ಕಾಸರಗೋಡು: ಹೆಚ್ಚುವರಿ ಬೋಗಿ ಅಳವಡಿಸಿರುವ ಕಾಸರಗೋಡು-ತಿರುವನಂತಪುರ ವಂದೇಭಾರತ್ ರೈಲು ಸಏವೆ ಜ. 10ರಿಂದ ಆರಂಭಗೊಳ್ಳಳಿದೆ.ಕಾಸರಗೋಡಿನಿಂದ ಕೋಟ್ಟಾಯಂ ಹಾದಿಯಾಗಿ ತಿಉವನಂತಪುರ ಸಂಚರಿಸುವ ಈ ರೈಲು ಗಾಡಿ ಬೆಳಗ್ಗೆ 5.15ಕ್ಕೆ ತಿರುವನಂ<ತಪುರದಿಂದ ಹೊರಟು, ಮಧ್ಯಾಹ್ನ 1.20ಕ್ಕೆ ಕಾಸರಗೋಡು ತಲುಪಲಿದೆ.ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಿಂದ ಹೊರಟು, ರಾತ್ರಿ 10.40ಕ್ಕೆ ತಿರುವನಂತಪುರ ತಲುಪಲಿದೆ. ಪ್ರಸಕ್ತ 16ಬೋಗಿ ಒಳಗೊಂಡ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ನಾಲ್ಕು ಬೋಗಿ ಹೆಚ್ಚುವರಿಯಾಗಿ ಅಳವಡಿಸಲಾಗಿದೆ.
ಹದಿನಾರು ಬೋಗಿಗಳ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ 1024 ಆಸನ ವ್ಯವಸ್ಥೆಯಿದ್ದು, 312ಸೀಟುಗಳ ಹೆಚ್ಚಳದೊಂದಿಗೆ 1336 ಮಂದಿ ಪ್ರಯಾಣಿಕರಿಗೆ ಸಂಚರಿಸಬಹುದಾಗಿದೆ. ಈಗಾಗಲೇ ಕೇರಳದಲ್ಲಿ ವಂದೇಭಾರತ್ ರೈಲು ಉತ್ತಮ ಲಾಭದೊಂದಿಗೆ ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಬೋಗಿಗಳ ಸಂಖ್ಯೆಯನ್ನೂ ಹೆಚ್ಚಳಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯನ್ವಯ ಚೆನ್ನೈನ ಇಂಟಗ್ರೆಲ್ ಕೋಚ್ ಫ್ಯಾಕ್ಟರಿಯಲ್ಲಿ ನೂತನ ಬೋಗಿಗಳನ್ನುನಿರ್ಮಿಸಲಾಗಿದೆ.