ಕಾಸರಗೋಡು: ಉಡುಪಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿನ ತಾಂತ್ರಿಕ ತಕರಾರಿನ ಹಿನ್ನೆಲೆಯಲ್ಲಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳಲ್ಲಿ ಜನವರಿ 8 ರಿಂದ 17ರ ವರೆಗೆ ಸಂಜೆ 6 ರಿಂದ ರಾತ್ರಿ 10 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಭಾಗಶ; ನಿಯಂತ್ರಣ ಏರ್ಪಡಿಸಲಾಗುವುದು ಎಂದು ಕಾಸರಗೋಡು ಎಲೆಕ್ಟ್ರಿಕಲ್ ಸರ್ಕಲ್ ಉಪ ಮುಖ್ಯ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.