HEALTH TIPS

ಟ್ರಕ್ ದಾಳಿ, 15 ಜನರ ಹತ್ಯೆ: ಅಮೆರಿಕ ಸೇನೆಯಲ್ಲಿ 13 ವರ್ಷ ಕೆಲಸ ಮಾಡಿದ್ದ ಶಂಕಿತ!

ವಾಷಿಂಗ್ಟನ್: ಅಮೆರಿಕದ ನ್ಯೂ ಅರ್ಲಿನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಸಾವು ಮತ್ತು ಹಲವರನ್ನು ಗಾಯಗೊಳಿಸಿರುವ ಶಂಕಿತ ಶಂಸುದ್ದೀನ್ ಜಬ್ಬಾರ್ ಅಮೆರಿಕ ಸೇನೆಯಲ್ಲಿ 13 ವರ್ಷ ಕೆಲಸ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಸೇನೆ ಜಮಾವಣೆ ಸೇರಿ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ.

ಜಬ್ಬಾರ್ ಏಕಾಂಗಿಯಾಗಿ ಕೃತ್ಯ ಎಸಗಿರುವ ಸಾಧ್ಯತೆ ಕಡಿಮೆ. ಹಾಗಾಗಿ, ಸಹಚರರನ್ನು ಹುಡುಕುತ್ತಿದ್ದೇವೆ ಎಂದು ಫೆಡರಲ್ ಅಧಿಕಾರಿಗಳು ಮತ್ತು ನ್ಯೂ ಅರ್ಲಿನ್ಸ್‌ನ ಸ್ಥಳೀಯ ಪೊಲೀಸರು ಹೇಳಿದ್ದಾರೆ. ಜಬ್ಬಾರ್ ದಾಳಿ ನಡೆಸಿದ ಟ್ರಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಧ್ವಜವಿತ್ತು. ದಾಳಿಯನ್ನು ಭಯೋತ್ಪಾದನೆಯ ಸಂಭಾವ್ಯ ಕೃತ್ಯವೆಂದು ಎಫ್‌ಬಿಐ ಹೇಳಿದೆ.

ಇಸ್ಲಾಮಿಕ್ ಸ್ಟೇಟ್ ಅಥವಾ ಐಸಿಸ್, ಸುನ್ನಿ ಮುಸ್ಲಿಂ ಉಗ್ರಗಾಮಿ ಸಂಘಟನೆಯಾಗಿದ್ದು, ಜಗತ್ತಿನ ಹಲವೆಡೆ ದಾಳಿಗಳನ್ನು ನಡೆಸಿದೆ.

ಘಟನಾ ಸ್ಥಳದಲ್ಲೇ ಪೊಲೀಸರು ಗುಂಡಿನ ದಾಳಿ ನಡೆಸಿ ಜಬ್ಬಾರ್‌ನನ್ನು ಕೊಂದಿದ್ದಾರೆ. ಟೆಕ್ಸಾಸ್ ಪ್ರಜೆಯಾಗಿರುವ ಜಬ್ಬಾರ್ ಏಕೆ ಈ ಕೃತ್ಯ ಎಸಗಿದ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

2007ರಿಂದ 2015ರವರೆಗೆ ಮಾನವ ಸಂಪನ್ಮೂಲ ತಜ್ಞ ಮತ್ತು ಮಾಹಿತಿ ತಂತ್ರಜ್ಞಾನ ತಜ್ಞರಾಗಿ ಜಬ್ಬಾರ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 2020ರವರೆಗೆ ಐಟಿ ಸ್ಪೆಷಲಿಸ್ಟ್ ಆಗಿ ಆರ್ಮಿ ರಿಸರ್ವ್‌ಗೆ ಸೇರಿದ್ದರು, ಸೇವೆಯ ಕೊನೆಯಲ್ಲಿ ಸ್ಟಾಫ್ ಸಾರ್ಜೆಂಟ್ ಹುದ್ದೆಯನ್ನು ಹೊಂದಿದ್ದನು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರುವರಿ 2009ರಿಂದ ಜನವರಿ 2010ರವರೆಗೆ ಅಫ್ಗಾನಿಸ್ತಾನದಲ್ಲಿ ನಿಯೋಜಿಸಲಾಗಿದ್ದ ಅಮೆರಿಕ ಸೇನಾಪಡೆಯಲ್ಲಿ ಜಬ್ಬಾರ್ ಕಾರ್ಯನಿರ್ವಹಿಸಿದ್ದನು.

2004ರಲ್ಲಿ ಜಬ್ಬಾರ್ ನೌಕಾಪಡೆಗೆ ಸೇರ್ಪಡೆಗೊಂಡಿದ್ದನು. ಆದರೆ, ಒಂದು ತಿಂಗಳ ನಂತರ ಅವನನ್ನು ಬಿಡುಗಡೆ ಮಾಡಲಾಗಿತ್ತು ಎಂದು ನೌಕಾಪಡೆಯ ಅಧಿಕಾರಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಬ್ಬಾರ್ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದನು ಎಂದು ಕಾರ್ಪೊರೇಟ್ ದಾಖಲೆಗಳು ತೋರಿಸುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

2020ರಲ್ಲಿ ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ ರಿಯಲ್ ಎಸ್ಟೇಟ್ ವ್ಯವಹಾರದ ಪ್ರಚಾರದ ವಿಡಿಯೊದಲ್ಲಿ, ಶಂಕಿತನಂತೆಯೇ ಕಾಣುತ್ತಿದ್ದ ಅದೇ ಹೆಸರಿನ ವ್ಯಕ್ತಿಯೊಬ್ಬ ಮಿಲಿಟರಿಯಲ್ಲಿನ ಸಮಯವು ತಮಗೆ ಉತ್ತಮ ಸೇವೆಯ ಮಹತ್ವವನ್ನು ಕಲಿಸಿದೆ ಮತ್ತು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವುದನ್ನು ಹೇಳಿಕೊಟ್ಟಿದೆ ಎಂದಿದ್ದನು.

ವಿಡಿಯೊದಲ್ಲಿ ಕಂಡುಬಂದ ವ್ಯಕ್ತಿ ತನ್ನನ್ನು ಟೆಕ್ಸಾಸ್ ಮೂಲದ ಕಂಪನಿಯಾದ ಬ್ಲೂ ಮೆಡೋ ಪ್ರಾಪರ್ಟೀಸ್ ಎಲ್‌ಎಲ್‌ಸಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ಅದರ ಪರವಾನಗಿ 2022ರಲ್ಲೇ ಮುಕ್ತಾಯಗೊಂಡಿದೆ. ಆದರೂ 2023ರವರೆಗೆ ನಾಲ್ಕು ವರ್ಷಗಳ ಕಾಲ ರಿಯಲ್ ಎಸ್ಟೇಟ್ ಮಾರಾಟ ಏಜೆಂಟ್ ಆಗಿ ವ್ಯವಹಾರ ನಡೆಸಿರುವುದು ದಾಖಲೆಗಳ ಮೂಲಕ ಸ್ಪಷ್ಟವಾಗಿದೆ.

ಮತಾಂತರಗೊಂಡಿದ್ದ ಶಂಸುದ್ದೀನ್

ನಾನು ಮತ್ತು ಅಣ್ಣ ಶಂಸುದ್ದೀನ್ ಒಂದೆರಡು ವಾರಗಳ ಹಿಂದೆ ಮಾತನಾಡಿದ್ದೆವು, ಆದರೆ, ಶಂಸುದ್ದೀನ್ ದಾಳಿ ಕುರಿತ ಯಾವುದೇ ಯೋಜನೆ ಬಗ್ಗೆ ಮಾತನಾಡಿರಲಿಲ್ಲ. ಅವರು ಒಳ್ಳೆಯ ವ್ಯಕ್ತಿ, ಸ್ನೇಹಿತ, ಕಾಳಜಿವುಳ್ಳವರಾಗಿದ್ದರು. ಈ ಘಟನೆ ಬಳಿಕ ಆಘಾತಕ್ಕೊಳಗಾಗಿದ್ದೇನೆ ಎಂದು ಶಂಸುದ್ದೀನ್ ಸಹೋದರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾವು ಕ್ರಿಶ್ಚಿಯನ್ನರಾಗಿದ್ದು, ಸಹೋದರ ಕೆಲ ಸಮಯದ ಹಿಂದೆ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದ್ದಾರೆ.

ಜಬ್ಬಾರ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ಜಬ್ಬಾರ್ ಮಾಜಿ ಪತ್ನಿ ಚಾರ್ಲೆಯ ಗಂಡ ಡ್ವೇನ್ ಮಾರ್ಷ್ ಸಹ ಹೇಳಿದ್ದಾರೆ.

ಜಬ್ಬಾರ್ ಮತ್ತು ಚಾರ್ಲೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಒಬ್ಬರು 15, ಮತ್ತೊಬ್ಬರು 20 ವರ್ಷ ವಯಸ್ಸಿನವರಾಗಿದ್ದಾರೆ. ಈ ಘಟನೆ ಬಳಿಕ ಅವರು ಆಘಾತಗೊಂಡಿದ್ದಾರೆ ಎಂದು ಡ್ವೇನ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries