ಬದಿಯಡ್ಕ: ಕೊಲ್ಲಂಗಾನ ಸಮೀಪದ ಅರ್ತಲೆ ಎಂಬಲ್ಲಿ ಅನಾದಿ ಕಾಲದ ಹಿಂದೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ಕ್ಷೇತ್ರವೊಂದು ನೆಲೆಗೊಂಡಿದ್ದು ಕಾಲಾಂತರದಲ್ಲಿ ಅದು ನಾಮಾವಶೇಷವಾಗಿತ್ತು ಎಂದು ಜ್ಯೋತಿಷ್ಯ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಸ್ವರ್ಣಚಿಂತನೆಯ ಪ್ರಕಾರ ಅದೇ ಪುಣ್ಯ ಭೂಮಿಯಲ್ಲಿ ಶ್ರೀ ರಕ್ತೇಶ್ವರಿ ನಾಗ ಗುಳಿಗ ಕ್ಷೇತ್ರ ಪುನರ್ ನಿರ್ಮಾಣಗೊಂಡಿದ್ದು ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.18 ಶನಿವಾರ ಆರಂಭವಾಗಿ ಜ.21 ಮಂಗಳವಾರದ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮಗಳು :
ಜ.18ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಸೀಮೆಯ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಇವರ ನೇತೃತ್ವದಲ್ಲಿ 108 ಕಾಯಿ ಮಹಾಗಣಪತಿ ಹೋಮ, ಭಜನೆ, 11 ಗಂಟೆಗೆ ಮಹಾಗಣಪತಿ ಹೋಮ ಪೂರ್ಣಾಹುತಿ, ಉಗ್ರಾಣಮುಹೂರ್ತ, ಭಜನೆ, ಮಧ್ಯಾಹ್ನ ಪ್ರಸಾದ ಭೋಜನ. ಅಪರಾಹ್ನ 3 ಕ್ಕೆ ಶ್ರೀ ಶಾರದಾ ಭಜನಾ ಮಂದಿರ ಕೊಲ್ಲಂಗಾನ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 4.30ಕ್ಕೆ ಕ್ಷೇತ್ರ ಪುರೋಹಿತರಾದ ವೇದಮೂರ್ತಿ ಗಣೇಶ್ ಭಟ್ ಮುಂಡೋಡು ಇವರ ಆಗಮನ, ಪೂರ್ಣಕುಂಭ ಸ್ವಾಗತ, ಆಚಾರ್ಯ ವರಣ, 5 ರಿಂದ ನಾಗಸನ್ನಿಧಿಯಲ್ಲಿ ವೈದಿಕ ವಿಧಿವಿಧಾನಗಳು, ಪ್ರಾರ್ಥನೆ, ರಾಕ್ಷೋಘ್ನ ಹೋಮ,ವಾಸ್ತುಬಲಿ, ರಾತ್ರಿ 9 ಕ್ಕೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಪಾಂಬಾಚಿಕಡವು ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಪ್ರಸಾದ ಭೋೀಜನ ನಡೆಯಲಿದೆ.
ಜ.19ರಂದು ಬೆಳಗ್ಗೆ 6 ಕ್ಕೆ ಗಣಪತಿ ಹೋಮ, ಬಿಂಬ ಶುದ್ಧಿ, ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ 6ರಿಂದ ತ್ರಿಕಾಲ ಪೂಜೆ ಆರಂಭ, ಚಂಡಿಕಾ ಪಾರಾಯಣ ಆರಂಭ. ನಾಗಸನ್ನಿಧಿಯಲ್ಲಿ 10.20ರಿಂದ 10.45ರ ಮೀನಲಗ್ನ ಶುಭಮುಹೂರ್ತದಲ್ಲಿ ನಾಗಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಆಶ್ಲೇಷ ಬಲಿ ಸೇವೆ, ಪ್ರಸಾದ ವಿತರಣೆ. ರಕ್ತೇಶ್ವರಿ ಸನ್ನಿಧಿಯಲ್ಲಿ ಮಧ್ಯಾಹ್ನ ಪ್ರಸಾದ ಭೋಜನ,ಭಜನೆ, 3 ಕ್ಕೆ ಚಾಮುಂಡೇಶ್ವರಿ ಕ್ಷೇತ್ರ ಕಜಳದಿಂದ ಹಾಗೂ 3.30ಕ್ಕೆ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಸೇವಾಸಮಿತಿ ದೇವರಕೆರೆ, ಮೇಗಿನಡ್ಕ ಪರಿಸರದಿಂದ ಹಸಿರುವಾಣಿ ಹೊರೆಕಾಣಿಗೆ ಸಮರ್ಪಣೆ, 3.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ವೈದಿಕ ಕಾರ್ಯಕ್ರಮಗಳು, ಸ್ಥಳೀಯ ಮಕ್ಕಳಿಂದ ನೃತ್ಯ, ರಾತ್ರಿ 8.30ರಿಂದ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ವೈಷ್ಣವಿ ನಾಟ್ಯಾಲಯ ಪುತ್ತೂರು ಇವರ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ನಡೆಯಲಿದೆ.
ಜ.20 ಸೋಮವಾರ ಬೆಳಗ್ಗೆ 5.30ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಕಲಶ ಪ್ರತಿಷ್ಠೆ,ನವಗ್ರಹ ಪೂಜೆ, 8.30ರ ಕುಂಭಲಗ್ನದಲ್ಲಿ ರಕ್ತೇಶ್ವರಿಯ ನೂತನ ಪೀಠ ಪ್ರತಿಷ್ಠೆ, ಆಯುಧಗಳ ಪ್ರತಿಷ್ಠೆ, ಗುಳಿಗನ ಶಿಲಾ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಮಹಾಪೂಜೆ, ನಿತ್ಯನೈಮಿತ್ತಿಕ ನಿರ್ಣಯ ನಡೆಯಲಿದೆ. ಬೆಳಗ್ಗೆ 9ರಿಂದ ಚಂಡಿಕಾ ಹವನ ಪ್ರಾರಂಭ, ಮಧ್ಯಾಹ್ನ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ, 12.15ಕ್ಕೆ ಚಂಡಿಕಾ ಹವನ ಪೂರ್ಣಾಹುತಿ, ಶ್ರೀಗಳಿಂದ ಆಶೀರ್ವಚನ, ಉದ್ಯಮಿ ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಗೌರವ ಉಪಸ್ಥಿತರಿರುವರು. ಮಧ್ಯಾಹ್ನ ಪ್ರಸಾದ ಭೋಜನ, ಭಜನೆ,2.30ರಿಂದ ಉದಯನ್ ವಿಶ್ವಕರ್ಮ ಬಳಗದವರಿಂದ ಭಕ್ತಿಗಾನ ಸುಧಾ, ಸಂಜೆ 5.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 7.30ರಿಂದ ಶ್ರೀ ರಕ್ತೇಶ್ವರೀ ದೈವದ ತೊಡಂಙಲ್, 8.30ರಿಂದ ಪ್ರಸಾದ ಭೋಜನ, 9ರಿಂದ ತುಳುನಾಡ ಗಾನಗಂಧರ್ವ ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದವರಿಂದ ತ್ರಿಶೂಲ್ ಫ್ರೆಂಡ್ಸ್ ಕೊಲ್ಲಂಗಾನ ಪ್ರಾಯೋಜಕತ್ವದಲ್ಲಿ ಸಂಗೀತ ಗಾನ ಸಂಭ್ರಮ. ಜ.21ರಂದು ಬೆಳಗ್ಗೆ 10 ರಿಂದ ರಕ್ತೇಶ್ವರಿ ದೈವದ ಕೋಲ, 12.30ಕ್ಕೆ ಪ್ರಸಾದ ವಿತರಣೆ, ಅನ್ನಪ್ರಸಾದ, ಸಂಜೆ 3 ಗಂಟೆಗೆ ಗುಳಿಗ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.