HEALTH TIPS

ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸಿದ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು!

ನವದೆಹಲಿ;ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ಸೇವೆ ಪ್ರಯಾಣಿಕರಿಗೆ ಇನ್ನೇನು ಶೀಘ್ರದಲ್ಲೇ ದೊರಕಲಿದೆ.

ಸದ್ಯ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಪ್ರಯೋಗಾರ್ಥವನ್ನು ಭಾರತೀಯ ರೈಲ್ವೆ ನಡೆಸುತ್ತಿದೆ.

ಈ ನಡುವೆ ವಿಶೇಷವೆಂದರೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಪ್ರಯೋಗಾರ್ಥ ಸಂಚಾರದಲ್ಲಿ ಗಂಟೆಗೆ ಗರಿಷ್ಠ 180 ಕಿ.ಮೀ ಸಂಚರಿಸಿದೆ.

ಈ ವೇಳೆ ಲೋಕೊಪೈಲೆಟ್ ಕೂರುವ ಕ್ಯಾಬಿನ್‌ನಲ್ಲಿ ನೀರು ತುಂಬಿದ ಗಾಜಿನ ಲೋಟವಿಡಲಾಗಿತ್ತು. ಅದರಿಂದ ಒಂದು ಹಿನಿ ನೀರೂ ಹೊರಚೆಲ್ಲಲಿಲ್ಲ!

ಈ ವಿಡಿಯೊವನ್ನು ರೈಲ್ವೆ ಸಚಿವ ಅಶ್ಚಿನಿ ವೇಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಗಮನ ಸೆಳೆದಿದೆ. ರಾಜಸ್ಥಾನದ ಕೋಟಾ ರೈಲ್ವೆ ವಿಭಾಗದಲ್ಲಿ ಈ ಪ್ರಯೋಗಾರ್ಥ ಸಂಚಾರ ನಡೆದಿದೆ.

ಈ ಮೊದಲು ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುತ್ತದೆ ಎಂದು ಹೇಳಲಾಗಿತ್ತು. ಇದೀಗ ಅದು ಇನ್ನೂ ಜಾಸ್ತಿ ಆಗಿರುವುದು ಹಲವರಿಗೆ ಅಚ್ಚರಿ ತರಿಸಿದೆ.

ಈ ರೈಲು, ಸುಧಾರಿತ ಅಪಘಾತ ಸುರಕ್ಷಾ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರೈಲ್ವೆ ಬೋಗಿಗಳು ಐಷಾರಾಮಿ, ಸಕಲ ಸೌಲಭ್ಯದ ಸಂಚಾರಿ ಅನುಭವ ನೀಡಲಿವೆ.

ರಾತ್ರಿ ವೇಳೆ 800-1,200 ಕಿ.ಮೀ ದೂರ ಕ್ರಮಿಸಲು ಅನುಕೂಲವಾಗುಂತೆ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೂಪಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಲಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ದರಕ್ಕೆ ಸರಿಸಮವಾಗಿ ಈ ರೈಲಿನ ಪ್ರಯಾಣ ದರ ಇರಲಿದೆ ಎಂದು ವೈಷ್ಣವ್ ಹೇಳಿದ್ದರು

ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ಜೊತೆಗೆ ತ್ಯಾಜ್ಯದ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಈ ವರ್ಷಾಂತ್ಯಕ್ಕೆ ಭಾರತ್ ಸ್ಲೀಪರ್ ಕೋಚ್ ರೈಲುಗಳ ಸೇವೆ ಆರಂಭವಾಗಬಹುದು ಎನ್ನಲಾಗಿದೆ.


ವಂದೇ ಭಾರತ್‌ ಸ್ಲೀಪರ್‌ ವಿಶೇಷತೆಗಳು

l ನಿದ್ರಿಸಲು ಆರಾಮದಾಯಕ ಮಂಚ

l ಅತ್ಯುತ್ತಮ ಒಳಾಂಗಣ ವಿನ್ಯಾಸ

l ಏರೋಡೈನಾಮಿಕ್ ಬಾಹ್ಯನೋಟ

l ಅಗ್ನಿ ಅಪಾಯದ ಮಟ್ಟ ಅತಿಕಡಿಮೆ

l ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ

l ಸ್ವಯಂಚಾಲಿತ ಬಾಗಿಲುಗಳು

l ಬೋಗಿಗಳ ಮಧ್ಯೆ ಸೆನ್ಸರ್ ಆಧಾರಿತ ಬಾಗಿಲುಗಳು

l ರೈಲಿನ ಕೊನೆ ಬೋಗಿಯಲ್ಲಿ ದೂರದಿಂದಲೇ ಕಾರ್ಯ
ನಿರ್ವಹಿಸುವ ಬೆಂಕಿ ತಡೆಗೋಡೆ ಬಾಗಿಲುಗಳು

l ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ

l ಚಾಲನಾ ಸಿಬ್ಬಂದಿಗೆ ಶೌಚಾಲಯ

l ಪ್ರಥಮ ದರ್ಜೆ ಎಸಿ ಕಾರಿನಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ

l ಯುಎಸ್‌ಬಿ ಚಾರ್ಜಿಂಗ್, ರೀಡಿಂಗ್ ಲೈಟ್

l ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ

l ವಿಶಾಲವಾದ ಲಗೇಜ್ ಕೊಠಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries