HEALTH TIPS

ಭಾರತೀಯ ರೈಲ್ವೆ: ಲವೆಲ್‌-1 ಹುದ್ದೆಗಳ ನೇಮಕಾತಿಗಿಲ್ಲ ಕನಿಷ್ಠ ವಿದ್ಯಾರ್ಹತೆ ಮಿತಿ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಲೆವಲ್‌-1 (ಹಿಂದಿನ ಗ್ರೂಪ್‌- ಡಿ) ನೇಮಕಾತಿಗೆ ಇದ್ದ ಕನಿಷ್ಠ ವಿದ್ಯಾರ್ಹತೆಯ ಮಾನದಂಡಗಳನ್ನು ರೈಲ್ವೆ ಮಂಡಳಿ ಸಡಿಲಿಸಿದೆ.

ಹೊಸ ಮಾನದಂಡಗಳ ಪ್ರಕಾರ, 10 ನೇ ತರಗತಿ ಪಾಸಾದ ಅಥವಾ ಐಟಿಐ ಡಿಪ್ಲೊಮಾ ಅಥವಾ ತತ್ಸಮಾನ ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರುವವರು ಲೆವಲ್‌-1 ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ತಾಂತ್ರಿಕ ವಿಭಾಗಕ್ಕೆ 10 ತರಗತಿ ಪಾಸಾದವರು ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರುವವರು ಅಥವಾ ಐಟಿಐ ಡಿಪ್ಲೊಮಾ ಪೂರ್ಣಗೊಳಿಸಿರುವುದು ಕಡ್ಡಾಯವಾಗಿತ್ತು.

ಲೆವೆಲ್-1 ಹುದ್ದೆಗಳಲ್ಲಿ ವಿವಿಧ ಇಲಾಖೆಗಳಿಗೆ ಸಹಾಯಕರು, ಪಾಯಿಂಟ್‌ಮೆನ್ ಮತ್ತು ಟ್ರ್ಯಾಕ್ ನಿರ್ವಾಹಕರನ್ನು ಒಳಗೊಂಡಿವೆ.

ರೈಲ್ವೆ ನೇಮಕಾತಿ ಮಂಡಳಿ ಇತ್ತೀಚೆಗೆ ಲೆವಲ್‌ -1 ಹುದ್ದೆಗೆ ಖಾಲಿ ಇರುವ 32 ಸಾವಿರ ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇದರ ನೇಮಕಾತಿ ಪ್ರಕ್ರಿಯೆ ಜ.23 ರಿಂದ ಫೆ.22ರವರೆಗೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries