ. ಗ್ರಹಗಳು ಮತ್ತು ನಕ್ಷತ್ರಗಳ ಅಪರೂಪದ ಜೋಡಣೆಯಿಂದಾಗಿ 144 ವರ್ಷಗಳ ನಂತರ ಮಹಾ ಕುಂಭಮೇಳ 2025 ನಡೆಯುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ಈ ದಿನ ಸೂಕ್ತವಾಗಿದೆ ಎಂದು ನಂಬಲಾಗಿದೆ.

ಕುಂಭಮೇಳದಲ್ಲಿ ನಾಲ್ಕು ವಿಧಗಳಿವೆ:
ಕುಂಭಮೇಳ- 4 ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ-6 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ- 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ- 144 ವರ್ಷಗಳಿಗೊಮ್ಮೆ


Below Post Ad


ಜಾಹಿರಾತು














Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries