ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರ ದಲ್ಲಿ ಜ. 19ರಿಂದ 24ರ ತನಕ 351 ವರ್ಷಗಳ ಬಳಿಕ ಐತಿಹಾಸಿಕ ಪೆರುಂಕಳಿಯಾಟ್ಟ ಮಹೋತ್ಸವ ನಡೆಯಲಿದೆ.
ಶತಮಾನಗಳ ಇತಿಹಾಸ ಪರಂಪರೆಯನ್ನು ಹೊಂದಿರುವ ಆದೂರು ಶ್ರೀ ಭಗವತಿ ದೈವಸ್ಥಾನದಲ್ಲಿ ಪೆರುಂಕಳಿಯಾಟ್ಟ ಮಹೋತ್ಸವ ಮಹತ್ವವನ್ನು ಹೊಂದಿದೆ. ಆರು ರಾತ್ರಿ ಮತ್ತು ಆರು ಹಗಲು ಒಟ್ಟು ಆರು ದಿನ ನಡೆಯುವ ಊರಿನ ಉತ್ಸವವಾಗಿ ಪೆರುಂಕಳಿಯಾಟ ವೈವಿಧ್ಯಮಯವಾಗಿ ನಡೆಯಲಿದೆ.
ಜ. 19ರಂದು ಭಾನುವಾರ ಬೆಳಿಗ್ಗೆ 7:30ಕ್ಕೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಶ್ರೀ ಸನ್ನಿಧಿಗೆ ದೀಪವನ್ನು ವಾದ್ಯ ಘೋಷಗಳೊಂದಿಗೆ ತರಲಾಗುವುದು. ಬಳಿಕ ಬ್ರಹ್ಮ ಶ್ರೀ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮ ಶ್ರೀ ಕುಂಟಾರು ರವೀಶ ತಂತ್ರಿಯವರಿಗೆ ಪೂರ್ಣ ಕುಂಭದ ಸ್ವಾಗತ, ಬೆಳಿಗ್ಗೆ 10:21ರಿಂದ 12:22ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣದೊಂದಿಗೆ ಉತ್ಸವ ಆರಂಭ. ಮಧ್ಯಾಹ್ನ ನಂತರಹ ಪೊನ್ನಕ್ಕಲ್ ಭಗವತಿ, ಉಚ್ಚೂಳಿಕಡವತ್ ಭಗವತಿ, ಆಯಿಟ್ಟಿ ಭಗವತಿ ಎಂಬ ಮೂವರು ಭಗವತಿಗಳ ತೊಡಂಙಲ್, ವೈರಾಪುರತ್-ವಡಕ್ಕಾನ್ ಕೋಡಿ ದೈವದ ವೆಳ್ಳಾಟ, ಅಸುರಾಳನ್ ದೈವದ ವೆಳ್ಳಾಟ, ಕುಂಟಾರು ಚಾಮುಂಡಿ ದೈವದ ತೊಡಂಙಲ್, ಕುಲ್ಲಂಗರ ಚಾಮುಂಡಿ ತೊಡಂಙಲ್, ಮೇಚೇರಿ ಚಾಮುಂಡಿ ತೊಡಂಙಲ್, ವಿಷ್ಣುಮೂರ್ತಿ ತೊಡಂಙಲ್, ಭಗವತಿ ದೈವದ ಅಂದಿತೋಠಂ, ಮಲಂಗರ ಚಾಮುಂಡಿಯ ತೊಡಂಙಲ್, ವಿಷ್ಣುಮೂರ್ತಿ ತೊಡಂಙಲ್, ಭಗವತೀ ದೈವದ ಅಂದಿತೋಠಂ, ಮಲಂಗರ ಚಾಮುಂಡಿಯ ತೊಡಂಙಲ್ ನಡೆಯಲಿದೆ.
ಜ. 20ರಂದು ಸೋಮವಾರ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ ನಡೆಯಲಿದೆ. ಜ. 21ರಂದು ಮಂಗಳವಾರ ಪೂರ್ವಾಹ್ನ 3:ಕ್ಕೆ ಪನ್ನಿಕ್ಕುಲತ್ ಚಾಮುಂಡಿ ದೈವದ ಕೋಲ, ಅಣ್ಣಪ್ಪ ಪಂಜುರ್ಲಿಯ ಕೋಲ, ನಂತರ ವಿವಿಧ ದೈವಗಳ ಕೋಲ ನಡೆಯಲಿದೆ. ಜ. 22ರಂದು ಬುಧವಾರ ಪೂರ್ವಾಹ್ನ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ ನಡೆಯಲಿದೆ. ಜ. 23ರಂದು ಗುರುವಾರ ಪೂರ್ವಾಹ್ನ 5ರಿಂದ ಪುದಿಯ ಭಗವತೀ ದೈವದ ಕೋಲ, ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ ನಡೆಯಲಿದೆ. ಜ. 24ರಂದು ಶುಕ್ರವಾರ ಪೂರ್ವಾಹ್ನ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ಅಸುರಾಳನ್ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ ಹಾಗೂ ಸಾವಿರಾರು ಭಕ್ತ ಜನರನ್ನು ಸಾಕ್ಷ್ಯವಾಗಿರಿಸಿಕೊಂಡು ಮಾಂಗಳ್ಯ ಕನ್ಯೆಕೆಯರೊಂದಿಗೆ ಶುಭ ಮುಹೂರ್ತದಲ್ಲಿ ಸ್ಥಾನಿಕ ಆಚಾರ್ಯ ವಾರೀಸುದಾರರ ಸೇರಿಕೊಂಡು 351 ವರ್ಷಗಳ ನಂತರ ಒಂದೇ ಪೀಠದಲ್ಲಿ ಆಸೀನರಾಗಿರುವ ನಿತ್ಯ ಕನ್ಯೆಕೆಯರಾಗಿರುವ ಶ್ರೀ ಪುನ್ನಕ್ಕಲ್ ಭಗವತೀ, ಶ್ರೀ ಉಚ್ಚುಳಿಕಡವ್ ಭಗವತೀ, ಶ್ರೀ ಆಯಿಟ್ಟ, ಭಗವತೀಯವರ ತಿರುಮುಡಿ ಏರುವುದು, ಕಾಸರಗೋಡು ಕಣ್ಣೀರತ್ ತರವಾಡು, ಕರೆಯಪ್ಪನ್ ಕಿರ್ಯ0 ಭಂಡಾರ ಮನೆ ತರವಾಡು, ಮೂತಿಲ್ಲಾಂ ತರವಾಡು ಎಂಬ ಮೂರು ತರವಾಡುಗಳಿಂದ ಮೀನಮೃತಾಕ್ಕೆ ಬೇಕಾದ ಮೀನ್ ಕೋವಾ ಮತ್ತು ಕಲಶ ಮೆರವಣಿಗೆ, ರಾತ್ರಿ 11 ಕ್ಕೆ ಧ್ವಜಾವರೋಹಣ ನಡೆಯಲಿದೆ.
ಜ. 27 ಮತ್ತು ಜ. 28ರಂದು ಕಾಸರಗೋಡು ನೆಲಿಕುಂಜೆ ಕಡಪ್ಪರ ಬಬ್ಬರಿಯ ದೈವಸ್ಥಾನದಲ್ಲಿ ಬಬ್ಬರಿಯ, ಮಣಿಚಿ, ಗುಳಿಗ ದೈವಗಳ ಕೋಲ, ಪ್ರದೇಶದ ಆಚರಣೆ ಪ್ರಕಾರ ನಡೆಸಿ ಸಮಾರೋಪಗೊಳ್ಳಲಿದೆ.
ಸಮಸ್ತ ಭಕ್ತಾದಿಗಳ ನಿರೀಕ್ಷೆಯಂತೆ ನೂರಾರು ವರ್ಷಗಳ ನಂತರ ಜರಗಲಿರುವ ಈ ಪೆರುಂಕಳಿಯಾಟ್ಟ ಮಹೋತ್ಸವಕ್ಕೆ ಕೆಲವು ವರ್ಷಗಳಿಂದ ಪೂರ್ವ ತಯಾರಿಗಳು ಸಂಭ್ರಮದಿಂದ ನಡೆಯುತ್ತಿದ್ದು, ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಕ್ಷೇತ್ರದಲ್ಲಿ ಹಾಗೂ ಆಸುಪಾಸಿನಲ್ಲಿ ನಡೆಯುತ್ತಿದೆ.