ದುಬೈ: 'ಯೆಮನ್‌ನ ಹೂಥಿ ಬಂಡುಕೋರರು ಏಕಪಕ್ಷೀಯವಾಗಿ 153 ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿದ್ದಾರೆ' ಎಂದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯು ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್- ಹಮಾಸ್ ಬಂಡುಕೋರರ ನಡುವೆ ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ.
ಯೆಮೆನ್‌ನಲ್ಲಿ ತಲೆದೋರಿರುವ ದೀರ್ಘಕಾಲದ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಿ, ಮಾತುಕತೆ ನಡೆಸುವ ನಿಟ್ಟಿನಲ್ಲಿ ಈ ಹಿಂದೆಯೂ ಕೂಡ ಹೂಥಿ ಸಂಘಟನೆಯು ಹಲವು ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿತ್ತು.
2014ರಿಂದಲೂ ಯೆಮೆನ್‌ನ ರಾಜಧಾನಿ ಸನಾ ನಗರ ಹೂಥಿ ಬಂಡುಕೋರರ ಹಿಡಿತದಲ್ಲಿದೆ.
'ಬಂಡುಕೋರರನ್ನು ಬಿಡುಗಡೆಗೊಳಿಸುವ ನಿರ್ಧಾರ ಕೈಗೊಂಡಿರುವ ಮಾತುಕತೆಯ ಮತ್ತೊಂದು ಧನಾತ್ಮಕ ಹೆಜ್ಜೆಯಾಗಿದೆ' ಎಂದು ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ.