ಅಹಮದಾಬಾದ್: ಗುಜರಾತ್ ಪೊಲೀಸರು 2021 ರಿಂದ ಇಲ್ಲಿವರೆಗೆ 16,155 ಕೋಟಿ ಮೌಲ್ಯದ 87,607 ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾದಕ ದ್ರವ್ಯ ರಿವಾರ್ಡ್ ನೀತಿ(ಎನ್ ಆರ್ ಪಿ)ಯಡಿಯಲ್ಲಿ ತೀವ್ರಗೊಂಡ ಕಾರ್ಯಚರಣೆಗಳನ್ನು ಎತ್ತಿ ತೋರಿಸುತ್ತದೆ.
ಮಾದಕವಸ್ತು ಕಳ್ಳಸಾಗಣೆ ನಿಗ್ರಹಿಸಲು ಜಾರಿಗೆ ತರಲಾದ ಎನ್ ಆರ್ ಪಿ ನೀತಿಯು 1985 ರ NDPS ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಮಾದಕವಸ್ತು ಪತ್ತೆಯನ್ನು ಹೆಚ್ಚಿಸಿದೆ. ಈ ಕ್ರಮದಲ್ಲಿ 2,500 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಡಿಜಿಪಿ ಸಮಿತಿಯು 64 ವ್ಯಕ್ತಿಗಳಿಗೆ 51,202 ರೂ ಬಹುಮಾನ ಘೋಷಿಸಿದೆ.
ಏತನ್ಮಧ್ಯೆ, ಎಸಿಎಸ್, ಗೃಹ ಮಟ್ಟದ ಸಮಿತಿಯು 169 ಜನರಿಗೆ 6.36 ಕೋಟಿ ರೂ. ಮಂಜೂರು ಮಾಡಿದೆ. ಇದಲ್ಲದೆ, 737 ವ್ಯಕ್ತಿಗಳಿಗೆ 5.13 ಕೋಟಿ ರೂ. ಬಹುಮಾನ ನೀಡುವ ಪ್ರಸ್ತಾಪವನ್ನು ಎನ್‌ಸಿಬಿ ಸಮಿತಿ ಪರಿಶೀಲಿಸುತ್ತಿದೆ.
1985 ರ NDPS ಕಾಯ್ದೆಯು ಮಾಹಿತಿದಾರರಿಗೆ ವಶಪಡಿಸಿಕೊಂಡ ಮಾದಕ ವಸ್ತುಗಳ ಮಾರುಕಟ್ಟೆ ಮೌಲ್ಯದ ಶೇ. 20ರ ವರೆಗೆ ಲಾಭದಾಯಕ ಬಹುಮಾನವನ್ನು ನೀಡಲಾಗುತ್ತಿದೆ. ಈ ಮೂಲಕ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಸಹಾಯ ಮಾಡುವ ಸರ್ಕಾರಿ ನೌಕರರು ತಮ್ಮ ವೃತ್ತಿಜೀವನದಲ್ಲಿ 20 ಲಕ್ಷ ರೂ.ಗಳವರೆಗೆ ಬಹುಮಾನ ಗಳಿಸಬಹುದು. ಪ್ರತಿ ಪ್ರಕರಣಕ್ಕೆ 2 ಲಕ್ಷ ರೂ. ಸೀಮಿತಗೊಳಿಸಲಾಗಿದೆ. ಕಚೇರಿ ಕೆಲಸದಲ್ಲಿ ಸಹಾಯ ಮಾಡುವ ಖಾಸಗಿ ವ್ಯಕ್ತಿಗಳಿಗೆ ಪ್ರತಿ ಪ್ರಕರಣಕ್ಕೆ ರೂ. 2,500 ನೀಡಲಾಗುತ್ತದೆ.
NDPS ಕಾಯ್ದೆಯಡಿಯಲ್ಲಿ ಮಾಹಿತಿದಾರರಿಗೆ ನೀಡುವ ಬಹುಮಾನಗಳು ಅವರು ಒದಗಿಸುವ ಮಾಹಿತಿಯ ನಿಖರತೆ ಮತ್ತು ಮಹತ್ವವನ್ನು ಅವಲಂಬಿಸಿರುತ್ತದೆ. ಜೊತೆಗೆ ಬಂಧನದ ಸಮಯದಲ್ಲಿ ಅವರು ಎದುರಿಸುವ ಅಪಾಯಗಳನ್ನು ಅವಲಂಬಿಸಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ, ಯಶಸ್ವಿ ವಶಪಡಿಸಿಕೊಳ್ಳುವಿಕೆಯು ಅವರ ಪ್ರಯತ್ನ, ಕಾರ್ಯಾಚರಣೆಯ ಅಪಾಯಗಳು, ಜಾಗರೂಕತೆ ಮತ್ತು ಸಂಬಂಧಿತ ಬಂಧನಗಳ ಆಧಾರದ ಮೇಲೆ ನೀಡಲಾಗುತ್ತದೆ.
ಗುಜರಾತ್‌ನ ಯುವಕರನ್ನು ರಕ್ಷಿಸಲು ಮತ್ತು ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡಲು ಮಾದಕವಸ್ತು ಬಹುಮಾನ ನೀತಿಯು ಒಂದು ಪ್ರಮುಖ ಕ್ರಮವಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರು ಹೇಳಿದ್ದಾರೆ.