ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ. 27ರಿಂದ ಎ. 7ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲಿರುವವರ ಬೃಹತ್ ಸಮಾವೇಶ ಜ. 19ರಂದು ಮಧ್ಯಾಹ್ನ 3ಕ್ಕೆ ದೇವಾಲಯ ವಠಾರದಲ್ಲಿ ಜರುಗಲಿರುವುದು. ಸ್ವಯಂಸೇವಕರಾಗಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.